IND vs WI: 16 ಇನ್ನಿಂಗ್ಸ್‌ನಲ್ಲಿ ಫ್ಲಾಪ್ ಶೋ; ಟಿ20 ಸೂಪರ್ ಸ್ಟಾರ್ ಏಕದಿನದಲ್ಲಿ ಫೇಲ್..!

Suryakumar Yadav: ಸತತ ವೈಫಲ್ಯಗಳ ನಡುವೆಯೂ ಏಕದಿನ ಮಾದರಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್ ಮಾತ್ರ ತಮ್ಮ ಲಯ ಕಂಡುಕೊಳ್ಳದಿರುವುದು ಟೀಂ ಇಂಡಿಯಾವನ್ನು ಚಿಂತೆಗೀಡುಮಾಡಿದೆ.

IND vs WI: 16 ಇನ್ನಿಂಗ್ಸ್‌ನಲ್ಲಿ ಫ್ಲಾಪ್ ಶೋ; ಟಿ20 ಸೂಪರ್ ಸ್ಟಾರ್ ಏಕದಿನದಲ್ಲಿ ಫೇಲ್..!
ಸೂರ್ಯಕುಮಾರ್ ಯಾದವ್
Follow us
ಪೃಥ್ವಿಶಂಕರ
|

Updated on:Jul 28, 2023 | 8:03 AM

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಯಾವುದೇ ತೊಂದರೆಯಿಲ್ಲದೆ ಟೀಂ ಇಂಡಿಯಾ (Team India) ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾರೂ ನಿರೀಕ್ಷೆ ಮಾಡಿರದ ಬದಲಾವಣೆಗಳನ್ನು ಮಾಡಿತ್ತಾದರೂ, ಅದರಲ್ಲಿ ಪೂರ್ಣ ಯಶಸ್ಸು ಸಾಧಿಸಲಿಲ್ಲ. ಆರಂಭಿಕ ಇಶಾನ್ ಕಿಶನ್ ಬಿಟ್ಟರೆ, ಉಳಿದವರೆಲ್ಲ ರೋಹಿತ್ (Rohit Sharma) ಹಾಗೂ ದ್ರಾವಿಡ್​ಗೆ (Rahul Dravid) ದೊಡ್ಡ ಪ್ರಶ್ನೆಯಾಗಿ ಉಳಿದುಬಿಟ್ಟರು. ಅದರಲ್ಲೂ ಸತತ ವೈಫಲ್ಯಗಳ ನಡುವೆಯೂ ಏಕದಿನ ಮಾದರಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಮಾತ್ರ ತಮ್ಮ ಲಯ ಕಂಡುಕೊಳ್ಳದಿರುವುದು ಟೀಂ ಇಂಡಿಯಾವನ್ನು ಚಿಂತೆಗೀಡುಮಾಡಿದೆ.

ಕಳೆದ ಒಂದೂವರೆ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸಾಮಥ್ಯ್ರವನ್ನು ಸಾಭೀತುಪಡಿಸಿದ್ದಾರೆ. ತಮ್ಮ ನಿರ್ಭಯ ಬ್ಯಾಟಿಂಗ್ ಶೈಲಿ ಮತ್ತು ವಿಭಿನ್ನ ಹೊಡೆತಗಳೊಂದಿಗೆ ಟಿ20 ಮಾದರಿಯಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಸೂರ್ಯ ಹೊರಹೊಮ್ಮಿದ್ದಾರೆ. ಇದರ ಹೊರತಾಗಿಯೂ, ಸೂರ್ಯನಿಗೆ ಏಕದಿನ ಮಾದರಿ ಯಾಕೋ ಕೈ ಹಿಡಿಯುತ್ತಿಲ್ಲ. ಏಕದಿನ ಮಾದರಿಯಲ್ಲಿನ ಕಳಪೆ ಫಾರ್ಮ್ ವೆಸ್ಟ್ ಇಂಡೀಸ್ ವಿರುದ್ಧವೂ ಮುಂದುವರಿದಿದೆ.

IND vs IRE: ಐರ್ಲೆಂಡ್ ಪ್ರವಾಸಕ್ಕೆ ಸೂರ್ಯಕುಮಾರ್ ಯಾದವ್​ಗೆ ಭಾರತ ತಂಡದ ನಾಯಕತ್ವ..?

ಒಳ್ಳೆಯ ಅವಕಾಶ ಕೈಚೆಲ್ಲಿದ ಸೂರ್ಯ

ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬಡೋಸ್ಜ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಟೀಂ ಇಂಡಿಯಾ ಕೇವಲ 115 ರನ್​ಗಳನ್ನಷ್ಟೇ ಬೆನ್ನಟ್ಟಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ನಿಯಮಿತ ಸ್ಥಳಗಳಲ್ಲಿ ಬ್ಯಾಟಿಂಗ್‌ಗೆ ಬರಲಿಲ್ಲ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ರೋಹಿತ್ ತಂಡವನ್ನು ಗೆಲುವಿನ ದಡ ಸೇರಿಸಿದರೆ, ಇತ್ತ​ ಕೊಹ್ಲಿಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಬದಲು ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ನೀಡಲಾಯಿತು. ಹೀಗಾಗಿ ದುರ್ಬಲ ವಿಂಡೀಸ್ ವಿರುದ್ಧ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಂತು ತಂಡವನ್ನು ಗೆಲ್ಲಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಈ ಇನ್ನಿಂಗ್ಸ್ ಕೂಡ ಸೂರ್ಯನಿಗೆ ಮಹತ್ವದ್ದಾಗಿತ್ತು. ಏಕೆಂದರೆ ಈ ಪಂದ್ಯಕ್ಕೂ ಮೊದಲು ಸೂರ್ಯ ಆಡಿದ ಕೊನೆಯ 3 ಇನ್ನಿಂಗ್ಸ್​ಗಳಲ್ಲಿ ಸೂರ್ಯ ಶೂನ್ಯ ಸಾಧನೆ ಮಾಡಿದ್ದರು. ವಾಸ್ತವವಾಗಿ ಮಾರ್ಚ್‌ನಲ್ಲಿ, ಆಸ್ಟ್ರೇಲಿಯಾ ವಿರುದ್ಧ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಸೂರ್ಯ ಮೊದಲ ಎಸೆತದಲ್ಲೇ ಖಾತೆ ತೆರೆಯದೆಯೇ ಔಟಾಗಿದ್ದರು. ಆದರೆ ಬಾರ್ಬಡೋಸ್‌ನಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾದ ಸೂರ್ಯ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು.

16 ಇನ್ನಿಂಗ್ಸ್‌ಗಳಿಂದ ಸೂಪರ್ ಫ್ಲಾಪ್

ತಮ್ಮ ಇನ್ನಿಂಗ್ಸ್​ನಲ್ಲಿ 25 ಎಸೆತಗಳನ್ನು ಎದುರಿಸಿದ ಸೂರ್ಯ 19 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಟಿ20 ಶ್ರೇಯಾಂಕದ ನಂಬರ್ ಒನ್ ಬ್ಯಾಟ್ಸ್‌ಮನ್‌ಗೆ ಏಕದಿನದಲ್ಲಿ ಮತ್ತೊಂದು ಇನ್ನಿಂಗ್ಸ್ ನಿರಾಸೆ ಮೂಡಿಸಿತು. ತಮ್ಮ 48 ಪಂದ್ಯಗಳ ಟಿ20 ವೃತ್ತಿಜೀವನದಲ್ಲಿ, 46 ರ ಸರಾಸರಿಯಲ್ಲಿ ಮತ್ತು 175 ರ ಸ್ಟ್ರೈಕ್ ರೇಟ್‌ನಲ್ಲಿ 1675 ರನ್ (3 ಶತಕಗಳು, 13 ಅರ್ಧ ಶತಕಗಳು) ಬಾರಿಸಿರುವ ಸೂರ್ಯ, 22 ಏಕದಿನ ಇನ್ನಿಂಗ್ಸ್‌ಗಳಲ್ಲಿ 452 ರನ್‌ಗಳನ್ನು ಮಾತ್ರ ಕಲೆಹಾಕಿದ್ದಾರೆ. ಇದರಲ್ಲೂ ಅವರ ವೃತ್ತಿಜೀವನದ ಮೊದಲ 6 ಇನ್ನಿಂಗ್ಸ್‌ಗಳಲ್ಲಿ 261 ರನ್‌ಗಳು ಬಂದಿದ್ದು, ನಂತರದ 16 ಇನ್ನಿಂಗ್ಸ್‌ಗಳಲ್ಲಿ ಕೇವಲ 191 ರನ್​ ಮಾತ್ರ ಬಂದಿವೆ.

ವಿಶ್ವಕಪ್ ಕಷ್ಟ, ಇನ್ನೆಷ್ಟು ದಿನ ಅವಕಾಶ?

ವೈಟ್ ಬಾಲ್ ಫಾರ್ಮ್ಯಾಟ್‌ನಲ್ಲಿ ಸ್ಟಾರ್ ಆಗಿರುವ ಸೂರ್ಯ, ಏಕದಿನ ಮಾದರಿಯಲ್ಲಿ ಏಕೆ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ. ಎರಡನೆಯ ಮತ್ತು ಅದಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ, ಸೂರ್ಯ ಅವರಿಗೆ ಇಂತಹ ಅವಕಾಶಗಳು ಇನ್ನು ಎಷ್ಟು ಕಾಲ ಸಿಗುತ್ತದೆ? ಎಂಬುದು. ಏಕೆಂದರೆ ಸೂರ್ಯನ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಜೊತೆಗೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಕೂಡ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಸೂರ್ಯಕುಮಾರ್ ಬದಲಿಯಾಗಿ ಬೇರೆ ಆಟಗಾರನನ್ನು ಕಂಡುಕೊಳ್ಳಲು ಟೀಂ ಇಂಡಿಯಾಕ್ಕೆ ಇದು ಸೂಕ್ತ ಸಮಯ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 am, Fri, 28 July 23

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ