IND vs WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಹೆಸರಿಸಿದ ಟರ್ಬನೇಟರ್

IND vs WI: ಮೊದಲಿಗೆ ಟೆಸ್ಟ್ ಸರಣಿಯನ್ನು ಆಡಲಿವೆ. ಆ ನಂತರ ಏಕದಿನ ಸರಣಿ ನಡೆಯಲ್ಲಿದ್ದು, ಅಂತಿಮವಾಗಿ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರೊಂದಿಗೆ ಭಾರತದ ವಿಂಡೀಸ್ ಪ್ರವಾಸ ಅಂತ್ಯಗೊಳ್ಳಲಿದೆ.

IND vs WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಹೆಸರಿಸಿದ ಟರ್ಬನೇಟರ್
ಭಾರತ ಟಿ20 ತಂಡ, ಹರ್ಭಜನ್ ಸಿಂಗ್
Follow us
ಪೃಥ್ವಿಶಂಕರ
|

Updated on:Jun 14, 2023 | 1:04 PM

ಟೀಂ ಇಂಡಿಯಾ (Team India) ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ (WTC Final) ಆಗಲು ವಿಫಲವಾಗಿದೆ. ನ್ಯೂಜಿಲೆಂಡ್ ನಂತರ ಇದೀಗ ಆಸ್ಟ್ರೇಲಿಯಾ ಟೀಂ ಇಂಡಿಯಾವನ್ನು ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಟೀಂ ಇಂಡಿಯಾ ಈ ಸೋಲನ್ನು ಮರೆತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದೆ. ಆದರೆ ಈ ಸರಣಿಗೂ ಮೊದಲು ಟೀಂ ಇಂಡಿಯಾದ ಆಟಗಾರರು ಬರೋಬ್ಬರಿ 1 ತಿಂಗಳು ವಿಶ್ರಾಂತಿ ಪಡೆಯಲ್ಲಿದ್ದು ಆ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ (India’s tour to West Indies) ಮಾಡಲಿದ್ದಾರೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸ ಜುಲೈ 12 ರಿಂದ ಆರಂಭವಾಗಲಿದ್ದು, ಮೊದಲಿಗೆ ಟೆಸ್ಟ್ ಸರಣಿಯನ್ನು ಆಡಲಿವೆ. ಆ ನಂತರ ಏಕದಿನ ಸರಣಿ ನಡೆಯಲ್ಲಿದ್ದು, ಅಂತಿಮವಾಗಿ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರೊಂದಿಗೆ ಭಾರತದ ವಿಂಡೀಸ್ ಪ್ರವಾಸ ಅಂತ್ಯಗೊಳ್ಳಲಿದೆ.

15 ಸದಸ್ಯರ ಬಲಿಷ್ಠ ತಂಡ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ಸೋತ ಬಳಿಕ ಮೂರು ಮಾದರಿಯ ಕ್ರಿಕೆಟ್​ನಲ್ಲೂ ಭಾರತದ ತಂಡದಲ್ಲಿ ಮಹತ್ವದ ಬದಲಾವಣೆಗೆ ಬಿಸಿಸಿಐ ಮುಂದಾಗಿದೆ. ಹೀಗಾಗಿ ಬದಲಾವಣೆಯ ಮೊದಲ ಹೆಜ್ಜೆಯಂತೆ ವಿಂಡೀಸ್ ವಿರುದ್ಧ ಈ ಪ್ರಯೋಗಕ್ಕೆ ಕೈ ಹಾಕಲಿದೆ. ಅದರ ಮುನ್ನುಡಿಯಂತೆ ಟೀಂ ಇಂಡಿಯಾದ ಮಾಜಿ ಆಟಗಾರ ಹಭರ್ಜನ್ ಸಿಂಗ್, ಆಗಸ್ಟ್ 3 ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರ ಬಲಿಷ್ಠ ಟೀಂ ಇಂಡಿಯಾವನ್ನು ಹೆಸರಿಸಿದ್ದಾರೆ.

IND vs WI: ವಿಂಡೀಸ್ ಪ್ರವಾಸದಲ್ಲಿ ಈ ಐದು ಹೊಸ ಮುಖಗಳಿಗೆ ಟೀಂ ಇಂಡಿಯಾದಲ್ಲಿ ಅವಕಾಶ

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾವನ್ನು ಆಯ್ಕೆ ಮಾಡಿರುವ ಹರ್ಭಜನ್, ಐಪಿಎಲ್​ನಲ್ಲಿ ಮಿಂಚಿದ ಆಟಗಾರರು ಹಾಗೂ ಹಳೆಯ ಟಿ20 ತಂಡದ ಕೆಲವು ಆಟಗಾರರನ್ನು ತೆಗೆದುಕೊಂಡು ತಂಡ ಕಟ್ಟಿದ್ದಾರೆ.

ನಾಲ್ವರು ಆರಂಭಿಕರು

ಹಭರ್ಜನ್ ಹೆಸರಿಸಿರುವ ತಂಡದಲ್ಲಿ ಈ ಬಾರಿಯ ಐಪಿಎಲ್​ನ ಸೂಪರ್​ ಸ್ಟಾರ್​ಗಳಾದ ರಿಂಕು ಸಿಂಗ್, ತಿಲಕ್ ವರ್ಮಾ, ಆಕಾಶ್ ಮಧ್ವಲ್, ಜಿತೇಶ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ಟರ್ಬನೇಟರ್ ಪ್ರಕಟಿಸಿರುವ ತಂಡದಲ್ಲಿ 4 ಆರಂಭಿಕ ಆಟಗಾರರು ಸ್ಥಾನ ಪಡೆದಿದ್ದಾರೆ.

ಹರ್ಭಜನ್ ತಂಡದಲ್ಲಿ 4 ಆಟಗಾರರು ಆರಂಭಿಕರಿದ್ದು, ಇದರಲ್ಲಿ ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಸೇರಿದ್ದಾರೆ. ಇನ್ನೊಂದು ಅಚ್ಚರಿಯೆಂದರೆ, ಈ ಐಪಿಎಲ್​ನಲ್ಲಿ ಕೆಕೆಆರ್ ತಂಡದಲ್ಲಿ ಸ್ಥಾನ ಪಡೆದು ಹೆಚ್ಚು ಪಂದ್ಯಗಳನ್ನಾಡದ ಹರ್ಷಿತ್ ರಾಣಾಗೂ ಭಜ್ಜಿ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.

ಮಧ್ಯಮ ಕ್ರಮಾಂಕ, ಬೌಲಿಂಗ್ ವಿಭಾಗ ಹೀಗಿದೆ

ಮಧ್ಯಮ ಕ್ರಮಾಂಕದ ಜವಬ್ದಾರಿಯನ್ನು ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾಗೆ ನೀಡಿರುವ ಹಭರ್ಜನ್, ಫಿನಿಷರ್ ಪಾತ್ರಕ್ಕೆ ರಿಂಕು ಸಿಂಗ್ ಹಾಗೂ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದಾರೆ. ಸ್ಪಿನ್ ಆಲ್​ರೌಂಡರ್ ಆಗಿ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಾಹಲ್ ಹಾಗೂ ರವಿ ಬಿಷ್ಣೋಯ್ ಸ್ಥಾನ ಪಡೆದಿದ್ದರೆ, ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಆಕಾಶ್ ಮಧ್ವಲ್ ಸ್ಥಾನ ಪಡೆದಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಗಾಗಿ ಹರ್ಭಜನ್ ಸಿಂಗ್ ಹೆಸರಿಸಿದ ಭಾರತ ಟಿ20 ತಂಡ: ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಆಕಾಶ್ ಮಧ್ವಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Wed, 14 June 23