IND vs PAK, T20 World Cup 2021: ಪ್ಲೀಸ್ ಗೆಲ್ರಪ್ಪ…ಬೋನಸ್ ಕೊಡ್ತೀವಿ ಎಂದ ಪಿಸಿಬಿ

| Updated By: ಝಾಹಿರ್ ಯೂಸುಫ್

Updated on: Oct 23, 2021 | 7:26 PM

India vs Pakistan, T20 World cup 2021: ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ್ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ಐದು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆದ್ದಿದೆ.

IND vs PAK, T20 World Cup 2021: ಪ್ಲೀಸ್ ಗೆಲ್ರಪ್ಪ...ಬೋನಸ್ ಕೊಡ್ತೀವಿ ಎಂದ ಪಿಸಿಬಿ
ಪಾಕಿಸ್ತಾನ್ ತಂಡ: ಬಾಜರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಝಮಾನ್, ಮೊಹಮ್ಮದ್ ಹಫೀಪ್, ಶೊಯೇಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಶಾಹಿನ್ ಅಫ್ರಿದಿ, ಹಾರಿಸ್ ರೌಫ್.
Follow us on

ಭಾರತ-ಪಾಕಿಸ್ತಾನ್ (India vs Pakistan) ನಡುವಣ ಮುಖಾಮುಖಿಗೆ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಸಜ್ಜಾಗಿದೆ. ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಭಾರತವನ್ನು ಸೋಲಿಸಿದರೆ ಪಾಕ್ ತಂಡಕ್ಕೆ ಬೋನಸ್ ನೀಡುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಘೋಷಿಸಿದೆ. ಪಂದ್ಯಕ್ಕೆ ಒಂದು ದಿನ ಬಾಕಿ ಇರುವಾಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಆಟಗಾರರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ರಮೀಜ್ ರಾಜಾ ಮತ್ತು ಪಾಕ್​ ಕೋಚ್ ಮ್ಯಾಥ್ಯೂ ಹೇಡನ್ ತಮ್ಮ ಆಟಗಾರರಿಗೆ ‘ಆಕ್ರಮಣಕಾರಿ’ ಆಟವಾಡಲು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ (T20 World Cup 2021) ಭಾರತವನ್ನು ಸೋಲಿಸಿದರೆ ಬೋನಸ್ ನೀಡುವುದಾಗಿ ಬಹುಮಾನವನ್ನು ಘೋಷಿಸಿದ್ದಾರೆ.

ಏಕೆಂದರೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಎಂದಿಗೂ ಗೆದ್ದಿಲ್ಲ. ಇದೇ ಕಾರಣದಿಂದ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಈ ಬಾರಿಯಾದರೂ ಗೆಲ್ಲಿ. ಪಾಕ್​ ಕ್ರಿಕೆಟ್ ಮಂಡಳಿ ವತಿಯಿಂದ ನಿಮಗೆ ನಾನು ಬೋನಸ್ ಮೊತ್ತವನ್ನು ನೀಡುವುದಾಗಿ ತಿಳಿಸಿದ್ದಾರೆ.

ಪಾಕ್ ಕ್ರಿಕೆಟ್ ಮಂಡಳಿ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ಪಾಕಿಸ್ತಾನವು ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿದರೆ ಉದ್ಯಮಿಯೊಬ್ಬರು ಒಂದು ಖಾಲಿ ಚೆಕ್ ನೀಡುವ ಭರವಸೆ ನೀಡಿವುದಾಗಿ ತಿಳಿಸಿದ್ದಾರೆ. ಇದರಿಂದ ನಮ್ಮ ಕ್ರಿಕೆಟ್ ಮಂಡಳಿ ಕೂಡ ಬಲಿಷ್ಠವಾಗಲಿದೆ  ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮಾಹಿತಿ ನೀಡಿದ್ದಾರೆ.

ಇಮ್ರಾನ್ ಖಾನ್, ವಾಸಿಂ ಅಕ್ರಮ್, ವಕಾರ್ ಯೂನಿಸ್ ಮತ್ತು ಇಂಜಮಾಮ್-ಉಲ್-ಹಕ್ ನಂತಹ ಅನುಭವಿ ಆಟಗಾರರ ನೇತೃತ್ವದಲ್ಲಿ ಮಾಡಲಾಗದ ಕಾರ್ಯ ಹೇಗೆ ಆಗಲಿದೆ ಎಂಬ ಪ್ರಶ್ನೆ ಇದೀಗ ಪಾಕ್ ಆಟಗಾರರಲ್ಲಿ ಇದೆ. ಏಕೆಂದರೆ ವಿಶ್ವಕಪ್ ಇತಿಹಾಸದಲ್ಲಿ ಪಾಕ್ ತಂಡ ಭಾರತದ ವಿರುದ್ದ ಗೆಲುವು ಸಾಧಿಸಿಲ್ಲ. ಇದಾಗ್ಯೂ ಈ ಬಾರಿ ಆಸ್ಟ್ರೇಲಿಯಾ ಕೋಚ್ ಮ್ಯಾಥ್ಯೂ ಹೇಡನ್ ಹೊಸ ಭರವಸೆ ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ ಆಟಗಾರರಲ್ಲಿ ಧನಾತ್ಮಕ ವಿಚಾರಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಮತ್ತೊಂದು ಭಾಗವಾಗಿ ಇದೀಗ ಪಿಸಿಬಿ ಆಟಗಾರರಿಗೆ ಗೆದ್ದರೆ ಬೃಹತ್ ಮೊತ್ತದ ಇನಾಮು ನೀಡುವುದಾಗಿ ಘೋಷಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ್ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ಐದು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆದ್ದಿದೆ. ಇನ್ನು ಉಭಯ ತಂಡಗಳು ಟಿ20ಯಲ್ಲಿ ಒಟ್ಟು 8 ಪಂದ್ಯಗನ್ನು ಆಡಿದ್ದು, ಅದರಲ್ಲಿ ಟೀಮ್ ಇಂಡಿಯಾ 7ರಲ್ಲಿ ಗೆದ್ದಿದೆ. ಹೀಗಾಗಿ ಈ ಬಾರಿ ಕೂಡ ನಿಸ್ಸಂದೇಹವಾಗಿ ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಮುಂಚೂಣಿಯಲ್ಲಿದೆ. ಇದಾಗ್ಯೂ ದುಬೈ ಅಂಗಳದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ನಿರೀಕ್ಷಿಸಬಹುದು.

ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

( IND vs PAK, T20 World Cup 2021: PCB Chairman Ramiz Raja’s offer to Pakistani Team Beat Indian and Earn Bonus)

Published On - 3:58 pm, Sat, 23 October 21