IND vs WI: ವಿಂಡೀಸ್ ಪ್ರವಾಸದಲ್ಲಿ ಈ ಐದು ಹೊಸ ಮುಖಗಳಿಗೆ ಟೀಂ ಇಂಡಿಯಾದಲ್ಲಿ ಅವಕಾಶ

IND vs WI: ಭವಿಷ್ಯದ ಟೀಂ ಇಂಡಿಯಾವನ್ನು ಕಟ್ಟಲು ಮುಂದಾಗಿರುವ ಬಿಸಿಸಿಐ ಈ ಸರಣಿಯಿಂದ ಹೊಸ ಮುಖಗಳಿಗೆ ಆಧ್ಯತೆ ನೀಡುವ ಸಾಧ್ಯತೆಗಳಿವೆ.

ಪೃಥ್ವಿಶಂಕರ
|

Updated on: Jun 14, 2023 | 11:59 AM

ಸದ್ಯ ಡಬ್ಲ್ಯುಟಿಸಿ ಫೈನಲ್ ಮುಗಿಸಿರುವ ಟೀಂ ಇಂಡಿಯಾಗೆ ಒಂದು ತಿಂಗಳು ವಿಶ್ರಾಂತಿ ಸಿಕ್ಕಿದೆ. ಆ ಬಳಿಕ ಭಾರತ ತಂಡ ಏಕದಿನ, ಟಿ20, ಟೆಸ್ಟ್ ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡುತ್ತಿದೆ. ಭವಿಷ್ಯದ ಟೀಂ ಇಂಡಿಯಾವನ್ನು ಕಟ್ಟಲು ಮುಂದಾಗಿರುವ ಬಿಸಿಸಿಐ ಈ ಸರಣಿಯಿಂದ ಹೊಸ ಮುಖಗಳಿಗೆ ಆಧ್ಯತೆ ನೀಡುವ ಸಾಧ್ಯತೆಗಳಿವೆ. ಟೀಂ ಇಂಡಿಯಾದಲ್ಲಿ ಒಂದು ವೇಳೆ ಬದಲಾವಣೆ ಗಾಳಿ ಬೀಸಿದರೆ, ಈ ಐದು ಯುವ ಆಟಗಾರರು ಟೀಂ ಇಂಡಿಯಾ ಪರ ಆಡಲಿದ್ದಾರೆ.

1 / 6
ಯಶಸ್ವಿ ಜೈಸ್ವಾಲ್: 21 ವರ್ಷ ವಯಸ್ಸಿನ ಅನ್‌ಕ್ಯಾಪ್ಡ್ ಸ್ಟಾರ್ ಕೆರಿಬಿಯನ್ ಪ್ರವಾಸದಲ್ಲಿ ಭಾರತದ ಟೆಸ್ಟ್ ತಂಡದ ಹಾಗೂ ಟಿ20 ತಂಡದಲ್ಲಿ ಆಡುವ ಸಾಧ್ಯತೆಗಳಿವೆ. ಸದ್ಯ ಐಪಿಎಲ್​ನಲ್ಲಿ ಅಬ್ಬರಿಸಿದ್ದ ಜೈಸ್ವಾಲ್ ಬರೋಬ್ಬರಿ 625 ರನ್ ಸಿಡಿಸಿ, ಆರೆಂಜ್ ಕ್ಯಾಪ್​ ರೇಸ್​​ನಲ್ಲಿದ್ದರು. ಅಲ್ಲದೆ ಆರಂಭಿಕರಾಗಿ ತಂಡಕ್ಕೆ ಸ್ಫೋಟಕ ಆರಂಭ ನೀಡುವಲ್ಲಿ ಜೈಸ್ವಾಲ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

2 / 6
ಮುಖೇಶ್ ಶರ್ಮಾ: ಡಬ್ಲ್ಯುಟಿಸಿ ಫೈನಲ್​​ಗೆ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಿದ್ದ ಮೂವರು ಮೀಸಲು ವೇಗಿಗಳಲ್ಲಿ ಮುಖೇಶ್ ಕೂಡ ಒಬ್ಬರಾಗಿದ್ದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ಸರಣಿಗಾಗಿ ಭಾರತದ ತಂಡದ ಭಾಗವಾಗಿದ್ದ ಮುಖೇಶ್, ಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೆ ಆದರೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಹೀಗಾಗಿ ವಿಂಡೀಸ್ ಪ್ರವಾಸದ ವೇಳೆ ಮುಖೇಶ್‌ಗೆ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಉತ್ತಮ ಅವಕಾಶವಿದೆ.

3 / 6
ರಿಂಕು ಸಿಂಗ್: ಐಪಿಎಲ್ ಇತಿಹಾಸದಲ್ಲಿ ಕೊನೆಯ ಓವರ್​ನಲ್ಲಿ ಐದು ಎಸೆತಗಳಿಗೆ ಐದು ಸಿಕ್ಸರ್ ಸಿಡಿಸಿ, ಕೆಕೆಆರ್ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದ ರಿಂಕು ಸಿಂಗ್ ಕೂಡ ವಿಂಡೀಸ್ ಪ್ರವಾಸದ ವೇಳೆ ಏಕದಿನ ಮತ್ತು ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆಯುವ ಸಾಧ್ಯತೆಗಳಿವೆ.

4 / 6
ಜಿತೇಶ್ ಶರ್ಮಾ: ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಗಾಗಿ ಭಾರತದ ಟಿ20 ತಂಡದಲ್ಲಿ ಆಯ್ಕೆಯಾಗಿದ್ದ ಜಿತೇಶ್ ಶರ್ಮಾಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಿತೇಶ್, ವಿಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

5 / 6
ಸರ್ಫರಾಜ್ ಖಾನ್: ದೇಶೀ ಕ್ರಿಕೆಟ್​ನಲ್ಲಿ ಸಾಕಷ್ಟು ಸ್ಕೋರ್ ಗಳಿಸಿದ್ದರೂ, ಸರ್ಫರಾಜ್​ಗೆ ಇನ್ನೂ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ಟೀಂ ಇಂಡಿಯಾದ ಭವಿಷ್ಯದ ಟೆಸ್ಟ್ ತಂಡವನ್ನು ಕಟ್ಟುವ ಗುರಿ ಇಟ್ಟಿರುವ ಬಿಸಿಸಿಐ, ವಿಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸರ್ಫರಾಜ್ ಖಾನ್​ಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

6 / 6
Follow us
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ

ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ

ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ

ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್

ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?

ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ