ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (India and Sri Lanka) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ (Suryakumar Yadav) ಅವರ 112 ರನ್ ಗಳ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನತ್ತಿದ ಶ್ರೀಲಂಕಾದ ಇನ್ನಿಂಗ್ಸ್ ಕೇವಲ 137 ರನ್‌ಗಳಿಗೆ ಅಂತ್ಯಗೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ, ಉಮ್ರಾನ್ ಮಲಿಕ್ (Umran Malik) ಮತ್ತು ಯುಜ್ವೇಂದ್ರ ಚಹಾಲ್ ತಲಾ ಎರಡು ವಿಕೆಟ್ ಪಡೆದರು. ಅದರಲ್ಲೂ ಉಮ್ರಾನ್ ಮಲಿಕ್ ಪಡೆದ ಲಂಕಾ ಸ್ಪಿನ್ನರ್ ಮಹೀಶ್ ತೀಕ್ಷಣ ಅವರ ವಿಕೆಟ್ ಮಾತ್ರ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಒಂದು ಕ್ಷಣ ನಿಬ್ಬೆರಗಾಗುವಂತೆ ಮಾಡಿತು.
ಮೊದಲ ಎರಡು ಟಿ20 ಪಂದ್ಯಗಳಂತೆ ಈ ಪಂದ್ಯದಲ್ಲೂ ಉಮ್ರಾನ್ ಮಲಿಕ್ ಮತ್ತೊಮ್ಮೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಎರಡು ಪ್ರಮುಖ ವಿಕೆಟ್ ಪಡೆಯುವ ಮೂಲಕ ಒಟ್ಟಾರೆ ಈ ಸರಣಿಯಲ್ಲಿ 7ವಿಕೆಟ್ ಪಡೆದು, ಅತ್ಯಧಿಕ ವಿಕೆಟ್ ಟೇಕರ್ ಎನಿಸಿಕೊಂಡರು. ಇನ್ನು ಈ ಪಂದ್ಯದಲ್ಲಿ ವನಿಂದು ಹಸರಂಗ ಮತ್ತು ಮಹೀಶ್ ತೀಕ್ಷಣ ವಿಕೆಟ್ ಕಬಳಿಸಿದ ಉಮ್ರಾನ್ ಲಂಕಾ ತಂಡವನ್ನು ಸಂಪೂರ್ಣವಾಗಿ ಪಂದ್ಯದಿಂದ ಹೊರಹಾಕಿದರು. ಅದರಲ್ಲೂ 146 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ, ಮಹೀಶ್ ತೀಕ್ಷಣ ಅವರನ್ನು ಉಮ್ರಾನ್ ಕ್ಲೀನ್ ಬೌಲ್ಡ್ ಮಾಡಿದ್ದು ಮಾತ್ರ ಇಡಿ ಪಂದ್ಯದ ಹೈಲೆಟ್ ಆಗಿತ್ತು. ಉಮ್ರಾನ್ ಅವರ ಆ ಚೆಂಡಿನ ವೇಗಕ್ಕೆ ಸಿಲುಕಿದ ಸ್ಟಂಪ್ ಮೀಟರ್ ದೂರ ಹಾರಿ ಬಿತ್ತು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Speed Gun Youngster from JAMMU and KASHMIR@umran_malik_01 @BCCI pic.twitter.com/IbMNaP2VCw
— Ajay kumar (@bhaderwahi_lad) January 7, 2023
ಈ ಪಂದ್ಯದಲ್ಲಿ ಉಮ್ರಾನ್ ಮೂರು ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರು. ಒಟ್ಟಾರೆ ಮೂರು ಪಂದ್ಯಗಳಲ್ಲಿ 7 ವಿಕೆಟ್ ಪಡೆದರು. ಅದರಲ್ಲೂ ಸರಣಿಯ ಮೊದಲ ಪಂದ್ಯದಲ್ಲಿ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದ ಉಮ್ರಾನ್, ಶ್ರೀಲಂಕಾ ನಾಯಕ ದಸುನ್ ಶನಕ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ಟೀಂ ಇಂಡಿಯಾ ವೇಗಿ ಒಬ್ಬ ಎಸೆದ ಅತ್ಯಂತ ವೇಗದ ಎಸೆತ ಎಂಬ ದಾಖಲೆಯನ್ನೂ ಉಮ್ರಾನ್ ಬರೆದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Sun, 8 January 23