Rahul Dravid: ಭಾರತ ಗೆದ್ದ ತಕ್ಷಣ ಡಗೌಟ್​ನಲ್ಲಿದ್ದ ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ

India vs Pakistan, T20 World Cup 2022: ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಪಡೆ 4 ವಿಕೆಟ್​ಗಳಿಂದ ಗೆದ್ದು ಬೀಗಿತು. ಈ ಸಂದರ್ಭ ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದರು ನೋಡಿ.

Rahul Dravid: ಭಾರತ ಗೆದ್ದ ತಕ್ಷಣ ಡಗೌಟ್​ನಲ್ಲಿದ್ದ ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ
Rahul Dravid IND vs PAK
Follow us
TV9 Web
| Updated By: Vinay Bhat

Updated on:Oct 24, 2022 | 11:00 AM

ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ನಡೆದ ರಣ ರೋಚಕ ಪಂದ್ಯಗಳ ಸಾಲಿಗೆ ಭಾನುವಾರ ಟಿ20 ವಿಶ್ವಕಪ್​ನಲ್ಲಿ (T20 World Cup) ಜರುಗಿದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ಕೂಡ ಸೇರ್ಪಡೆಯಾಗುವುದು ಖಚಿತ. ಟಿ20 ಮಾದರಿಯ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಕೂಡ ಪೂರ್ಣ ಓವರ್​ಗಳ ಪಂದ್ಯವನ್ನು ಆಡಿ ಅದರಲ್ಲಿ ಚೇಸಿಂಗ್ ಮಾಡಿದ ತಂಡ ಗೆದ್ದಿರುವುದು ಬೆರಳಣಿಕೆಯಷ್ಟು ಮಾತ್ರ. ಭಾರತಪಾಕ್ ಪಂದ್ಯ ಕೂಡ ಈ ಸಾಲಿಗೆ ಸೇರಿತು. ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳಿಂದ ಗೆದ್ದು ಬೀಗಿತು. ಈ ಸಂದರ್ಭ ಕೋಚ್ ರಾಹುಲ್ ದ್ರಾವಿಡ್ (Rahul Dravid) ಏನು ಮಾಡಿದರು ನೋಡಿ.

ಭಾರತದ ಬ್ಯಾಟಿಂಗ್ ಬಳಗಕ್ಕೆ ಗುರಿ ಬೆನ್ನಟ್ಟಲು ಸಾಧ್ಯವಾಗದಷ್ಟು ದೊಡ್ಡ ಮೊತ್ತವೇನು ಇರಲಿಲ್ಲ. ಆದರೆ, ದೊಡ್ಡ ಮೈದಾನ ಆಗಿದ್ದರಿಂದ ಹಾಗೂ ಚೆಂಡು ಹೆಚ್ಚು ಸೀಮ್ ಮತ್ತು ಸ್ವಿಂಗ್ ಆಗಿದ್ದರಿಂದ ಪಂದ್ಯ ರೋಚಕತೆ ಪಡೆದುಕೊಂಡಿತು. ಅಂತಿಮ 6 ಎಸೆತದಲ್ಲಿ ಭಾರತಕ್ಕೆ ಗೆಲ್ಲಲು 16 ರನ್​ಗಳು ಬೇಕಾಯಿತು. ಆದರೆ, ಮೊಹಮ್ಮದ್‌ ನವಾಝ್‌ ಮೊದಲ ಎಸೆತದಲ್ಲೇ ಹಾರ್ದಿಕ್‌ ಪಾಂಡ್ಯ ಔಟಾದರು. ಕೊನೆಯ 2 ಎಸೆತಗಳಲ್ಲಿ 2 ರನ್‌ ಬೇಕಾಯಿತು. ಈ ಸಂದರ್ಭದಲ್ಲಿ ದಿನೇಶ್‌ ಕಾರ್ತಿಕ್‌ ಸ್ಟಂಪ್‌ಔಟ್‌ ಆದರು. ಒಂದು ಎಸೆತದಲ್ಲಿ 2 ರನ್ ಬೇಕಿದ್ದಾಗ ಕೊನೆಯ ಬಾಲ್ ವೈಡ್ ಆದರೆ, ನಂತರ ಎಸೆತದಲ್ಲಿ ಆರ್‌. ಅಶ್ವಿನ್‌ ವಿನ್ನಿಂಗ್ ಶಾಟ್ ಬಾರಿಸಿದರು.

ಇದನ್ನೂ ಓದಿ
Image
IND vs PAK: ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು; ವಿಡಿಯೋ ನೋಡಿ
Image
IND vs PAk: ಭಾರತ ವಿರುದ್ಧ ಸೋತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆದ ಪಾಕಿಸ್ತಾನ: ಇಲ್ಲಿದೆ ನೋಡಿ ಮೀಮ್ಸ್
Image
Hardik Pandya: ಗೆದ್ದ ಖುಷಿಯಲ್ಲಿ ಮಾತನಾಡುತ್ತಾ ಮೈದಾನದಲ್ಲೇ ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ: ಏನು ಹೇಳಿದ್ರು ಕೇಳಿ
Image
Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಆಡಿದ ಮಾತುಗಳೇನು ಗೊತ್ತೇ?

ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಡಗೌಟ್​ನಲ್ಲಿ ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಕೋಚ್ ರಾಹುಲ್ ದ್ರಾವಿಡ್ ತಕ್ಷಣ ಎದ್ದು ನಿಂತರು. ಅಲ್ಲಿದ್ದ ಸಹ ಸಿಬ್ಬಂದಿಗಳಿಗೆ ಯೆಸ್ ಯೆಸ್ ಎಂದು ಕೈಕೊಡುತ್ತ ಆಕ್ರೋಶದಿಂದ ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

View this post on Instagram

A post shared by ICC (@icc)

ಕೊಹ್ಲಿಯನ್ನು ಅಪ್ಪಿಕೊಂಡ ರಾಹುಲ್ ದ್ರಾವಿಡ್:

ಟೀಮ್ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಜಯಕ್ಕೆ ಕಾರಣವಾದ ವಿರಾಟ್ ಕೊಹ್ಲಿ ಅವರನ್ನು ಆಟಗಾರರು ಮೈದಾನಕ್ಕೆ ಓಡಿ ಬಂದು ಅಪ್ಪಿಕೊಂಡರು. ರೋಹಿತ್ ಶರ್ಮಾ ತಬ್ಬಿಕೊಂಡು ಎತ್ತಿ ಸಂಭ್ರಮಿಸಿದರು. ಕೋಚ್ ರಾಹುಲ್ ದ್ರಾವಿಡ್ ಕೂಡ ಕೊಹ್ಲಿಯ ಪ್ರದರ್ಶನಕ್ಕೆ ಫುಲ್ ಖುಷ್ ಆಗಿದ್ದರು. ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನತ್ತ ಆಗಮಿಸುತ್ತಿದ್ದಂತೆ ದ್ರಾವಿಡ್ ಅವರನ್ನು ಬಹಳ ಹೊತ್ತು ತಬ್ಬಿಕೊಂಡು ಅಭಿನಂದಿಸಿದರು. ಈ ವಿಡಿಯೋವನ್ನು ಐಸಿಸಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.

ವಿಶ್ವ ದಾಖಲೆ ನಿರ್ಮಿಸಿದ ಭಾರತ:

ಈ ಗೆಲುವಿನ ಮೂಲಕ ಟೀಮ್ ಇಂಡಿಇಯಾ 2021 ರ ಟಿ20 ವಿಶ್ವಕಪ್​ ಸೋಲಿನ ಸೇಡನ್ನು ತೀರಿಸಿಕೊಂಡಿತು. ಜೊತೆಗೆ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 2003 ರಲ್ಲಿ 38 ಪಂದ್ಯಗಳನ್ನು ಆಸೀಸ್ ಗೆದ್ದಿತ್ತು. ಇದಾದ ಬಳಿಕ ಯಾವುದೇ ತಂಡ ಒಂದೇ ವರ್ಷ ಇಷ್ಟೊಂದು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಭಾರತ ಒಟ್ಟು 39 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.

Published On - 11:00 am, Mon, 24 October 22

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ