
ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ ಅವರನ್ನು ಆಡುವ ಬಳಗದಿಂದ ಕೈ ಬಿಡಲು ಸಾಧ್ಯವಿಲ್ಲವೇ? ಇದು ಸದ್ಯ ಎಲ್ಲರಲ್ಲೂ ಇರುವ ಪ್ರಶ್ನೆ. ಏಕೆಂದರೆ ಸತತ ವೈಫಲ್ಯ ಅನುಭವಿಸಿದರೂ ಗಿಲ್ ತಂಡದಲ್ಲಿರುವುದು ಉಪನಾಯಕನ ಪಟ್ಟದೊಂದಿಗೆ ಎಂಬುದು ಜಗಜ್ಜಾಹೀರು. ಇದಾಗ್ಯೂ ಗಿಲ್ ಅವರನ್ನು ಅಡುವ ಬಳಗದಿಂದ ಕೈ ಬಿಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಈ ಕೆಳಗಿನಂತಿದೆ…
ಪಂದ್ಯ ನಡೆಯುವಾಗ ಉಪನಾಯಕನಿಗಿಂತ ನಾಯಕನ ಉಪಸ್ಥಿತಿ ಮುಖ್ಯ. ಹೀಗಾಗಿ ಶುಭ್ಮನ್ ಗಿಲ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಟ್ಟರೂ ಯಾವುದೇ ಸಮಸ್ಯೆಯಿಲ್ಲ. ಈ ಹಿಂದೆ ಭಾರತ ತಂಡದ ಉಪನಾಯಕನ್ನು ಆಡುವ ಬಳಗದಿಂದ ಕೈ ಬಿಟ್ಟಂತಹ ಉದಾಹರಣೆಗಳಿವೆ…
ಅಂದರೆ ಶುಭ್ಮನ್ ಗಿಲ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಕಲ್ಪಿಸಲು ಈ ಹಿಂದೆ ಕೆಎಲ್ ರಾಹುಲ್ ಅವರನ್ನು ವೈಸ್ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಿದ ಉದಾಹರಣೆಯೇ ಇದೆ. ಹೀಗಾಗಿ ಗಿಲ್ ಅವರನ್ನು ಪ್ರಸ್ತುತ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಿಂದ ಹೊರಗಿಡುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯ.
ಏಕೆಂದರೆ 14 ಮ್ಯಾಚ್ಗಳಲ್ಲಿ ಶುಭ್ಮನ್ ಗಿಲ್ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. 20(9), 10(7), 5(11), 47(28), 29(19), 4(3), 12(10), 37*(20), 5(10), 15(12), 46(40), 29(16), 4(2) ಮಾತ್ರ ರನ್ಗಳಿಸಿದ್ದಾರೆ. ಅದರಲ್ಲೂ ಕಳೆದ ಮ್ಯಾಚ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಇದನ್ನೂ ಓದಿ: ಬರೋಬ್ಬರಿ 23 ಸಿಕ್ಸ್… ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಎಡ್ವರ್ಡ್ಸ್
ಇತ್ತ ಸತತ ವೈಫಲ್ಯ ಹೊಂದಿದ್ದರೂ ಶುಭ್ಮನ್ ಗಿಲ್ ಅವರನ್ನು ವೈಸ್ ಕ್ಯಾಪ್ಟನ್ ಕಾರ್ಡ್ನೊಂದಿಗೆ ಕಣಕ್ಕಿಳಿಸುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇತ್ತ ಗಿಲ್ಗೆ ಅವಕಾಶ ಸಿಗುತ್ತಿರುವುದರಿಂದ ಸಂಜು ಸ್ಯಾಮ್ಸನ್ ಅವಕಾಶ ವಂಚಿತರಾಗಿ ಕೂತಿದ್ದಾರೆ. ಈ ಬಗ್ಗೆ ಮೊಹಮ್ಮದ್ ಕೈಫ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು ಧ್ವನಿಯೆತ್ತಿದ್ದು, ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಶುಭ್ಮನ್ ಗಿಲ್ ಅವರನ್ನು ಕೈ ಬಿಡಲಿದ್ದಾರಾ ಕಾದು ನೋಡಬೇಕಿದೆ.
Published On - 11:53 am, Sat, 13 December 25