Virat Kohli: 49ನೇ ಏಕದಿನ ಶತಕ ಸಿಡಿಸಿದ ಕೊಹ್ಲಿಗೆ ‘ಸ್ವಾರ್ಥಿ’ ಎಂಬ ಹಣೆಪಟ್ಟಿ ಕಟ್ಟಿದ ನೆಟ್ಟಿಗರು..!
Virat Kohli Century: ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ವಿರಾಟ್ ಕೊಹ್ಲಿ ಸಚಿನ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. 2023ರ ವಿಶ್ವಕಪ್‌ನ 37ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. ಆದರೆ ಈ ನಡುವೆ ಕೊಹ್ಲಿ ಸ್ವಾರ್ಥಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. ಕೊಹ್ಲಿ ತಮ್ಮ ದಾಖಲೆಯ ಶತಕಕ್ಕಾಗಿ ಆಮೆ ಗತಿಯ ಬ್ಯಾಟಿಂಗ್ ಮಾಡಿದರು ಎಂಬುದು ನೆಟ್ಟಿಗರ ಆರೋಪವಾಗಿದೆ.
ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ವಿರಾಟ್ ಕೊಹ್ಲಿ (Virat Kohli), ಸಚಿನ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. 2023ರ ವಿಶ್ವಕಪ್‌ನ (ICC World Cup 2023) 37ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (India vs South Africa) ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. ಕಳೆದ ಎರಡು ವಿಶ್ವಕಪ್ ಪಂದ್ಯಗಳಲ್ಲಿ 49 ನೇ ಶತಕದಿಂದ ವಂಚಿತರಾಗಿದ್ದ ವಿರಾಟ್, ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ ಶತಕ ಸಿಡಿಸಿ ಈ ಐತಿಹಾಸಿಕ ಮೈಲುಗಲ್ಲನ್ನು ಸಾಧಿಸಿದ್ದಾರೆ. ಆದರೆ ಈ ನಡುವೆ ಕೊಹ್ಲಿ ಸ್ವಾರ್ಥಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. ಕೊಹ್ಲಿ ತಮ್ಮ ದಾಖಲೆಯ ಶತಕಕ್ಕಾಗಿ ಆಮೆ ಗತಿಯ ಬ್ಯಾಟಿಂಗ್ ಮಾಡಿದರು ಎಂಬುದು ನೆಟ್ಟಿಗರ ಆರೋಪವಾಗಿದೆ.
ಮಧ್ಯಮ ಓವರ್‌ಗಳಲ್ಲಿ ವೇಗ ಇರಲಿಲ್ಲ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸ್ಫೋಟಕ ಆರಂಭ ನೀಡಿದರು. ಈ ಇಬ್ಬರ ಅಬ್ಬರದ ಬ್ಯಾಟಿಂಗ್ನಿಂದಾಗಿ ಭಾರತ ಮೊದಲ 10 ಓವರ್‌ಗಳಲ್ಲಿ 91 ರನ್ ಕಲೆಹಾಕಿತು. ಆದರೆ ಈ ಇಬ್ಬರು ಔಟಾದ ಬಳಿಕ ತಂಡದ ರನ್ರೇಟ್ ದಿಡೀರ್ ಕುಸಿತ ಕಂಡಿತು. ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ನಿದಾನಗತಿಯ ಬ್ಯಾಟಿಂಗ್ಗೆ ಮುಂದಾದರು. ಈ ನಡುವೆ ಇಬ್ಬರೂ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ 134 ರನ್ಗಳ ಜೊತೆಯಾಟ ಕೂಡ ನಡೆಸಿದರು.
ಅರ್ಧಶತಕದ ಬಳಿಕ ಇಬ್ಬರು ಹೊಡಿಬಡಿ ಆಟಕ್ಕೆ ಮುಂದಾದರು. ಈ ವೇಳೆ ಶ್ರೇಯಸ್ ಕ್ಯಾಚಿತ್ತು ಔಟಾದರು. ಆ ನಂತರ ಬಂದ ರಾಹುಲ್ ಹೆಚ್ಚು ಪರಿಣಾಮ ಬೀರಲಿಲ್ಲ. ಆದರೆ ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತಕ್ಕೆ ವೇಗ ನೀಡಿದರು. ಆದರೆ ಕೊಹ್ಲಿ ಮಾತ್ರ ಸಿಂಗಲ್ಸ್ಗಳ ಮೊರೆ ಹೋದರು. ಸೂರ್ಯ ಔಟಾದ ಬಳಿಕ ಬಂದ ಜಡೇಜಾ ಸ್ಫೋಟಕ ಆಟಕ್ಕೆ ಮುಂದಾದರೂ ಶತಕದಂಚಿನಲ್ಲಿದ್ದ ಕೊಹ್ಲಿಯ ಬ್ಯಾಟ್ ವೇಗ ಕಂಡುಕೊಳ್ಳಲಿಲ್ಲ.
ಗೇರ್ ಬದಲಿಸಲಿಲ್ಲ ವಿರಾಟ್
ಅಂತಿಮವಾಗಿ ಕೊಹ್ಲಿ 49ನೇ ಓವರ್ನಲ್ಲಿ ತಮ್ಮ ದಾಖಲೆಯ ಶತಕ ಪೂರೈಸಿದರು. ಹೀಗಾಗಿ ಕೊಹ್ಲಿಯ ಈ ನಿದಾನಗತಿಯ ಬ್ಯಾಟಿಂಗ್ ನೋಡಿದ ನೆಟ್ಟಿಗರು ಕೊಹ್ಲಿ, ಶತಕ ಬಾರಿಸುವುದಕ್ಕಾಗಿಯೇ ನಿದಾನವಾಗಿ ಬ್ಯಾಟಿಂಗ್ ಮಾಡಿದರು ಎಂದು ದೂರುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ 121 ಎಸೆತಗಳನ್ನು ಎದುರಿಸಿ 83.47 ಸ್ಟ್ರೈಕ್ ರೇಟ್‌ನೊಂದಿಗೆ 10 ಬೌಂಡರಿಗಳ ನೆರವಿನಿಂದ ಅಜೇಯ 101 ರನ್ ಬಾರಿಸಿದರು.
The most selfish century I’ve ever seen !#INDvsSA #GOAT𓃵 #FakharZaman #PAKvsNZ #INDvSA Champions Trophy Wasim Jnr #viralvideo Captaincy #QudratKaNizam Hassan Ali #CWC23 #WorldCup2023 #Mianwali #Gillpic.twitter.com/8jcceFpwRZ
— Furqan Ashfaq (@furqan_ashfaq77) November 5, 2023
Sachin reaction 👀💀 Virat equaling 49 odi century#INDvSA #ViratKohli #SachinTendulkar #IndiavsSouthAfrica #GOAT𓃵 #Century #selfish pic.twitter.com/Tf56XJhXHe
— $o7fan (@MJann71132) November 5, 2023
Congratulations selfish virat kohli for your 49th Century pic.twitter.com/iWDTaVCvTf
— krishna🥀 (@iiamkrshn) November 5, 2023
Most Selfish players of Cricket history.#INDvsSA pic.twitter.com/Qu8CU1F6Mo
— Shivani (@shivani_45D) November 5, 2023
ಕೊಹ್ಲಿ ಹೇಳಿದ್ದೇನು?
ಆದರೆ ಟೀಂ ಇಂಡಿಯಾದ ಇನ್ನಿಂಗ್ಸ್ ಮುಗಿದ ಬಳಿಕ ಮಾತನಾಡಿದ ವಿರಾಟ್, ಮಧ್ಯಮ ಓವರ್‌ಗಳಲ್ಲಿ ಬ್ಯಾಟ್ ಮಾಡಲು ವಿಕೆಟ್ ಸ್ವಲ್ಪ ಟ್ರಿಕಿಯಾಗಿತ್ತು. ರೋಹಿತ್ ಮತ್ತು ಶುಭ್ಮನ್ ಅದ್ಭುತ ಆರಂಭ ನೀಡಿದರು. ಆದರೆ ಒಮ್ಮೆ ಅವರು ಔಟಾದ ನಂತರ ಚೆಂಡು ಹಳೆಯದಾಗುತ್ತಿದ್ದಂತೆ ವಿಕೆಟ್ ಸ್ವಲ್ಪ ನಿಧಾನವಾಯಿತು. ಅಲ್ಲದೆ ರೋಹಿತ್ ಮತ್ತು ಗಿಲ್ ಮೊದಲ 10 ಓವರ್‌ಗಳಲ್ಲಿ ಔಟಾದರು. ಹೀಗಾಗಿ ದೀರ್ಘ ಸಮಯ ಬ್ಯಾಟಿಂಗ್ ಮತ್ತು ಇನ್ನಿಂಗ್ಸ್ ಅನ್ನು ಕೊನೆಯವರೆಗೂ ಕೊಂಡೊಯ್ಯುವುದು ನನ್ನ ಪಾತ್ರವಾಗಿತ್ತು. ತಂಡದ ಮ್ಯಾನೇಜ್‌ಮೆಂಟ್ ಕೂಡ ನನಗೆ ಇದನ್ನೇ ತಿಳಿಸಿತ್ತು ಎಂದಿದ್ದಾರೆ.
Published On - 7:46 pm, Sun, 5 November 23