2023ರ ವಿಶ್ವಕಪ್ (ICC World Cup 2023), ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ಗೆ (Shreyas Iyer) ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಆದರೆ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಮಾಡಿದ ಅಯ್ಯರ್ ತಮ್ಮ ಹಳೆಯ ಫಾರ್ಮ್ ಕಂಡುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ (India vs Sri Lanka) ಬಿರುಸಿನ ಅರ್ಧಶತಕ ಗಳಿಸಿದ ಶ್ರೇಯಸ್ ಅಯ್ಯರ್, ಈ ವಿಶ್ವಕಪ್ನ ಅತ್ಯಂತ ಉದ್ದದ ಸಿಕ್ಸರ್ ಸಹ ಬಾರಿಸಿದರು. ಶ್ರೀಲಂಕಾ ವಿರುದ್ಧ ಶ್ರೇಯಸ್ ಅಯ್ಯರ್ 106 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು. ಇದು ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಉದ್ದದ ಸಿಕ್ಸರ್ ಎನಿಸಿಕೊಂಡಿದೆ.
ವಾಸ್ತವವಾಗಿ ಭಾರತದ ಇನ್ನಿಂಗ್ಸ್ನ 36ನೇ ಓವರ್ನಲ್ಲಿ ಅಯ್ಯರ್ ಓವರ್‌ಪಿಚ್ ಚೆಂಡನ್ನು ಲಾಂಗ್ ಆನ್ ಮೇಲೆ ಸಿಕ್ಸರ್ಗಟ್ಟಿದರು. ಆದರೆ ಈ ಸಿಕ್ಸರ್ ನೆರವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸೇರಿದಂತೆ ಇತರ ಆಟಗಾರರ ಪತ್ನಿಯರು ಕುಳಿತಿದ್ದ ಕಡೆಗೆ ಹೋಯಿತು. ತಂಡದಿಂದ ಹೊರಗುಳಿದಿದ್ದ ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ತಮ್ಮ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ಪಂದ್ಯ ವೀಕ್ಷಿಸಲು ಅಲ್ಲಿಯೇ ಕುಳಿತಿದ್ದರು. ಅಯ್ಯರ್ ಸಿಕ್ಸರ್ ಬಾರಿಸಿದಾಗ ಭಯದಿಂದ ಧನಶ್ರೀ ವರ್ಮಾ ಸೀಟಿನಿಂದ ಎದ್ದರು. ರಿತಿಕಾ ಕೂಡ ತಮ್ಮ ಸೀಟಿನಿಂದ ಎದ್ದು ಓಡಿದರು. ಆದರೆ ಚೆಂಡು ಇವರು ಕುಳಿತಿದ್ದ ಸ್ಟ್ಯಾಂಡ್ ಮೇಲಿನ ಗೋಡೆಗೆ ಬಡಿದು ಕೆಳಗೆ ಬಿದ್ದಿತು.
IND vs SL: ಶತಕ ವಂಚಿತ ಗಿಲ್, ಕೊಹ್ಲಿ, ಶ್ರೇಯಸ್; ಲಂಕಾಗೆ 358 ರನ್ ಟಾರ್ಗೆಟ್
ಇದೇ ವಿಶ್ವಕಪ್‌ನಲ್ಲಿ 101 ಮೀಟರ್ ಉದ್ದದ ಸಿಕ್ಸರ್ ಸಿಡಿಸಿದ್ದ ಅಯ್ಯರ್, ಅತಿ ಉದ್ದದ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರು. ಆದರೆ ಆ ಬಳಿಕ ನೆದರ್ಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ್ದ ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ 104 ಮೀಟರ್ ಉದ್ದದ ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ಆದರೀಗ ಲಂಕಾ ವಿರುದ್ಧ 106 ಮೀಟರ್ ಉದ್ದದ ಸಿಕ್ಸರ್ ಸಿಡಿಸಿರುವ ಅಯ್ಯರ್, ಮತ್ತೊಮ್ಮೆ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
ಇದು 2023 ರ ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಎರಡನೇ ಅರ್ಧಶತಕ ಇನ್ನಿಂಗ್ಸ್ ಆಗಿದೆ. ಇದಕ್ಕೂ ಮೊದಲು ಅವರು ಪಾಕಿಸ್ತಾನದ ವಿರುದ್ಧ ಅಜೇಯ 53 ರನ್ ಸಿಡಿಸಿದ್ದರು. ಒಟ್ಟಾರೆಯಾಗಿ ಅಯ್ಯರ್, ಈ ವಿಶ್ವಕಪ್‌ನಲ್ಲಿ 216 ರನ್ ಕಲೆ ಹಾಕಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ