IND vs SA: ಆಫ್ರಿಕಾ ನೆಲದಲ್ಲಿ ಕನ್ನಡಿಗರ ಕಮಾಲ್; ಭಾರತ ಪರ ವಿಶಿಷ್ಟ ದಾಖಲೆ ಬರೆದ ಮಯಾಂಕ್- ರಾಹುಲ್!

IND vs SA: ಟೀಂ ಇಂಡಿಯಾದ ಆರಂಭಿಕರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಆರಂಭಿಕ ಜೊತೆಯಾಟವನ್ನು ಮಾಡುವ ಮೂಲಕ ಮೊದಲ ಬಾರಿಗೆ ದಾಖಲೆಯನ್ನು ಮಾಡಿದ್ದಾರೆ.

IND vs SA: ಆಫ್ರಿಕಾ ನೆಲದಲ್ಲಿ ಕನ್ನಡಿಗರ ಕಮಾಲ್; ಭಾರತ ಪರ ವಿಶಿಷ್ಟ ದಾಖಲೆ ಬರೆದ ಮಯಾಂಕ್- ರಾಹುಲ್!
ರಾಹುಲ್, ಮಯಾಂಕ್
Follow us
TV9 Web
| Updated By: ಪೃಥ್ವಿಶಂಕರ

Updated on: Dec 26, 2021 | 4:16 PM

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡುವ ಮುನ್ನವೇ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿತ್ತು. ಉಪನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಹೇಗೆ ಬಲಿಷ್ಠ ಆರಂಭ ಪಡೆಯಲಿದೆ ಎಂದು ತೋರುತ್ತಿದೆ. ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದ ಮೊದಲ ಸೆಷನ್‌ನಲ್ಲಿ, ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಎಲ್ಲಾ ಚಿಂತೆಗಳನ್ನು ದೂರು ಮಾಡಿದ್ದಾರೆ. ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಂದು ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮಾಡದ ಸಾಧನೆ ಮಾಡಿದ್ದಾರೆ.

ವಾಸ್ತವವಾಗಿ, ಟೀಂ ಇಂಡಿಯಾದ ಆರಂಭಿಕರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಆರಂಭಿಕ ಜೊತೆಯಾಟವನ್ನು ಮಾಡುವ ಮೂಲಕ ಮೊದಲ ಬಾರಿಗೆ ದಾಖಲೆಯನ್ನು ಮಾಡಿದ್ದಾರೆ. ಈ ಹಿಂದೆ ಭಾರತದ ಯಾವುದೇ ಆರಂಭಿಕ ಜೋಡಿ ಈ ಕೆಲಸ ಮಾಡಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆರಂಭಿಕ ಅರ್ಧಶತಕದ ಜೊತೆಯಾಟದ ದಾಖಲೆಯನ್ನು ಮಾಡಿದ ವಿಶ್ವ ಕ್ರಿಕೆಟ್‌ನಲ್ಲಿ ರಾಹುಲ್-ಮಯಾಂಕ್ ಅಗರ್ವಾಲ್ ಎರಡನೇ ಜೋಡಿ ಎಂಬುದು ದೊಡ್ಡ ವಿಷಯ.

ರಾಹುಲ್-ಮಯಾಂಕ್ ರಕ್ಷಣಾತ್ಮಕ ಆಟ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಸೆಂಚುರಿಯನ್ ಮೋಡದಿಂದ ಕೂಡಿದ ಮತ್ತು ಪಿಚ್ ಬೌನ್ಸ್ ಮತ್ತು ಸೀಮ್ ಚಲನೆಯನ್ನು ಹೊಂದಿದ್ದರಿಂದ ವಿರಾಟ್ ಅವರ ನಿರ್ಧಾರವು ಭಾರತೀಯ ಆರಂಭಿಕರಿಗೆ ಸುಲಭವಾಗಿರಲಿಲ್ಲ. ಆದರೆ ಇದರ ಹೊರತಾಗಿಯೂ, ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ಮೊದಲ ಸೆಷನ್‌ನಲ್ಲಿ ಇಬ್ಬರೂ 28 ಓವರ್‌ಗಳಲ್ಲಿ 83 ರನ್ ಸೇರಿಸಿದರು. ಮಯಾಂಕ್ ಅಗರ್ವಾಲ್ ದಕ್ಷಿಣ ಆಫ್ರಿಕಾದ ಬೌಲರ್‌ಗಳ ವಿರುದ್ಧ ಸಕಾರಾತ್ಮಕ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು. ಅವಕಾಶ ಸಿಕ್ಕ ತಕ್ಷಣ ತಮ್ಮ ಹೊಡೆತಗಳನ್ನು ಆಡಿದರು. ಮತ್ತೊಂದೆಡೆ, ಕೆಎಲ್ ರಾಹುಲ್ ಸೆಟ್ ಮಾಡಲು ಸಮಯ ತೆಗೆದುಕೊಂಡರು. ರಾಹುಲ್ 21ನೇ ಎಸೆತಗಳ ನಂತರ ಖಾತೆ ತೆರೆದರು.

ಭಾರತದ ಆರಂಭಿಕ ಆಟಗಾರರ ಉತ್ತಮ ಬ್ಯಾಟಿಂಗ್ ಸೆಂಚುರಿಯನ್​ನಲ್ಲಿ ಭಾರತದ ಆರಂಭಿಕ ಆಟಗಾರ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ರಬಾಡ ಮತ್ತು ಎಂಗಿಡಿ ವಿರುದ್ಧ ಅತ್ಯಂತ ಎಚ್ಬರಿಕೆಯಿಂದ ಮಾಡಿದರು. ಮಯಾಂಕ್ ಮತ್ತು ರಾಹುಲ್ ಫುಲ್ ಲೆಂಗ್ತ್ ಎಸೆತಗಳಲ್ಲಿ ಹಾಫ್ ಡ್ರೈವ್ ಆಡಿದರು. ಅಲ್ಲದೆ, ಆಫ್ ಸ್ಟಂಪ್ ಹೊರಗೆ ಒಂದೇ ಒಂದು ಚೆಂಡನ್ನು ಮುಟ್ಟಲು ಪ್ರಯತ್ನಿಸಲಿಲ್ಲ. ಇಬ್ಬರೂ ಬ್ಯಾಟ್ಸ್‌ಮನ್‌ಗಳ ಈ ತಂತ್ರವು ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ತೊಂದರೆಗೊಳಿಸಿತು. ಮಯಾಂಕ್ ಅಗರ್ವಾಲ್ ವೈಯಕ್ತಿಕ ಸ್ಕೋರ್ 36 ರಲ್ಲಿದ್ದಾಗ, ಯೆನ್ಸನ್ ಅವರ ಬಾಲ್‌ನಲ್ಲಿ ವಿಕೆಟ್‌ಕೀಪರ್ ಡಿ ಕಾಕ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಆದಾಗ್ಯೂ, ಇದನ್ನು ಹೊರತುಪಡಿಸಿ ಮಯಾಂಕ್ ಯಾವುದೇ ತಪ್ಪು ಮಾಡಲಿಲ್ಲ ಮತ್ತು ಕೆಎಲ್ ರಾಹುಲ್ ಸಾಕಷ್ಟು ಆತ್ಮವಿಶ್ವಾಸದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ.

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ