3 ಟಿ20, 3 ಏಕದಿನ ಮತ್ತು 2 ಟೆಸ್ಟ್, ಅಂದರೆ ಒಟ್ಟು 8 ಪಂದ್ಯಗಳನ್ನು ಗೆಲ್ಲುವ ಉದ್ದೇಶದಿಂದ ಟೀಂ ಇಂಡಿಯಾ ಇಂದು ದಕ್ಷಿಣ ಆಫ್ರಿಕಾಕ್ಕೆ (India vs South Africa) ತೆರಳಿದೆ. ಭಾರತ ತಂಡ ಬುಧವಾರ ಮುಂಜಾನೆ ಬೆಂಗಳೂರಿನಿಂದ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಏರಿತು. ವಿಶ್ವಕಪ್ (ODI World Cup) ನಂತರದ ಈ ಮೊದಲ ವಿದೇಶಿ ಪ್ರವಾಸಕ್ಕೆ ಭಾರತ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರೊಂದಿಗೆ ಯುವ ತಂಡವನ್ನು ಕಟ್ಟುವ ಇರಾದೆಯಲ್ಲಿ ಬಿಸಿಸಿಐ (BCCI) ಇದೆ. ಹೀಗಾಗಿ ಈ ಪ್ರವಾಸದಲ್ಲಿ ಹಲವು ಯುವ ಆಟಗಾರರಿಗೆ ತಮ್ಮನ್ನು ತಾವು ಸಾಭೀತುಪಡಿಸಲು ಸುವರ್ಣಾವಕಾಶ ಸಿಕ್ಕಿದೆ. ಒಂದು ವೇಳೆ ಈ ಯುವ ಪಡೆ ದಕ್ಷಿಣ ಆಫ್ರಿಕಾದ ನೆಲದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರೆ, ಅವರ ಪ್ರದರ್ಶನವು ಟೀಂ ಇಂಡಿಯಾದಲ್ಲಿ (Team India) ಅವರ ಸ್ಥಾನವನ್ನು ಭದ್ರಪಡಿಸುವುದಂತೂ ಖಚಿತ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಮಾದರಿಯ ಸರಣಿಗೆ ಟೀಂ ಇಂಡಿಯಾವನ್ನು ಏಕಕಾಲದಲ್ಲಿ ಪ್ರಕಟಿಸಲಾಯಿತು. ಈ ಪ್ರವಾಸದಲ್ಲಿ ಆಡುವ ಮೂರು ಮಾದರಿಯ ಸರಣಿಗೆ ಭಾರತ ತಂಡವನ್ನು ಮೂವರು ವಿಭಿನ್ನ ನಾಯಕರು ಮುನ್ನಡೆಸಲಿದ್ದಾರೆ. ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿದರೆ, ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದಾರೆ. ಎಲ್ಲಾ ಮೂರು ತಂಡಗಳು ಒಟ್ಟಿಗೆ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಹತ್ತಿವೆ.
VIDEO | Indian cricket team left for South Africa from Bengaluru earlier today. The Indian team will tour South Africa from December 10 to January 7 to play 3 T20Is, 3 ODIs and 2 Tests.#INDvsSA pic.twitter.com/ez4mBMaR5k
— Press Trust of India (@PTI_News) December 6, 2023
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವು ಡಿಸೆಂಬರ್ 10 ರಿಂದ ಪ್ರಾರಂಭವಾಗಲಿದೆ.. ಈ ಪ್ರವಾಸದಲ್ಲಿ ಭಾರತವು ತನ್ನ ಎಲ್ಲಾ 8 ಪಂದ್ಯಗಳನ್ನು 10 ಡಿಸೆಂಬರ್ 2023 ರಿಂದ 7 ಜನವರಿ 2024 ರವರೆಗೆ ಆಡಬೇಕಾಗಿದೆ. ಈ ಪ್ರವಾಸವು ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, ಟೆಸ್ಟ್ ಸರಣಿಯೊಂದಿಗೆ ಕೊನೆಗೊಳ್ಳಲಿದೆ.
ಭಾರತ ಟಿ20 ತಂಡಕ್ಕೆ ಹೊಸ ವಿಕೆಟ್ಕೀಪರ್ ಬ್ಯಾಟರ್ ಆಗಮನ; ನಾಲ್ವರು ಆಟಗಾರರಿಗೆ ಟೆನ್ಷನ್ ಶುರು..!
ಡಿಸೆಂಬರ್ 26ರಿಂದ ಆರಂಭವಾಗಲಿರುವ 2 ಟೆಸ್ಟ್‌ಗಳ ಸರಣಿಯನ್ನು ಗೆದ್ದು ಇತಿಹಾಸ ಸೃಷ್ಟಿಸುವ ಸುವರ್ಣಾವಕಾಶ ಭಾರತ ತಂಡಕ್ಕಿದೆ. ಏಕೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಭಾರತ ಈ ಎರಡೂ ಪಂದ್ಯಗಳನ್ನು ಗೆದ್ದರೆ, ಅದು ಹರಿಣಗಳ ನೆಲದಲ್ಲಿ ಭಾರತದ ಮೊದಲ ಟೆಸ್ಟ್ ಸರಣಿ ಗೆಲುವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Wed, 6 December 23