T20 World Cup 2024: ಟಿ20 ವಿಶ್ವಕಪ್ನ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ವಿಶ್ವ ಚಾಂಪಿಯನ್ ಪಟ್ಟಕ್ಕೇರಲಿದೆ. ಅತ್ತ ಉಭಯ ತಂಡಗಳು ಫೈನಲ್ ಫೈಟ್ಗಾಗಿ ಸಿದ್ಧತೆಯಲ್ಲಿದ್ದರೆ, ಅತ್ತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ಗಳ ಮೂಲಕ ಕಿಚ್ಚು ಹಚ್ಚುತ್ತಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ನಗೆಗಡಲಲ್ಲಿ ತೇಲಿಸುತ್ತಿರುವ ಕೆಲ ಮೀಮ್ಸ್ಗಳ ಝಲಕ್ ಇಲ್ಲಿದೆ…
ಭಾರತ ತಂಡವು ಫೈನಲ್ ಪಂದ್ಯದಲ್ಲಿ 20 ಓವರ್ಗಳಲ್ಲಿ 300 ರನ್ಗಳಿಸಬೇಕು. ಹಾಗೆಯೇ ಸೌತ್ ಆಫ್ರಿಕಾ ತಂಡ ಸೊನ್ನೆಗೆ ಆಲೌಟ್ ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿ ಮಾಡಲಾದ ಸ್ಕೋರ್ ಕಾರ್ಡ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
👀 #INDvsSAFinal pic.twitter.com/7mbisKpBnU
— Wellu (@Wellutwt) June 29, 2024
ಫೈನಲ್ ಪಂದ್ಯ ಬಂದರೆ ಭಾರತದಲ್ಲಿ ಸರ್ವಧರ್ಮೀಯರ ಪ್ರಾರ್ಥನೆ ಶುರುವಾಗುತ್ತದೆ ಎಂದು ಕಿಚಾಯಿಸಿರುವ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
Indians right now#INDvsSAFinal pic.twitter.com/KGCjh8hqxq
— Sagar (@sagarcasm) June 29, 2024
ಭಾರತೀಯರು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದರೂ, ಮನದೊಳಗೆ ಟೆನ್ಶನ್, ಎದೆಬಡಿತವಂತು ಜೋರಾಗಿದೆ ಎನ್ನುವ ಪೋಸ್ಟ್ ಕೂಡ ವೈರಲ್ ಆಗಿದೆ.
Me right now#INDvsSAFinal pic.twitter.com/QyMxa7KXp7
— Abhishek (@be_mewadi) June 29, 2024
ಈ ಸಲ ಸೋಲಿಲ್ಲದ ಸರದಾರನಾಗಿ ಫೈನಲ್ಗೆ ಬಂದಿದ್ದೀವಿ. ಫೈನಲ್ನಲ್ಲೂ ನಮ್ಮ ಪರಾಕ್ರಮ ತೋರಿಸುತ್ತೇವೆ ಎನ್ನುವ ನಾಯಿಯ ಮೀಮ್ಸ್ ಒಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ಮೊದಲ ನಾಯಿಯನ್ನು ಪೂರ್ಣ ಆತ್ಮ ವಿಶ್ವಾಸದಲ್ಲಿರುವಂತೆ ತೋರಿಸಿದರೆ, ಎರಡನೇ ಚಿತ್ರದಲ್ಲಿ ಒಳಗೊಳಗೆ ಪ್ರಾರ್ಥಿಸುತ್ತಿರುವಂತೆ ಚಿತ್ರೀಕರಿಸಲಾಗಿದೆ.
Boys have only two moods before #INDvsSAFinal pic.twitter.com/7BT8xQGb09
— Chhotu (@badachhotu) June 29, 2024
ಇದರ ನಡುವೆ ಕಳಪೆ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯನ್ನು ಕೂಡ ಟ್ರೋಲ್ ಮಾಡಲಾಗಿದೆ. ಫೋನ್ನಲ್ಲಿ ಮಾತನಾಡುತ್ತಿರುವ ಕೊಹ್ಲಿಯನ್ನು ಚಿತ್ರವನ್ನು ಬಳಸಿ, ಆನ್ಲೈನ್ನಲ್ಲಿ ಯಾವ ಮಂದಿರದ ದರ್ಶನ ಪಡೆಯಬಹುದು ಎಂಬ ಕುರಿತು ಮಾಹಿತಿ ಪಡೆಯುವಂತೆ ಅನುಷ್ಕಾರಲ್ಲಿ ಕೇಳುತ್ತಿರುವಂತೆ ಈ ಮೀಮ್ಸ್ನಲ್ಲಿ ಕೊಹ್ಲಿಯನ್ನು ಚಿತ್ರೀಕರಿಸಲಾಗಿದೆ.
Kohli bhai kr do mamala fit aaj #INDvsSAFinal pic.twitter.com/8WXlC3VkNa
— Pulkit (@PulkitK107) June 29, 2024
ಇನ್ನು ಟೀಮ್ ಇಂಡಿಯಾ ಕಪ್ ಗೆಲ್ಲಲು ದೇವರ ಮೊರೆ ಹೋಗಿರುವ ಅಭಿಮಾನಿಯ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
No Indian Cricket Fan will pass without liking this post 🔥
God’s Plan Baby #INDvsSAFinal 🙏#IndiavsSouthAfrica #INDvsSA #ICCMensT20WorldCup2024 #INDvSA pic.twitter.com/Sx3OCKZ4LL
— 𝘚𝘸𝘦𝘵𝘩𝘢™ (@Swetha_little_) June 29, 2024
ಹಾಗೆಯೇ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಫೈನಲ್ ಪಂದ್ಯಕ್ಕೂ ಮುನ್ನ ಬಾಹುಬಲಿ ಚಿತ್ರದ ತುಣುಕುಗಳು ಕೂಡ ಮೀಮ್ಸ್ ಆಗಿ ಪರಿವರ್ತನೆಯಾಗಿದೆ. ಇಲ್ಲಿ ಪ್ರಭಾಸ್ ಭಾರತ ತಂಡವಾದರೆ, ರಾಣಾ ದಗ್ಗುಬಾಟಿ ಸೌತ್ ಆಫ್ರಿಕಾ ತಂಡವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕೂಡ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.
Mahatma Gandhi ko train se utarne ka badla lena hai South Africa se ” IND VS SA “#INDvsSAFinal #T20WordCup pic.twitter.com/j4zpX0xIhd
— 𝕏 (@ImAryanSoni) June 29, 2024
ಇನ್ನು ಫೈನಲ್ ಪಂದ್ಯ ಫಲಿತಾಂಶ ಏನಾಗಲಿದೆ ಎಂಬುದು ತಿಳಿಯಲು ಐಡೆನ್ ಮಾರ್ಕ್ರಾಮ್ ಅವರ ನಾಯಕತ್ವವನ್ನು ನೋಡಿ ಎಂಬ ಮೀಮ್ ಕೂಡ ವೈರಲ್ ಆಗಿದೆ. ಏಕೆಂದರೆ ಮಾರ್ಕ್ರಾಮ್ ನಾಯಕತ್ವದಲ್ಲಿ ಆಡಲಾದ ಎಲ್ಲಾ ಫೈನಲ್ ಪಂದ್ಯಗಳಲ್ಲೂ ಸೌತ್ ಆಫ್ರಿಕಾ ಮತ್ತು ಇತರೆ ತಂಡಗಳು ಗೆದ್ದಿದೆ.
ಒಟ್ಟಿನಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ಗಳ ಕಲರವ ಜೋರಾಗಿದ್ದು, ಬಹುತೇಕ ಮೀಮ್ಸ್ಗಳಲ್ಲೂ ಭಾರತ ತಂಡವೇ ಚಾಂಪಿಯನ್ ಆಗಲಿ ಎಂಬುದನ್ನು ಒತ್ತಿ ಹೇಳಲಾಗಿದೆ. ಅಂದರಂತೆ ಇಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಸೌತ್ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಬಗ್ಗು ಬಡಿಯಲಿದೆಯಾ ಕಾದು ನೋಡಬೇಕಿದೆ.