AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND Vs SA: 500 ವಿಕೆಟ್ ಪಡೆದ ಬಳಿಕ ಕಂಬ್ಯಾಕ್: ಟೀಮ್ ಇಂಡಿಯಾ ವಿರುದ್ದ ದಾಖಲೆ ಬರೆದ ವೇಗಿ

Duanne Olivier: ಡುವೇನ್ ಒಲಿವಿಯರ್ ಇಂಗ್ಲೆಂಡ್‌ ಪರ ಏಕದಿನ ಕ್ರಿಕೆಟ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ಕಳೆದ 2 ವರ್ಷಗಳಲ್ಲಿ ಇಂಗ್ಲೆಂಡ್‌ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ.

IND Vs SA: 500 ವಿಕೆಟ್ ಪಡೆದ ಬಳಿಕ ಕಂಬ್ಯಾಕ್: ಟೀಮ್ ಇಂಡಿಯಾ ವಿರುದ್ದ ದಾಖಲೆ ಬರೆದ ವೇಗಿ
Duanne Olivier
TV9 Web
| Updated By: ಝಾಹಿರ್ ಯೂಸುಫ್|

Updated on: Jan 03, 2022 | 9:02 PM

Share

ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕೇವಲ 202 ರನ್​ಗಳಿಗೆ ಆಲೌಟ್ ಆಗಿದೆ. ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾಗೆ ಆಘಾತ ನೀಡಿದ್ದು ಅನುಭವಿ ವೇಗಿ ಡುವೇನ್ ಒಲಿವಿಯರ್. ಎರಡು ಎಸೆತಗಳಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡುವ ಮೂಲಕ ಮಧ್ಯಮ ಕ್ರಮಾಂಕಕ್ಕೆ ಹೊಡೆತ ನೀಡಿದ ಒಲಿವಿಯರ್ ಒಟ್ಟು 3 ವಿಕೆಟ್ ಕಬಳಿಸಿದರು. ಇದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆದ 2ನೇ ಬೌಲರ್ ಎನಿಸಿಕೊಂಡರು.

ಅಂದಹಾಗೆ ಡುವೇನ್ ಒಲಿವಿಯರ್ ಜನವರಿ 2017 ರಲ್ಲಿ ಟೆಸ್ಟ್‌ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಈ ವೇಳೆ 10 ಟೆಸ್ಟ್‌ಗಳಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದರು. ಕೆರಿಯರ್ ಆರಂಭದಲ್ಲಿ 3 ಬಾರಿ 5 ವಿಕೆಟ್ ಹಾಗೂ ಒಮ್ಮೆ 10 ವಿಕೆಟ್ ಪಡೆದ ಸಾಧನೆ ಮಾಡಿದ್ದ ಡುವೇನ್ ಒಲಿವಿಯರ್ ಆ ಬಳಿಕ ಕೋಲ್ಪಾಕ್ ಒಪ್ಪಂದದ ಅಡಿಯಲ್ಲಿ ಇಂಗ್ಲಿಷ್ ಕೌಂಟಿ ತಂಡ ಯಾರ್ಕ್‌ಷೈರ್‌ ಪರ ಆಡಿದ್ದರು. ಇದರಿಂದಾಗಿ ಅವರು ದಕ್ಷಿಣ ಆಫ್ರಿಕಾದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ.

ಕೋಲ್ಪಾಕ್ ಒಪ್ಪಂದದ ನಂತರ, ಡುವೇನ್ ಒಲಿವಿಯರ್ ಇಂಗ್ಲೆಂಡ್‌ ಪರ ಏಕದಿನ ಕ್ರಿಕೆಟ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ಕಳೆದ 2 ವರ್ಷಗಳಲ್ಲಿ ಇಂಗ್ಲೆಂಡ್‌ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಇದಾಗ್ಯೂ ಯಾರ್ಕ್‌ಷೈರ್‌ ಪರ ಪ್ರಥಮ ದರ್ಜೆ ಕ್ರಿಕೆಟ್‌ ಮುಂದುವರೆಸಿದ್ದ ಡುವೇನ್ 125 ಪಂದ್ಯಗಳಲ್ಲಿ 502 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ 26 ಬಾರಿ 5 ವಿಕೆಟ್ ಹಾಗೂ 5 ಬಾರಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದೀಗ ಕೋಲ್ಪಾಕ್​ ಒಪ್ಪಂದ ಮುಗಿಯುತ್ತಿದ್ದಂತೆ ಒಲಿವಿಯರ್ ಮತ್ತೆ ದಕ್ಷಿಣ ಆಫ್ರಿಕಾ ಪರ ಆಡಲು ಆರಂಭಿಸಿದ್ದಾರೆ. ಅದರಂತೆ ಟೀಮ್ ಇಂಡಿಯಾ ವಿರುದ್ದ ಟೆಸ್ಟ್​ನಲ್ಲಿ ಅವಕಾಶ ಪಡೆದಿದ್ದಾರೆ.

1486 ಎಸೆತಗಳಲ್ಲಿ 50 ವಿಕೆಟ್: ಭಾರತದ ವಿರುದ್ದ ಡುವೇನ್ ಒಲಿವಿಯರ್ ಎರಡನೇ ಟೆಸ್ಟ್‌ನಲ್ಲಿ 3ವಿಕೆಟ್‌ಗಳನ್ನು ಪಡೆದಿದ್ದಾರೆ . ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 50 ವಿಕೆಟ್‌ಗಳು ಪೂರ್ಣಗೊಂಡಿವೆ. ಈ ಮೂಲಕ ಅತಿ ಕಡಿಮೆ ಎಸೆತದಲ್ಲಿ ವೇಗವಾಗಿ 50 ವಿಕೆಟ್​ ಪೂರೈಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ವೆರ್ನಾನ್ ಫಿಲಾಂಡರ್ ಅವರು 1240 ಎಸೆತಗಳಲ್ಲಿ 50 ವಿಕೆಟ್​ ಉರುಳಿಸಿ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ