AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sourav Ganguly: ರಾಹುಲ್ ದ್ರಾವಿಡ್ ಮುಖ್ಯ ಕೋಚ್: ಎಲ್ಲ ಊಹಪೋಹಗಳಿಗೆ ಖಡಕ್ ಆಗಿ ಉತ್ತರಿಸಿದ ಸೌರವ್ ಗಂಗೂಲಿ

Rahul Dravid: ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನು ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಮಾತನಾಡಿರುವ ಗಂಗೂಲಿ, ಈ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಈ ಸುದ್ದಿಯನ್ನು ನಾನು ನ್ಯೂಸ್ ಪೇಪರ್​ನಲ್ಲಿ ಓದಿದೆಯಷ್ಟೆ ಎಂದು ಹೇಳಿದ್ದಾರೆ.

Sourav Ganguly: ರಾಹುಲ್ ದ್ರಾವಿಡ್ ಮುಖ್ಯ ಕೋಚ್: ಎಲ್ಲ ಊಹಪೋಹಗಳಿಗೆ ಖಡಕ್ ಆಗಿ ಉತ್ತರಿಸಿದ ಸೌರವ್ ಗಂಗೂಲಿ
sourav ganguly and Rahul dravid
TV9 Web
| Updated By: Vinay Bhat|

Updated on: Oct 23, 2021 | 12:35 PM

Share

ಟಿ20 ವಿಶ್ವಕಪ್ (T20 World Cup) ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದ ಮುಖ್ಯ ಕೋಚ್ (Team India Coach) ಆಗಿ ರಾಹುಲ್ ದ್ರಾವಿಡ್ (Rahul Dravid) ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸ್ಪಷ್ಟನೆ ನೀಡಿದ್ದಾರೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ರವಿಶಾಸ್ತ್ರಿ (Ravi Shastri) ಅವರ ಅಧಿಕಾರ ಮುಕ್ತಾಯಗೊಳ್ಳಲಿದೆ. ಇವರ ನಂತರಕ್ಕೆ ಸದ್ಯ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವ ದ್ರಾವಿಡ್ ಈ ಹುದ್ದೆಯನ್ನು ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಮಾತನಾಡಿರುವ ಗಂಗೂಲಿ, ಈ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಈ ಸುದ್ದಿಯನ್ನು ನಾನು ನ್ಯೂಸ್ ಪೇಪರ್​ನಲ್ಲಿ ಓದಿದೆ. ಈಗಾಗಲೇ ನಾವು ಕೋಚ್ ಹುದ್ದೆಗೆ ಜಾಹೀರಾತು ನೀಡಿದ್ದೇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು, ದ್ರಾವಿಡ್ ಕೂಡ ಎಂದು ಹೇಳಿದ್ದಾರೆ.

‘ದ್ರಾವಿಡ್ ನಮ್ಮ ಜೊತೆ ಮಾತನಾಡಲು ದುಬೈಗೆ ಬಂದಿದ್ದು ನಿಜ. ಆದರೆ, ಅವರು ಎನ್​ಸಿಎ ಬಗ್ಗೆ ಮಾತನಾಡಲು ಬಂದಿದ್ದರು. ಎನ್​ಸಿಎ ಒಂದು ದೊಡ್ಡ ಸಂಸ್ಥೆ ಆಗುತ್ತಿದೆ. ಮುಂದಿನ ಪೀಳಿಗೆಯ ಭಾರತೀಯ ಕ್ರಿಕೆಟರ್​ಗಳನ್ನು ಹುಟ್ಟಿಸುತ್ತಿದೆ. ಹೀಗಾಗಿ ಎನ್​ಸಿಎ ಅನ್ನು ಮುಂದಿನ ದಿನಗಳಲ್ಲಿ ಯಾವರೀತಿ ಮುಂದಕ್ಕೆ ತೆಗೆದುಕೊಂಡ ಹೋಗಬಹುದು ಎಂಬ ಬಗ್ಗೆ ಚರ್ಚಿಸಲು ಬಂದಿದ್ದರು’ ಎಂದು ಗಂಗೂಲಿ ಹೇಳಿದರು.

ಇನ್ನು ಇದೇವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿದ್ದು, ನಾಯಕತ್ವ ತೊರೆಯುವಂತೆ ನಮ್ಮಿಂದ ಒತ್ತಡ ಇರಲಿಲ್ಲ. ಅವರು ನಾಯಕತ್ವ ತೊರೆಯುವ ನಿರ್ಧಾರ ತಿಳಿಸಿದಾಗ ಆಘಾತವಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ. ನಾಯಕತ್ವ ತೊರೆಯುವಂತೆ ಕೊಹ್ಲಿ ಮೇಲೆ ಬಿಸಿಸಿಐ ಒತ್ತಡ ಹೇರಿರಲಿಲ್ಲ. ವಿರಾಟ್ ಕೊಹ್ಲಿ ಅವರೇ ಸ್ವಂತ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

‘ಟಿ20, ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಅವರು ನಾಯಕತ್ವ ತೊರೆಯುವ ನಿರ್ಧಾರವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಅವರಿಗೆ ಏನನ್ನೂ ಹೇಳಿರಲಿಲ್ಲ. ನಾನು ಆಟಗಾರನಾಗಿದ್ದರಿಂದ ಮತ್ತು ನಾಯಕನಾಗಿ 6 ವರ್ಷ ಕಾರ್ಯನಿರ್ವಹಿಸಿದ್ದರಿಂದ ಇಷ್ಟು ದಿನ ನಾಯಕನ ನಿರ್ವಹಿಸುವುದು ಕಷ್ಟವೆಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ’ ಎಂದು ತಿಳಿಸಿದರು.

ಭಾರತ ಪಾಕಿಸ್ತಾನ ಪಂದ್ಯ ಬಗ್ಗೆ ಮಾತನಾಡಿರು ಗಂಗೂಲಿ, ಇಂಡೋ-ಪಾಕ್​ ಪಂದ್ಯವನ್ನು ಭಾರತದಲ್ಲಿ ಆಯೋಜಿಸುವುದು ತುಂಬಾ ಕಷ್ಟದ ಕೆಲಸ ಎಂದಿದ್ದಾರೆ. ಯಾಕೆ ಕಷ್ಟ ಅನ್ನುವುದಕ್ಕೆ ಉತ್ತರ ನೀಡಿರುವುದ ಗಂಗೂಲಿ, ‘ಭಾರತದಲ್ಲಿ ಟಿಕೆಟ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ಇಲ್ಲಿ ಎಲ್ಲವನ್ನು ನಿರ್ವಹಿಸುವುದು ಕಷ್ಟ. ಭಾರತ-ಪಾಕಿಸ್ತಾನ ಪಂದ್ಯದೊಂದಿಗೆ ವಿಶ್ವಕಪ್ ಅನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ನಾವು ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಿದ್ದೇವೆ. ಬಹುಶಃ 2019ರಲ್ಲಿ ಅದು ನಡೆದಿಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿಯು ಕೂಡ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭವಾಯಿತು ಮತ್ತು ಫೈನಲ್​ನಲ್ಲೂ ಪಾಕಿಸ್ತಾನವೇ ಎದುರಾಳಿಯಾಯಿತು ಎಂದು ಗಂಗೂಲಿ ಹೇಳಿದರು.

Babar Azam: ಹಿಂದಿನ ದಾಖಲೆ ಲೆಕ್ಕಕ್ಕೆ ಬರಲ್ಲ: ಭಾರತ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂದ ಪಾಕಿಸ್ತಾನ ನಾಯಕ ಬಾಬರ್

VVS Laxman: ಪಾಕ್ ವಿರುದ್ಧದ ಪಂದ್ಯದಿಂದ ಕಿಶನ್, ಅಶ್ವಿನ್, ಶಮಿ ಔಟ್: ಇಲ್ಲಿದೆ ವಿವಿಎಸ್ ಲಕ್ಷ್ಮಣ್ ಪ್ಲೇಯಿಂಗ್ XI

(Sourav Ganguly gives major update on Rahul Dravid appointment as the next head coach of Team India)