IND vs SL: ಟೀಮ್ ಇಂಡಿಯಾದಿಂದ ಮೂವರು ಔಟ್!

India vs Sri lanka Test series 2026: ಭಾರತ ತಂಡವು ಕೊನೆಯ ಬಾರಿ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿ ಆಡಿದ್ದು 2017 ರಲ್ಲಿ. ಇದೀಗ ಬರೋಬ್ಬರಿ 9 ವರ್ಷಗಳ ದೀರ್ಘ ಬಿಡುವಿನ ಬಳಿಕ ಟೀಮ್ ಇಂಡಿಯಾ ಲಂಕಾದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಲು ಸಜ್ಜಾಗುತ್ತಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ.

IND vs SL: ಟೀಮ್ ಇಂಡಿಯಾದಿಂದ ಮೂವರು ಔಟ್!
Team India
Image Credit source: BCCI

Updated on: Jul 27, 2026 | 12:22 PM

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಇನ್ನೂ ಕೂಡ ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿರುವುದು. ಅಂದರೆ ಕೆಲ ಪ್ರಮುಖ ಆಟಗಾರರು ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ಸೂಕ್ತ ತಂಡವನ್ನು ಪ್ರಕಟಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೂರು ಆಟಗಾರರು ಔಟ್:

ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಮೂವರು ಆಟಗಾರರು ಹೊರಗುಳಿದಿದ್ದಾರೆ. ಈ ಮೂವರು ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ.

  • ಹರ್ಷಿತ್ ರಾಣಾ (ವೇಗದ ಬೌಲರ್): ಇಂಗ್ಲೆಂಡ್ ಪ್ರವಾಸದ ವೇಳೆ ಗಂಭೀರವಾದ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಹರ್ಷಿತ್ ರಾಣಾ, ಶ್ರೀಲಂಕಾ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
  • ನಿತೀಶ್ ಕುಮಾರ್ ರೆಡ್ಡಿ (ಆಲ್​ರೌಂಡರ್): ಯುವ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಹ್ಯಾಮ್​ಸ್ಟ್ರಿಂಗ್ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಆಯ್ಕೆಗೆ ಲಭ್ಯರಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
  • ವಾಷಿಂಗ್ಟನ್ ಸುಂದರ್ (ಸ್ಪಿನ್ ಆಲ್​ರೌಂಡರ್): ಇಂಗ್ಲೆಂಡ್ ಪ್ರವಾಸದಲ್ಲಿ ಕಾಲಿನ ಗಾಯಕ್ಕೆ ಒಳಗಾಗಿದ್ದ ಸುಂದರ್, ಆಗಸ್ಟ್ 15 ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.

ವಾಷಿಂಗ್ಟನ್ ಸುಂದರ್ ಎರಡನೇ ಟೆಸ್ಟ್‌ಗೆ ಲಭ್ಯರಿರುತ್ತಾರೆಯೇ ಇಲ್ಲವೇ ಎಂಬುದು ಅವರ ಚೇತರಿಕೆಯ ವೇಗದ ಮೇಲೆ ನಿರ್ಧಾರವಾಗಲಿದೆ. ಇವರ ಅನುಪಸ್ಥಿತಿಯಿಂದಾಗಿ ದೇಶಿ ಕ್ರಿಕೆಟ್ ತಾರೆ ಸರಾಂಶ್​ ಜೈನ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಭಾರತ ಮತ್ತು ಶ್ರೀಲಂಕಾ ಸರಣಿ ವೇಳಾಪಟ್ಟಿ:

ಆಗಸ್ಟ್ 4 ರಂದು ಕೊಲಂಬೋ ತಲುಪಲಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್‌ಗೂ ಮುನ್ನ ಸ್ಥಳೀಯ ಲಂಕಾ ಬೋರ್ಡ್ XI ವಿರುದ್ಧ 4 ದಿನಗಳ ಸುದೀರ್ಘ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ 2 ಟೆಸ್ಟ್ ಮ್ಯಾಚ್​ಗಳಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ದಿನಾಂಕ ಪಂದ್ಯದ ವಿವರ ಕ್ರೀಡಾಂಗಣ
ಆಗಸ್ಟ್ 7 – 10, 2026 4 ದಿನಗಳ ಅಭ್ಯಾಸ ಪಂದ್ಯ ಎನ್‌ಸಿಸಿ ಮೈದಾನ, ಕೊಲಂಬೋ
ಆಗಸ್ಟ್ 15 – 19, 2026 ಮೊದಲನೇ ಟೆಸ್ಟ್ ಪಂದ್ಯ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲೆ
ಆಗಸ್ಟ್ 23 – 27, 2026 ಎರಡನೇ ಟೆಸ್ಟ್ ಪಂದ್ಯ ಎಸ್‌ಎಸ್‌ಸಿ ಮೈದಾನ, ಕೊಲಂಬೋ

ಇದನ್ನೂ ಓದಿ: ಎಚ್ಚರಿಕೆ… ವೈಭವ್‌ಗೆ ಕೋಚ್ ಲಕ್ಷ್ಮಣ್ ಕಟ್ಟುನಿಟ್ಟಿನ ಸೂಚನೆ!

ಈ ಸರಣಿಯ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ಮ್ಯಾಚ್​ಗಳ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 26 ರಿಂದ ಶುರುವಾಗಲಿದ್ದು,  3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಾಗುತ್ತದೆ.

 

 

Follow Us