- Kannada News Photo gallery Cricket photos babar azam become the 2nd pakistan captain to golden duck in world cup against india t20 world cup
IND vs PAK: 30 ವರ್ಷಗಳ ಬಳಿಕ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ಬಾಬರ್..!
IND vs PAK: 30 ವರ್ಷಗಳ ನಂತರ, ಪಾಕಿಸ್ತಾನದ ನಾಯಕರೊಬ್ಬರು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಖಾತೆ ತೆರೆಯದೆ ಔಟ್ ಆಗಿರುವುದು ಇದು ಮೊದಲನೇ ಬಾರಿ.
Updated on:Oct 24, 2022 | 2:01 PM

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆಲ್ಲುವಲ್ಲೂ ವಿಫಲರಾದ ನಾಯಕ ಬಾಬರ್ ಅಜಮ್ ಬ್ಯಾಟಿಂಗ್ನಲ್ಲೂ ಶೂನ್ಯ ಸುತ್ತಿದ್ದರು. ಈ ಮೂಲಕ ತಮ್ಮ ಹೆಸರಲ್ಲಿ ಬೇಡದ ದಾಖಲೆ ಬರೆದುಕೊಂಡರು.

ಈ ಪಂದ್ಯದಲ್ಲಿ ಮೊದಲ ಎಸೆತದಲ್ಲಿಯೇ ಬಾಬರ್ ಔಟಾದರು. ಅರ್ಷದೀಪ್ ಎಸೆದಲ್ಲಿ ಬಾಬರ್, ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಬಾಬರ್ ರಿವ್ಯೂ ತೆಗೆದುಕೊಂಡರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರೊಂದಿಗೆ ಬಾಬರ್ ಇಮ್ರಾನ್ ಖಾನ್ ಅವರ ಈ ಕಳಪೆ ದಾಖಲೆಯನ್ನು ಸರಿಗಟ್ಟಿದರು.

ಇಮ್ರಾನ್ ಖಾನ್ ನಂತರ ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಖಾತೆ ತೆರೆಯದೆ ಔಟಾದ ಪಾಕಿಸ್ತಾನದ ಎರಡನೇ ನಾಯಕ ಎಂಬ ಕುಖ್ಯಾತಿಗೆ ಬಾಬರ್ ಪಾತ್ರರಾಗಿದ್ದಾರೆ.

ಇಮ್ರಾನ್ ಖಾನ್ 1992 ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಐದು ಎಸೆತಗಳನ್ನು ಆಡಿದ ನಂತರವೂ ಖಾತೆ ತೆರೆಯಲು ಸಾಧ್ಯವಾಗದೆ ರನ್ ಔಟ್ ಆಗಿದ್ದರು. ಅವರನ್ನು ವೆಂಕಟಪತಿ ರಾಜು ಮತ್ತು ವಿಕೆಟ್ ಕೀಪರ್ ಕಿರಣ್ ಮೋರೆ ಔಟ್ ಮಾಡಿದ್ದರು.

ಈಗ 30 ವರ್ಷಗಳ ನಂತರ, ಪಾಕಿಸ್ತಾನದ ನಾಯಕರೊಬ್ಬರು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಖಾತೆ ತೆರೆಯದೆ ಔಟ್ ಆಗಿರುವುದು ಇದು ಮೊದಲನೇ ಬಾರಿ.
Published On - 2:01 pm, Mon, 24 October 22




