ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಭಾರತ (India vs Sri Lanka) ಗೆಲುವಿನತ್ತ ದಾಪುಗಾಲಿಡುತ್ತಿದೆ. ಟೀಮ್ ಇಂಡಿಯಾ ಗೆಲುವಿಗೆ ಲಂಕಾನ್ನರ 9 ವಿಕೆಟ್ಗಳ ಅವಶ್ಯತೆಯಿದ್ದರೆ ಇತ್ತ ಸಿಂಹಳೀಯರಿಗೆ ಜಯ ಸಾಧಿಸಲು ಬರೋಬ್ಬರಿ 419 ರನ್ಗಳು ಬೇಕಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಲಂಕಾ 1 ವಿಕೆಟ್ ಕಳೆದುಕೊಂಡಿ 28 ರನ್ ಬಾರಿಸಿದೆ. ಇಂದು ಭಾರತೀಯ ಬೌಲರ್ಗಳು ಅಬ್ಬರಿಸಿದರೆ ಮೂರೇ ದಿನಕ್ಕೆ ದ್ವಿತೀಯ ಟೆಸ್ಟ್ ಕೊನೆಗೊಳ್ಳಲಿದೆ. ನಿನ್ನೆ ಎರಡನೇ ದಿನದಾಟ ವಿಶೇಷ ಘಟನೆಯೊಂದು ನಡೆಯಿತು. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಜೊತೆ ಸೆಲ್ಫೀ ಕ್ಲಿಕ್ಕಿಸಲು ಚಿನ್ನಸ್ವಾಮಿ ಮೈದಾನಕ್ಕೇ ಅಭಿಮಾನಿಗಳು ಓಡಿ ಬಂದರು. ಫ್ಯಾನ್ಸ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಲು ಪೊಲೀಸರಂತು ಹರಸಾಹಸ ಪಟ್ಟರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಹೌದು, ವಿರಾಟ್ ಕೊಹ್ಲಿಯ ಎರಡನೇ ಹೋಮ್ ಗ್ರೌಂಡ್ ಎಂದೇ ಹೇಳಲಾಗುವ ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳು ಭಾರತ ಎಂದು ಕೂಗುವುದಕ್ಕಿಂತ ಹೆಚ್ಚು ವಿರಾಟ್ ಕೊಹ್ಲಿ, ಎಬಿಡಿ, ಆರ್ಸಿಬಿ ಎಂಬ ಕೂಗು ಮೊಳಗಿದ್ದೇ ಹೆಚ್ಚು. ಇದಕ್ಕೆ ಪ್ರತಿಯಾಗಿ ಕೊಹ್ಲಿ ಕೂಡ ಅಭಿಮಾನಿಗಳ ಜೊತೆ ಮೈದಾನದಿಂದಲೇ ಕೈ ಸನ್ನೆ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇದ್ದರು. ಕೊಹ್ಲಿ ತಮ್ಮ ಕೈಯಿಂದ ಹಾರ್ಟ್ ಸಿಂಬಲ್ ತೋರಿಸಿ ರೆಸ್ಪಾನ್ಸ್ ನೀಡಿದ್ದರು. ಮತ್ತೊಂದೆಡೆ ಎಬಿಡಿ, ಎಬಿಡಿ ಎಂದು ಕೂಗಿದ ತಕ್ಷಣ ಡಿವಿಲಿಯರ್ಸ್ ಅವರನ್ನು ಬ್ಯಾಟಿಂಗ್ನಲ್ಲಿ ಇಮಿಟೇಟ್ ಮಾಡಿದರು.
ಇದರ ನಡುವೆ ಭಾನುವಾರ ಪಂದ್ಯದ ಮಧ್ಯೆ ಅಭಿಮಾನಿಗಳು ಸೆಕ್ಯುರಿಟಿ ಕಣ್ಣು ತಪ್ಪಿಸಿ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳಲು ನೇರವಾಗಿ ಮೈದಾನಕ್ಕೆ ಓಡಿ ಬಂದರು. ದಿನದಾಟದ ಮುಕ್ತಾಯಕ್ಕೆ ಕೆಲವೇ ಹೊತ್ತು ಬಾಕಿ ಇರುವಾಗ ಮೈದಾನದ ಮೂರು ಕಡೆಯಿಂದ ಏಕಾಏಕಿ ಕೆಲ ಮಂದಿ ಮೈದಾನಕ್ಕೆ ನುಗ್ಗಿದರು. ಇವರನ್ನು ಹೊರಗೆ ಕಳುಹಿಸುವಷ್ಟರಲ್ಲಿ ಪೊಲೀಸರಿಗೆ ಸುಸ್ತಾಯಿತು. ಆದರೆ, ಕೊಹ್ಲಿ ಕೆಲ ಅಭಿಮಾನಿಗಳ ಜೊತೆ ಸೆಲ್ಫಿ ಕೂಡ ಕ್ಲಿಕ್ಕಿಸಿದರು. ಇಲ್ಲಿದೆ ನೋಡಿ ಆ ವಿಡಿಯೋ.
Lucky Fans Got the Chance to Click a selfie with Virat Kohli !! @imVkohli
Dream Come Moment for every fan ??#INDvsSL pic.twitter.com/welan3xFzg— Samy :): (@ZLX_comfort) March 13, 2022
ಜೈಲು ಸೇರಿದ ಯುವಕರು:
ಏಕಾಏಕಿ ವಿರಾಟ್ ಕೊಹ್ಲಿ ಬಳಿಗೆ ನುಗ್ಗಿದ್ದ ಯುವಕರು ಇದೀಗ ಜೈಲು ಪಾಲಾಗಿದ್ದಾರೆ. ಅತಿಕ್ರಮ ಪ್ರವೇಶ ಮತ್ತು ನಿಯಮ ಉಲ್ಲಂಘನೆ ಹಿನ್ನಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು ನಾಲ್ವರ ಬಂಧನ ಮಾಡಲಾಗಿದೆ. ಇಂದು ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. ಗುಲ್ಬರ್ಗಾದ ಓರ್ವ ಹಾಗೂ ಬೆಂಗಳೂರಿನ ಮೂವರು ಎಂದು ಗುರುತಿಸಲಾಗಿದೆ.
ಪ್ರವಾಸಿ ಶ್ರೀಲಂಕಾ ತಂಡದ ಎದುರು ಸವಾರಿ ಮುಂದುವರಿಸಿದ ಭಾರತ ತಂಡ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸಿದೆ. ಪ್ರವಾಸಿ ತಂಡಕ್ಕೆ 447 ರನ್ ಗೆಲುವಿನ ಗುರಿ ನೀಡಿರುವ ರೋಹಿತ್ ಶರ್ಮ ಪಡೆ ಎರಡನೇ ಇನಿಂಗ್ಸ್‌ನಲ್ಲೂ ಆರಂಭಿಕ ಆಘಾತ ನೀಡಿದೆ. ಪಂದ್ಯವನ್ನು ಮೂರೇ ದಿನಗಳಲ್ಲಿ ಜಯಿಸಲು ಭಾರತಕ್ಕೆ 9 ವಿಕೆಟ್‌ಗಳಷ್ಟೇ ಬಾಕಿ ಉಳಿದಿವೆ. ದ್ವಿತೀಯ ದಿನದಾಟದಲ್ಲೂ ಬೌಲರ್ಗಳು ಮೇಲುಗೈ ಸಾಧಿಸಿದರು. ಒಟ್ಟು 14 ವಿಕೆಟ್ ಪತನಗೊಂಡವು. ಶ್ರೀಲಂಕಾ ಒಂದು ವಿಕೆಟಿಗೆ 28 ರನ್ ಮಾಡಿದ್ದು, ಸೋಲಿನತ್ತ ಮುಖ ಮಾಡಿದೆ.
ಮೊದಲ ದಿನದಂತ್ಯದಲ್ಲಿ 86 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಲಂಕಾ ತನ್ನ ಉಳಿದ ನಾಲ್ಕು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತು. ದ್ವಿತೀಯ ಸರದಿಯಲ್ಲಿ ಅಬ್ಬರಿಸಿದ್ದು ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್. ಇವರಿಬ್ಬರೂ ಅರ್ಧ ಶತಕ ಬಾರಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ 92 ರನ್ ಬಾರಿಸಿದ್ದ ಅಯ್ಯರ್ ಇಲ್ಲಿ 67 ರನ್ (87 ಎಸೆತ, 9 ಬೌಂಡರಿ) ಹೊಡೆದು ಮತ್ತೆ ಟಾಪ್ ಸ್ಕೋರರ್ ಎನಿಸಿದರು. ರಿಷಭ್ ಪಂತ್ ತಮ್ಮ ಬಿರುಸಿನ ಆಟದ ಮೂಲಕ ಧಾರಾಳ ರಂಜನೆ ಒದಗಿಸಿದರು. ಕೇವಲ 28 ಎಸೆತಗಳಿಂದ ಅವರ ಅರ್ಧ ಶತಕ ಪೂರ್ತಿಗೊಂಡಿತು. ಭಾರತ 303 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡು ಶ್ರೀಲಂಕಾಕ್ಕೆ ಗೆಲ್ಲಲು447 ರನ್ ಟಾರ್ಗೆಟ್ ನೀಡಿತು.
IPL 2022: ಪ್ರತಿ ಐಪಿಎಲ್ನಲ್ಲೂ ಕೊನೆ ಗಳಿಗೆಯಲ್ಲಿ ಕೈಕೊಡುವ ಆಂಗ್ಲ ಕ್ರಿಕೆಟಿಗರನ್ನು ನಂಬುವುದಾದರೂ ಹೇಗೆ?
Published On - 8:53 am, Mon, 14 March 22