Virat Kohli Century: ಜನ್ಮ ದಿನದಂದು ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ..!
Virat Kohli Century: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ದಾಖಲೆಯ ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 119 ಎಸೆತಗಳನ್ನು ಎದುರಿಸಿದ ವಿರಾಟ್ 10 ಬೌಂಡರಿ ಸಹಿತ ತಮ್ಮ ಶತಕ ಪೂರೈಸಿದರು.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ದಾಖಲೆಯ ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 119 ಎಸೆತಗಳನ್ನು ಎದುರಿಸಿದ ವಿರಾಟ್ 10 ಬೌಂಡರಿ ಸಹಿತ ತಮ್ಮ ಶತಕ ಪೂರೈಸಿದರು. ಈ ಶತಕದೊಂದಿಗೆ ವಿರಾಟ್ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು 49 ಶತಕ ಸಿಡಿಸಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲಿ ಮೈಲುಗಲ್ಲನ್ನು ತಲುಪಿದ್ದರೆ, 2012 ರಲ್ಲಿ ಸಚಿನ್ 452 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದರು.
ಕೋಲ್ಕತ್ತಾದ ಪಿಚ್ ಬ್ಯಾಟಿಂಗ್‌ಗೆ ಅಷ್ಟು ಸುಲಭವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ ಔಟಾದ ಬಳಿಕ ಕ್ರೀಸ್ಗೆ ಬಂದ ವಿರಾಟ್ ಆಫ್ರಿಕನ್ನ್ ಸ್ಪಿನ್ನರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.ಅದರಲ್ಲೂ ಕೊಹ್ಲಿ ಕ್ರೀಸ್ಗೆ ಕಾಲಿಟ್ಟ ಕೂಡಲೇ ದಾಳಿಗಿಳಿದ ಕೇಶವ್ ಮಹಾರಾಜ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಶುಭ್ಮನ್ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದು ವಿರಾಟ್ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ ಕೊಹ್ಲಿ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದರು. ಇದರಿಂದ ತಂಡದ ರನ್ರೇಟ್ ಕುಸಿಯುತ್ತಾ ಸಾಗಿತು. ಆದರೆ ಇದರ ನಂತರ ವಿರಾಟ್ ಜೊತೆಯಾದ ಶ್ರೇಯಸ್ ಅಯ್ಯರ್ 134 ರನ್‌ಗಳ ಜೊತೆಯಾಟ ನಡೆಸಿದರು.
ಏಕದಿನ ವಿಶ್ವಕಪ್‌ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್..!
ತವರಿನಲ್ಲಿ 6 ಸಾವಿರ ರನ್
ಇದೇ ವೇಳೆ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ವಿರಾಟ್ ತವರು ನೆಲದಲ್ಲಿ 6000 ಏಕದಿನ ರನ್ ಪೂರೈಸಿದರು. ಹಾಗೆಯೇ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಜನ್ಮದಿನದಂದು ಶತಕ
ವಿರಾಟ್ ಕೊಹ್ಲಿಗೆ ಇಂದು ವಿಶೇಷ ದಿನವಾಗಿದ್ದು, ಇಂದು ಅವರು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದಂದು ಕೊಹ್ಲಿ ಏಕದಿನ ಪಂದ್ಯ ಆಡುತ್ತಿರುವುದು ಇದೇ ಮೊದಲು. ಹೀಗಾಗಿ ಈ ವಿಶೇಷ ದಿನದಂದು ಕೊಹ್ಲಿ ಶತಕ ಸಿಡಿಸಿ ಕ್ರಿಕೆಟ್ ದೇವರ ದಾಖಲೆಯನ್ನು ಸರಿಗಟ್ಟಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಶಯವಾಗಿತ್ತು. ಇದೀಗ ಅಭಿಮಾನಿಗಳ ನಿರೀಕ್ಷೆಯಂತೆ ವಿರಾಟ್, ತಮ್ಮ ಏಕದಿನ ಶತಕವನ್ನು ಪೂರೈಸಿದಲ್ಲದೆ, ಅಜೇಯರಾಗಿ ಪೆವಿಲಿಯನ್ಗೆ ತೆರಳಿದ್ದಾರೆ.
𝗛𝗨𝗡𝗗𝗥𝗘𝗗 in Kolkata for the Birthday Boy! 🎂🥳
From scoring his Maiden century in Kolkata to scoring his 4⃣9⃣th ODI Ton 👑💯#TeamIndia | #CWC23 | #MenInBlue | #INDvSA pic.twitter.com/pA28TGI4uv
— BCCI (@BCCI) November 5, 2023
4⃣9⃣ 𝙊𝘿𝙄 𝘾𝙀𝙉𝙏𝙐𝙍𝙄𝙀𝙎!
Sachin Tendulkar 🤝 Virat Kohli
Congratulations to Virat Kohli as he equals the legendary Sachin Tendulkar's record for the most ODI 💯s! 👏#TeamIndia | #CWC23 | #MenInBlue | #INDvSA pic.twitter.com/lXu9qJakOz
— BCCI (@BCCI) November 5, 2023
ಈ ವಿಶ್ವಕಪ್‌ನಲ್ಲಿ ಕೊಹ್ಲಿ ಆಟ ಹೀಗಿದೆ
ಈ ವಿಶ್ವಕಪ್‌ನಲ್ಲಿ ಕೊಹ್ಲಿ ಬ್ಯಾಟ್ ಅಬ್ಬರಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 85 ರನ್‌ಗಳ ಇನ್ನಿಂಗ್ಸ್ ಆಡಿದ ವಿರಾಟ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅದರ ನಂತರ ಅಫ್ಘಾನಿಸ್ತಾನ ವಿರುದ್ಧ 55 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಆದರೆ ಪಾಕಿಸ್ತಾನದ ವಿರುದ್ಧ ಕೇವಲ 16 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ವಿರಾಟ್, ಬಾಂಗ್ಲಾದೇಶ ವಿರುದ್ಧ 103 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಏಕದನ ವೃತ್ತಿಜೀವನದ 48 ನೇ ಶತಕವನ್ನು ಪೂರ್ಣಗೊಳಿಸಿದ್ದರು. ನ್ಯೂಜಿಲೆಂಡ್ ವಿರುದ್ಧವೂ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದ ವಿರಾಟ್ 95 ರನ್ ಬಾರಿಸಿ ಕೇವಲ 5 ರನ್ಗಳಿಂದ ತಮ್ಮ ಶತಕ ವಂಚಿತರಾಗಿದ್ದರು. ನಂತರ ಇಂಗ್ಲೆಂಡ್ ವಿರುದ್ಧ ಶೂನ್ಯ ಸುತ್ತಿದ್ದ ಕೊಹ್ಲಿ, ಶ್ರೀಲಂಕಾ ವಿರುದ್ಧ ಮತ್ತೊಮ್ಮೆ 49ನೇ ಶತಕದ ಸಮೀಪಕ್ಕೆ ಬಂದು, 88 ರನ್ಗಳಿಗೆ ಔಟಾಗಿದ್ದರು. ಹೀಗಾಗಿ ಇದೇ ವಿಶ್ವಕಪ್‌ನಲ್ಲಿ ಕೊಹ್ಲಿ 2 ಬಾರಿ ಶತಕದಂಚಿನ್ನಲ್ಲಿ ಎಡವಿದ್ದರು. ಆದರೆ ಆಫ್ರಿಕಾ ವಿರುದ್ಧ ಕೋಟ್ಯಾಂತರ ಅಭಿಮಾನಿಗಳ ಆಸೆಯನ್ನು ಕೊಹ್ಲಿ ಈಡೇರಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Sun, 5 November 23