ಇದು ನನ್ನ ಟಿ20I ವೃತ್ತಿಬದುಕಿನ ಶ್ರೇಷ್ಠ ಇನಿಂಗ್ಸ್ ಎನ್ನಬಹುದು. ಇದಕ್ಕೂ ಮೊದಲು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಎದುರು 52 ಎಸೆತಗಳಲ್ಲಿ 82 ರನ್ ಬಾರಿಸಿದ್ದು ನನ್ನ ಬೆಸ್ಟ್ ಇನಿಂಗ್ಸ್ ಆಗಿತ್ತು. ಆದರೆ, ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಹಾಗೂ ತಂಡಕ್ಕೆ ಅಗತ್ಯವಿದ್ದಾದ ಸಂಕಷ್ಟದ ಸಂದರ್ಭದಲ್ಲಿ ಹೊರಬಂದ ಈ ಆಟ ನಿಜಕ್ಕೂ ನನ್ನ ಶ್ರೇಷ್ಠ ಇನಿಂಗ್ಸ್ ಎಂದು ಹೇಳಬಹುದು - ವಿರಾಟ್ ಕೊಹ್ಲಿ.