ನಾಳೆಯಿಂದ ಅಂದರೆ ಆಗಸ್ಟ್ 2 ರಿಂದ ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಆದರೆ ಇದಕ್ಕೂ ಮುನ್ನ ಟಿ20 ಸರಣಿಯಂತೆ, ಏಕದಿನ ಸರಣಿ ಆರಂಭಕ್ಕೂ ಮುನ್ನ ಶ್ರೀಲಕಾ ತಂಡಕ್ಕೆ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟಿ20 ಸರಣಿ ಆರಂಭಕ್ಕೂ ಮುನ್ನ ಲಂಕಾ ತಂಡದ ಮೂವರು ಪ್ರಮುಖ ವೇಗಿಗಳು ನಾನಾ ಕಾರಣಗಳಿಂದಾಗಿ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಏಕದಿನ ಸರಣಿ ಆರಂಭಕ್ಕೂ ಮುನ್ನ ತಂಡದ ಇಬ್ಬರು ಸ್ಟಾರ್ ವೇಗಿಗಳಾದ ಮತಿಶಾ ಪತಿರಾನ ಮತ್ತು ದಿಲ್ಶಾನ್ ಮಧುಶಂಕ ಅವರು ಗಾಯದಿಂದ ಬಳಲುತ್ತಿದ್ದು, ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಇಂಜುರಿಯಿಂದಾಗಿ ಸರಣಿಯಿಂದ ಹೊರಬಿದ್ದಿರುವ ದಿಲ್ಶಾನ್ ಮಧುಶಂಕ ಹಾಗೂ ಮತಿಶಾ ಪತಿರಾನ ಅವರ ಬದಲಿಯಾಗಿ ಮೊಹಮ್ಮದ್ ಶಿರಾಜ್ ಮತ್ತು ಇಶಾನ್ ಮಾಲಿಂಗ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇವರಲ್ಲದೆ ಮೂವರು ಆಟಗಾರರನ್ನು ಸ್ಟ್ಯಾಂಡ್‌ಬೈ ಆಗಿ ತಂಡಕ್ಕೆ ಸೇರಿಸಿಕೊಂಡಿರುವುದಾಗಿ ತಿಳಿಸಿದೆ. ಇನ್ನು ಸ್ಟ್ಯಾಂಡ್‌ಬೈ ಆಗಿ ತಂಡ ಸೇರಿಕೊಂಡವರ ಪೈಕಿ ಕುಸಲ್ ಜನಿತ್, ಪ್ರಮೋದ್ ಮಧುಶನ್ ಮತ್ತು ಜೆಫ್ರಿ ವಾಂಡರ್ಸೆ ಸೇರಿದ್ದಾರೆ.
ಇದಲ್ಲದೆ ಆಟಗಾರರ ಇಂಜುರಿ ಬಗ್ಗೆ ಮಾಹಿತಿ ನೀಡಿರುವ ಮಂಡಳಿ, ದಿಲ್ಶಾನ್ ಮಧುಶಂಕ ಏಕದಿನ ಸರಣಿಗಾಗಿ ಅಭ್ಯಾಸ ಮಾಡುವ ವೇಳೆ ತಮ್ಮ ಎಡಗೈಗೆ ಗಾಯಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಅವರೊಂದಿಗೆ ಮೂರನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿ ಇಡೀ ಪಂದ್ಯದಿಂದ ಹೊರಗುಳಿದಿದ್ದ ಮತಿಶಾ ಪತಿರಾನ ಅವರೂ ಸಹ ಚೇತರಿಸಿಕೊಳ್ಳದ ಕಾರಣ ಏಕದಿನ ಸರಣಿಯಿಂದ ಹೊರಗುಳಿಯಬೇಕಾಗಿದೆ ಎಂದಿದೆ.
🚨 Matheesha Pathirana and Dilshan Madushanka will not take part in the ODI series as the players have sustained injuries. 🚨
Dilshan Madushanka suffered a left hamstring injury (Grade 2), the player sustained during fielding at practices.
Pathirana has suffered a mild sprain on… pic.twitter.com/t5hqtTPdKC— Sri Lanka Cricket 🇱🇰 (@OfficialSLC) August 1, 2024
ಶ್ರೀಲಂಕಾ ನವೀಕೃತ ಏಕದಿನ ತಂಡ: ಚರಿತ್ ಅಸಲಂಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಕಮಿಂದು ಮೆಂಡಿಸ್, ಜನಿತ್ ಲಿಯಾನಗೆ, ನಿಶಾನ್ ಮದುಷ್ಕ, ವನಿಂದು ಹಸರಂಗ, ದುನಿತ್ ವೆಲ್ಲಲಗೆ, ಚಾಮಿಕ ಕರುಣಾರತ್ನ, ಅಕಿಲ ದನಂಜಯ, ಮೊಹಮದ್ ಶಿರಾಜ್, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೋ, ಈಶಾನ್ ಮಾಲಿಂಗ.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಶ್ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್ , ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Thu, 1 August 24