AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನಿಂದ ನನಗೆ ಯಾವುದೇ ಉಪಯೋಗವಿಲ್ಲ’; ಮೈದಾನದಲ್ಲೇ ಪಾಕ್ ಕ್ರಿಕೆಟಿಗರ ಮಧ್ಯೆ ವಾಕ್ಸಮರ! ವಿಡಿಯೋ ನೋಡಿ

PAK vs AUS: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಪಾಕಿಸ್ತಾನ ತಂಡ ಅಭ್ಯಾಸ ನಡೆಸುತ್ತಿದೆ. ಇಲ್ಲಿ ಪಾಕ್ ತಂಡ ಡಿಸೆಂಬರ್ 6 ರಿಂದ ಅಭ್ಯಾಸ ಪಂದ್ಯವನ್ನೂ ಆಡಬೇಕಾಗಿದೆ. ಹೀಗಾಗಿ ಪಾಕ್ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ತಂಡದ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.

‘ನಿನ್ನಿಂದ ನನಗೆ ಯಾವುದೇ ಉಪಯೋಗವಿಲ್ಲ'; ಮೈದಾನದಲ್ಲೇ ಪಾಕ್ ಕ್ರಿಕೆಟಿಗರ ಮಧ್ಯೆ ವಾಕ್ಸಮರ! ವಿಡಿಯೋ ನೋಡಿ
ಸರ್ಫರಾಜ್ ಅಹ್ಮದ್ ಮತ್ತು ಸೌದ್ ಶಕೀಲ್
ಪೃಥ್ವಿಶಂಕರ
|

Updated on:Dec 06, 2023 | 9:18 AM

Share

ಏಕದಿನ ವಿಶ್ವಕಪ್​ನಲ್ಲಿ (ODI World Cup 2023) ನಿರಸ ಪ್ರದರ್ಶನ ನೀಡಿದ ನಂತರ ಸಾಕಷ್ಟು ಬದಲಾವಣೆಗಳಾಗಿರುವ ಪಾಕಿಸ್ತಾನ ತಂಡ ಇದೀಗ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲು ಆಸ್ಟ್ರೇಲಿಯಾಕ್ಕೆ (Pakistan vs Australia) ಬಂದಿಳಿದಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14 ರಿಂದ ಪರ್ತ್‌ನಲ್ಲಿ ನಡೆಯಲಿದೆ. ಬಾಬರ್ ಆಝಂ (Babar Azam) ನಾಯಕತ್ವ ತೊರೆದ ನಂತರ ಶಾನ್ ಮಸೂದ್ (Shan Masood) ಪಾಕಿಸ್ತಾನದ ಟೆಸ್ಟ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡದಲ್ಲಿ ಹಲವು ಯುವ ಮುಖಗಳಿಗೂ ಅವಕಾಶ ಸಿಕ್ಕಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಪಾಕಿಸ್ತಾನಿ ಆಟಗಾರರು ತಮ್ಮ ಅಭ್ಯಾಸದ ಸಮಯದಲ್ಲಿ ಪರಸ್ಪರ ವಾಗ್ವಾದ ನಡೆಸಿರುವುದನ್ನು ಕಾಣಬಹುದಾಗಿದೆ.

ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಪಾಕಿಸ್ತಾನ ತಂಡ ಅಭ್ಯಾಸ ನಡೆಸುತ್ತಿದೆ. ಇಲ್ಲಿ ಪಾಕ್ ತಂಡ ಡಿಸೆಂಬರ್ 6 ರಿಂದ ಅಭ್ಯಾಸ ಪಂದ್ಯವನ್ನೂ ಆಡಬೇಕಾಗಿದೆ. ಹೀಗಾಗಿ ಪಾಕ್ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ತಂಡದ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.

BAN vs NZ: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ

ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಪಾಕಿಸ್ತಾನದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಮತ್ತು ಯುವ ಬ್ಯಾಟ್ಸ್‌ಮನ್ ಸೌದ್ ಶಕೀಲ್ ಪರಸ್ಪರ ಮಾತಿನ ಚಕಮಕಿ ನಡೆಸಿರುವುದನ್ನು ಕಾಣಬಹುದಾಗಿದೆ. ಆದರೆ ಇಬ್ಬರ ನಡುವಿನ ಈ ವಾಗ್ವಾದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೀಡಿಯೊದಲ್ಲಿ ದಾಖಲಾಗಿರುವ ಸಂಭಾಷಣೆಗಳು ಈ ಇಬ್ಬರ ನಡುವಿನ ಹಳೆಯ ದ್ವೇಷವನ್ನು ಸೂಚಿಸುತ್ತವೆ.

ವೀಡಿಯೊದಲ್ಲಿರುವುದೇನು?

ವೀಡಿಯೊದ ಆರಂಭದಲ್ಲಿ ಯುವ ಬ್ಯಾಟರ್ ಶಕೀಲ್, ‘ನಾನು ಎಷ್ಟು ದಿನ ನಿಮಗೆ ಉಪಯೋಗಕ್ಕೆ ಬರುತ್ತೇನೆ?’ ಎಂದು ಸರ್ಫರಾಜ್​ ಬಳಿ ಕೇಳಿದ್ದಾರೆ. ಇದಕ್ಕೆ ಕೋಪದಿಂದ ಉತ್ತರಿಸಿರುವ ಸರ್ಫರಾಜ್, ‘ನಿನ್ನಿಂದ ನನಗೆ ಯಾವುದೇ ಪ್ರಯೋಜನವಿಲ್ಲ ಸಹೋದರ, ನಾನು ನಿನ್ನನ್ನು ಏನನ್ನೂ ಮಾಡಲು ಕೇಳಲಿಲ್ಲ. ನಾನು ಸ್ವಾಪ್ ಮಾಡು ಎಂದು ಕೇಳಿಲ್ಲ, ಯಾರೊಂದಿಗೆ ಸ್ವಾಪ್ ಮಾಡಬೇಕೋ ಅವರ ಜೊತೆಯೇ ಮಾಡಿದ್ದೇನೆ’ ಎಂದಿದ್ದಾರೆ. ಇದಕ್ಕೆ ಶಕೀಲ್ ಕೂಡ ಉತ್ತರಿಸಿದ್ದು, ‘ನನ್ನನ್ನ ಸ್ವಾಪ್ ಮಾಡಲಾಗಿದೆ. ಇದರಿಂದ ನಿಮಗೆ ಉಪಯೋಗವಾಗಿದೆ’ ಎಂದಿದ್ದಾರೆ.

ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ

ಶಾನ್ ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಆದರೆ ಅದಕ್ಕೂ ಮುನ್ನ ಡಿಸೆಂಬರ್ 6ರಿಂದ 9ರವರೆಗೆ ಅಭ್ಯಾಸ ಪಂದ್ಯ ನಡೆಯಲಿದೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪರ್ತ್‌ನಲ್ಲಿ, ಎರಡನೇ ಟೆಸ್ಟ್ ಮೆಲ್ಬೋರ್ನ್‌ನಲ್ಲಿ ಮತ್ತು ಮೂರನೇ ಟೆಸ್ಟ್ ಸಿಡ್ನಿಯಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ

ಶಾನ್ ಮಸೂದ್ (ನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಹಸನ್ ಅಲಿ, ಇಮಾಮ್-ಉಲ್-ಹಕ್, ಖುರ್ರಂ ಶಹಜಾದ್, ಮೀರ್ ಹಮ್ಜಾ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನೋಮನ್ ಅಲಿ, ಸಯೀಮ್ ಅಯೂಬ್, ಸಲ್ಮಾನ್ ಅಲಿ ಅಗಾ, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಸೌದ್ ಶಕೀಲ್ ಮತ್ತು ಶಾಹೀನ್ ಶಾ ಆಫ್ರಿದಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:09 am, Wed, 6 December 23