Pak Squad vs IND: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ

Pakistan Playing 11, T20 World cup 2021: ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ್ ಐದು ಬಾರಿ ಮುಖಾಮುಖಿಯಾಗಿದೆ. ಐದು ಬಾರಿ ಕೂಡ ಟೀಮ್ ಇಂಡಿಯಾ ಪಾಕ್​ ತಂಡಕ್ಕೆ ಮಣ್ಣು ಮುಕ್ಕಿಸಿದೆ. ಆದರೆ ಈ ಬಾರಿ ಈ ಹಿಂದಿನ ಅಂಕಿ ಅಂಶಗಳ ಹೊರತಾಗಿಯೂ ನಾವೇ ಗೆಲ್ಲಲಿದ್ದೇವೆ ಎಂದು ಪಾಕ್ ನಾಯಕ ಬಾಬರ್ ಆಜಂ ಸವಾಲು ಎಸೆದಿದ್ದಾರೆ.

Pak Squad vs IND: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ
India vs Pakistan, T20 World cup 2021
Follow us
TV9 Web
| Updated By: Digi Tech Desk

Updated on:Oct 23, 2021 | 3:53 PM

ಟಿ20 ವಿಶ್ವಕಪ್ (T20 World cup 2021) ಕಾವೇರುತ್ತಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ (India vs Pakistan) ವಿರುದ್ದ ಆಡುತ್ತಿರುವುದು ವಿಶೇಷ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿಗಳು ಮೊದಲ ಮುಖಾಮುಖಿಯೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸುತ್ತಿದೆ. ಹೀಗಾಗಿಯೇ ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಅಷ್ಟೇ ಅಲ್ಲದೆ ಉಭಯ ತಂಡಗಳಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಕೂಡ ಮನೆ ಮಾಡಿದೆ. ಆದರೆ ಈ ಕುತೂಹಲಕ್ಕೆ ಕಿಚ್ಚು ಹಚ್ಚುವಂತೆ ಪಾಕಿಸ್ತಾನ್ ತಂಡವು (Pakistan Playing 11) ಒಂದು ದಿನ ಮೊದಲೇ ಭಾರತದ ವಿರುದ್ದ ಆಡಲಿರುವ 12 ಆಟಗಾರರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.

ಬಾಬರ್ ಆಜಂ ಮುನ್ನಡೆಸಲಿರುವ ಈ ಬಳಗದಲ್ಲಿ ಅನುಭವಿ ಶೊಯೇಬ್ ಮಲಿಕ್ ಹಾಗೂ ಹಿರಿಯ ಆಟಗಾರ ಮೊಹಮ್ಮದ್ ಹಫೀಜ್​ಗೆ ಸ್ಥಾನ ನೀಡಲಾಗಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ವಿರುದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಸಿಡಿಸಿದ್ದ ಫಖರ್ ಝಾಮಾನ್​ ರನ್ನು ಆಯ್ಕೆ ಮಾಡಲಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಹಸನ್ ಹಾಗೂ ಶಾಹಿನ್ ಅಫ್ರಿದಿ ವೇಗಿಗಳಾಗಿದ್ದು, ಇಮಾದ್ ವಾಸಿಂ ಹಾಗೂ ಶಾದಾಬ್ ಖಾನ್ ಸ್ಪಿನ್ನರ್​ಗಳಾಗಿ ಕಾಣಿಸಿಕೊಂಡಿದ್ದಾರೆ.

ಈ 12 ಆಟಗಾರರಿಂದ 11 ಆಟಗಾರರು ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಇಲ್ಲಿ ಆಲ್​ರೌಂಡರ್​ಗಳಿಗೆ ಪಾಕ್ ತಂಡವು ಹೆಚ್ಚಿನ ಮಣೆಹಾಕಿದ್ದು, ಅದರಂತೆ ಶೊಯೇಬ್ ಮಲಿಕ್, ಮೊಹಮ್ಮದ್ ಹಫೀಜ್, ಇಮಾದ್ ವಾಸಿಂ ಹಾಗೂ ಶಾದಾಬ್ ಖಾನ್ ಸ್ಪಿನ್ನ್ ಆಲ್​ರೌಂಡರ್​ಗಳಾಗಿ ಕಾಣಿಸಿಕೊಂಡಿದ್ದಾರೆ. ಒಂದು ವೇಳೆ ಈ ನಾಲ್ವರನ್ನು ಆಡಿಸಿದ್ರೆ ಯುವ ಆಟಗಾರ ಹೈದರ್ ಅಲಿಯನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭಾರತದ ವಿರುದ್ದ ಪಾಕ್​ ತಂಡ ಬಲಿಷ್ಠ ಆಲ್​ರೌಂಡರ್​ ಬಳಗದೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ಭಾರತದ ವಿರುದ್ದದ ಪಂದ್ಯಕ್ಕೆ ಪಾಕ್​ 12 ರ ಬಳಗ ಹೀಗಿದೆ: ಬಾಜರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಝಾಮಾನ್, ಮೊಹಮ್ಮದ್ ಹಫೀಪ್, ಶೊಯೇಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಶಾಹಿನ್ ಅಫ್ರಿದಿ, ಹಾರಿಸ್ ರೌಫ್, ಹೈದರ್ ಅಲಿ.

ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ್ ಐದು ಬಾರಿ ಮುಖಾಮುಖಿಯಾಗಿದೆ. ಐದು ಬಾರಿ ಕೂಡ ಟೀಮ್ ಇಂಡಿಯಾ ಪಾಕ್​ ತಂಡಕ್ಕೆ ಮಣ್ಣು ಮುಕ್ಕಿಸಿದೆ. ಆದರೆ ಈ ಬಾರಿ ಈ ಹಿಂದಿನ ಅಂಕಿ ಅಂಶಗಳ ಹೊರತಾಗಿಯೂ ನಾವೇ ಗೆಲ್ಲಲಿದ್ದೇವೆ ಎಂದು ಪಾಕ್ ನಾಯಕ ಬಾಬರ್ ಆಜಂ ಸವಾಲು ಎಸೆದಿದ್ದಾರೆ. ಹೀಗಾಗಿ ಅಕ್ಟೋಬರ್ 24 ರಂದು ಯಾರು ಗೆಲ್ಲಲಿದೆ ಎಂಬುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ​?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(Pakistan announced 12-man squad for India match on Sunday in T20 World Cup 2021)

Published On - 2:31 pm, Sat, 23 October 21

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು