IND vs SL: ಸತತ 4 ಬೌಂಡರಿ! ಒಂದೇ ಓವರ್​ನಲ್ಲಿ 23 ರನ್ ದೋಚಿದ ಗಿಲ್- ರೋಹಿತ್

| Updated By: ಪೃಥ್ವಿಶಂಕರ

Updated on: Jan 15, 2023 | 3:14 PM

IND vs SL: ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ಗಿಲ್, ಮೊದಲ 10 ಓವರ್‌ಗಳಲ್ಲಿ 75 ರನ್ ಸೇರಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದಾರೆ. ಅದರಲ್ಲೂ ಶುಭಮನ್ ಗಿಲ್ ಒಂದೇ ಓವರ್​ನಲ್ಲಿ ಸತತ 4 ಬೌಂಡರಿ ಸಿಡಿಸಿ ಇಂದು ಅಬ್ಬರಿಸುವ ಸೂಚನೆ ನೀಡಿದ್ದಾರೆ.

IND vs SL: ಸತತ 4 ಬೌಂಡರಿ! ಒಂದೇ ಓವರ್​ನಲ್ಲಿ 23 ರನ್ ದೋಚಿದ ಗಿಲ್- ರೋಹಿತ್
ಶುಭಮನ್ ಗಿಲ್- ರೋಹಿತ್ ಶರ್ಮಾ
Follow us on

ಭಾರತ ಮತ್ತು ಶ್ರೀಲಂಕಾ (India and Sri Lanka) ನಡುವಿನ ಮೂರನೇ ಏಕದಿನ ಪಂದ್ಯ ತಿರುವನಂತಪುರಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಕೊನೆಯ ಎರಡು ಏಕದಿನ ಪಂದ್ಯಗಳಂತೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ (Rohit Sharma and Shubman Gill) ಭಾರತದ ಪರ ಇನ್ನಿಂಗ್ಸ್ ಆರಂಭಿಸಿದರು. ಇಬ್ಬರೂ ಮೊದಲ ಪವರ್‌ಪ್ಲೇಯಲ್ಲಿ ಅಂದರೆ ಮೊದಲ 10 ಓವರ್‌ಗಳಲ್ಲಿ 75 ರನ್ ಸೇರಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದಾರೆ. ಅದರಲ್ಲೂ ಶುಭಮನ್ ಗಿಲ್ ಒಂದೇ ಓವರ್​ನಲ್ಲಿ ಸತತ 4 ಬೌಂಡರಿ ಸಿಡಿಸಿ ಇಂದು ಅಬ್ಬರಿಸುವ ಸೂಚನೆ ನೀಡಿದ್ದಾರೆ. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಶ್ರೀಲಂಕಾ ತಂಡದ ಮೊದಲ ಓವರ್ ಮೇಡನ್ ಆಯಿತು. ಅಲ್ಲದೆ ಮೊದಲ 5 ಓವರ್‌ಗಳಲ್ಲಿ ಭಾರತ ಕೇವಲ 19 ರನ್ ಸೇರಿಸಲಷ್ಟೇ ಶಕ್ತವಾಯಿತು. ಆದರೆ ಮುಂದಿನ 5 ಓವರ್‌ಗಳಲ್ಲಿ ಇಡೀ ಪಂದ್ಯದ ಚಿತ್ರಣವೇ ಬದಲಾಗಿದಿಲ್ಲದೆ ಆರಂಭಿಕರಿಬ್ಬರು ಬರೋಬ್ಬರಿ 56 ರನ್ ಚಚ್ಚಿದರು.

ಭಾರತದ ಆರಂಭ ನಿಧಾನವಾದರೂ ಆ ಬಳಿಕ ರೋಹಿತ್ ಹಾಗೂ ಗಿಲ್ ಶ್ರೀಲಂಕಾ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ಆರನೇ ಓವರ್‌ನಲ್ಲಿ ರೋಹಿತ್ ಮತ್ತು ಗಿಲ್ ಮೊದಲ 10 ಓವರ್‌ಗಳಲ್ಲಿಯೇ ಗರಿಷ್ಠ ರನ್ ಪೇರಿಸಿದರು. ಶ್ರೀಲಂಕಾ ಬೌಲರ್ ಲಹಿರು ಕುಮಾರ ಅವರ ಈ ಓವರ್‌ನಲ್ಲಿ ಭಾರತ ಒಟ್ಟು 23 ರನ್ ಗಳಿಸಿತು.

ಆರಂಭಿಸಿದ ರೋಹಿತ್, ಇತಿಶ್ರೀ ಹಾಡಿದ ಗಿಲ್!

ವಾಸ್ತವವಾಗಿ, 6ನೇ ಓವರ್ ಎಸೆದ ಲಹಿರು ಕುಮಾರ ಅವರನ್ನು ಬೆಂಡೆತ್ತುವ ಕೆಲಸವನ್ನು ರೋಹಿತ್ ಶರ್ಮಾ ಆರಂಭಿಸಿದರು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರೋಹಿತ್ ಸಿಂಗಲ್ ತೆಗೆದುಕೊಂಡು ಗಿಲ್​ಗೆ ಸ್ಟ್ರೈಕ್ ನೀಡಿದರು. ಬಳಿಕ ಓವರ್​ನ 4 ಎಸೆತಗಳನ್ನು ಬೌಂಡರಿ ದಾಟಿಸುವ ಕೆಲಸವನ್ನು ಗಿಲ್ ಮಾಡಿ ಮುಗಿಸಿದರು.

IND vs NZ: ರಾತ್ರೋರಾತ್ರಿ ಪಾಕಿಸ್ತಾನದಿಂದ ಭಾರತಕ್ಕೆ ಹಾರಿದ ನ್ಯೂಜಿಲೆಂಡ್ ತಂಡ; ವಿಡಿಯೋ ನೋಡಿ

ಸತತ 4 ಬೌಂಡರಿ ಬಾರಿಸಿದ ಗಿಲ್

ಲಹಿರು ಕುಮಾರ ಅವರ ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳಲ್ಲಿ ಗಿಲ್ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ 6ನೇ ಓವರ್ ಮೊದಲ ಪವರ್‌ಪ್ಲೇಯ ಅತ್ಯಂತ ದುಬಾರಿ ಓವರ್‌ ಎನಿಸಿಕೊಂಡಿತು. ಇದರ ನಂತರ, 10 ನೇ ಓವರ್​ನಲ್ಲಿ ಸತತ ಎರಡು ಸಿಕ್ಸರ್​ ಬಾರಿಸಿದ ರೋಹಿತ್, ಒಟ್ಟಾರೆ ಈ ಓವರ್​ನಲ್ಲಿ 16 ರನ್ ದೋಚಿದರು.

42 ರನ್​ಗಳಿಗೆ ಸುಸ್ತಾದ ರೋಹಿತ್ ಶರ್ಮಾ

ಮೊದಲ 10 ಓವರ್‌ಗಳಲ್ಲಿ 75 ರನ್ ಕಲೆಹಾಕಿದ ನಂತರವೂ ರೋಹಿತ್ ಮತ್ತು ಗಿಲ್ ಆಕ್ರಮಣಕಾರಿ ಆಟ ಮುಂದುವರಿಸಿದರು. ಇಬ್ಬರೂ 14ನೇ ಓವರ್ ಆಗುವಷ್ಟರಲ್ಲಿ ತಂಡದ ಸ್ಕೋರ್ ಅನ್ನು 100ರ ಸಮೀಪಕ್ಕೆ ಕೊಂಡೊಯ್ದರು. ಆದರೆ, ಟೀಂ ಇಂಡಿಯಾ 100 ರನ್ ಗಡಿ ದಾಟುವ ಮುನ್ನವೇ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಪೆವಿಲಿಯಸ್ ಸೇರಿಕೊಂಡರು. ತಮ್ಮ ಇನ್ನಿಂಗ್ಸ್​ನಲ್ಲಿ 49 ಎಸೆತಗಳನ್ನು ಎದುರಿಸಿದ ರೋಹಿತ್ 2 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 42 ರನ್ ಗಳಿಸಿ ಚಮಿಕ ಕರುಣಾರತ್ನೆಗೆ ವಿಕೆಟ್ ಒಪ್ಪಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sun, 15 January 23