‘ಬಾಲ್ಯದಿಂದಲೂ ಅವರು ನನ್ನ ಹೀರೋ’; ಕ್ರಿಕೆಟ್ ದೇವರ ಬಗ್ಗೆ ಕಿಂಗ್ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ

|

Updated on: Nov 06, 2023 | 7:09 AM

Virat Kohli, ICC World Cup 2023: ಇನ್ನು ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದರ ಬಗ್ಗೆ ಮಾತನಾಡಿದ ಕೊಹ್ಲಿ, ‘ನನ್ನ ನಾಯಕನ ದಾಖಲೆಯನ್ನು ಸರಿಗಟ್ಟುವುದು ನನಗೆ ದೊಡ್ಡ ವಿಷಯವಾಗಿದೆ. ಇದು ನನಗೆ ಭಾವನಾತ್ಮಕ ಕ್ಷಣವಾಗಿದೆ. ಸಚಿನ್ ಬಾಲ್ಯದಿಂದಲೂ ನನ್ನ ಹೀರೋ ಎಂದಿದ್ದಾರೆ.

‘ಬಾಲ್ಯದಿಂದಲೂ ಅವರು ನನ್ನ ಹೀರೋ’; ಕ್ರಿಕೆಟ್ ದೇವರ ಬಗ್ಗೆ ಕಿಂಗ್ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ
ವಿರಾಟ್ ಕೊಹ್ಲಿ
Follow us on

ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಈಗ ದಕ್ಷಿಣ ಆಫ್ರಿಕಾ ಆಗಿರಲಿ, 2023 ರ ವಿಶ್ವಕಪ್‌ನಲ್ಲಿ (ICC World Cup 2023) ಟೀಂ ಇಂಡಿಯಾದ ಮುಂದೆ ಎಲ್ಲಾ ತಂಡಗಳು ಶರಣಾಗಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರತಿ ತಂಡವನ್ನು ಮೆಟ್ಟಿ ನಿಲ್ಲುತ್ತಿದ್ದ ಟೀಂ ಇಂಡಿಯಾ ಸೆಮಿಫೈನಲ್‌ಗೂ ಮುನ್ನ ತನ್ನ ಕೊನೆಯ ದೊಡ್ಡ ಸವಾಲನ್ನು ಸುಲಭವಾಗಿ ಗೆದ್ದು ಬೀಗಿದೆ. ನವೆಂಬರ್ 5 ರಂದು ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರ ಐತಿಹಾಸಿಕ 49 ನೇ ಶತಕ ಹಾಗೂ ರವೀಂದ್ರ ಜಡೇಜಾ ಅವರ ಮಾರಕ ಸ್ಪಿನ್ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ತಂಡವನ್ನು ಟೀಂ ಇಂಡಿಯಾ (India vs South Africa) 243 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಟೀಂ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿತು. ಇನ್ನು ಈಡನ್ ಗಾರ್ಡನ್​ನಲ್ಲಿ ಐತಿಹಾಸಿಕ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ (Sachin Tendulkar) ಅವರ 49 ಶತಕಗಳ ದಾಖಲೆಯನ್ನೂ ಸರಿಗಟ್ಟಿದರು. ಅದರಲ್ಲೂ ಈ ದಾಖಲೆಯನ್ನು ಕೊಹ್ಲಿ ತಮ್ಮ ಜನ್ಮದಿನದಂದು ಸರಿಗಟ್ಟಿದ್ದು ಇನ್ನಷ್ಟು ವಿಶೇಷವಾಗಿತ್ತು. ಇನ್ನು ಈ ಅವಿಸ್ಮರಣೀಯ ಘಳಿಗೆಯ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಹೇಳಿದ್ದು ಹೀಗೆ.

ಇದು ದೊಡ್ಡ ಪಂದ್ಯವಾಗಿತ್ತು

ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಬಲಿಷ್ಠ ತಂಡವಾಗಿದ್ದರಿಂದ ಇದು ದೊಡ್ಡ ಪಂದ್ಯವಾಗಿತ್ತು. ಇದುವರೆಗಿನ ಟೂರ್ನಿಯಲ್ಲಿ ಬಲಿಷ್ಠ ತಂಡವೆಂಬಂತೆ ಕಾಣುತ್ತಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮವಾಗಿ ಆಡಿರುವುದು ಉತ್ತಮ ಪ್ರದರ್ಶನ ನೀಡಲು ಪ್ರೇರಣೆಯಾಗಿದೆ. ನನ್ನ ಜನ್ಮದಿನವಾದ್ದರಿಂದ ಈ ಪಂದ್ಯ ನನಗೆ ಇನ್ನೂ ವಿಶೇಷವಾಗಿತ್ತು. ನಾನು ಕ್ರಿಕೆಟ್ ಆಡುವುದನ್ನು ಆನಂದಿಸುತ್ತೇನೆ. ವರ್ಷಗಳಲ್ಲಿ ನಾನು ಏನು ಮಾಡಿದ್ದೇನೆ ಎಂಬುದರ ಬಗ್ಗೆ ನನಗೆ ಸಂತೋಷವಾಗಿದೆ ಎಂದಿದ್ದಾರೆ.

Virat Kohli: 49ನೇ ಏಕದಿನ ಶತಕ ಸಿಡಿಸಿದ ಕೊಹ್ಲಿಗೆ ‘ಸ್ವಾರ್ಥಿ’ ಎಂಬ ಹಣೆಪಟ್ಟಿ ಕಟ್ಟಿದ ನೆಟ್ಟಿಗರು..!

ನನಗೆ ಭಾವನಾತ್ಮಕ ಕ್ಷಣವಾಗಿದೆ

ಇನ್ನು ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದರ ಬಗ್ಗೆ ಮಾತನಾಡಿದ ಕೊಹ್ಲಿ, ‘ನನ್ನ ನಾಯಕನ ದಾಖಲೆಯನ್ನು ಸರಿಗಟ್ಟುವುದು ನನಗೆ ದೊಡ್ಡ ವಿಷಯವಾಗಿದೆ. ಇದು ನನಗೆ ಭಾವನಾತ್ಮಕ ಕ್ಷಣವಾಗಿದೆ. ಸಚಿನ್ ಬಾಲ್ಯದಿಂದಲೂ ನನ್ನ ಹೀರೋ, ನಾನು ಅವರ ಆಟವನ್ನು ಟಿವಿಯಲ್ಲಿ ನೋಡುತ್ತಿದ್ದೆ ಮತ್ತು ಇಂದು ಅವರಿಂದ ಮೆಚ್ಚುಗೆ ಪಡೆಯುತ್ತಿರುವುದು ದೊಡ್ಡ ವಿಷಯ ಎಂದು ಹೇಳಿದರು.

ಜನ್ಮದಿನದಂದು ಶತಕ ಸಿಡಿಸಿದ 3ನೇ ಭಾರತೀಯ

ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದು, ಶೀಘ್ರದಲ್ಲೇ 50 ಶತಕಗಳ ದಾಖಲೆಯನ್ನು ಮುರಿಯಲಿ ಎಂದು ಹಾರೈಸಿದ್ದಾರೆ. ವಿರಾಟ್ ಕೊಹ್ಲಿ ಇಂದು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವುದರೊಂದಿಗೆ ಜನ್ಮದಿನದಂದು ಏಕದಿನದ ಶತಕ ಸಿಡಿಸಿದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ತಮ್ಮ ಜನ್ಮದಿನದಂದು ಏಕದಿನದಲ್ಲಿ ಶತಕ ಬಾರಿಸಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:04 am, Mon, 6 November 23