ಎರಡು ಬಾರಿಯ ಏಕದಿನ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡವನ್ನು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ (India vs West Indies) ಇಂದಿನಿಂದ ಎದುರಿಸಲಿದೆ. ವೇಳಾಪಟ್ಟಿಯಂತೆ ಮೊದಲ ಎರಡು ಪಂದ್ಯಗಳು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ (Kensington Oval in Bridgetown, Barbados) ಜುಲೈ 27 ಮತ್ತು 29 ರಂದು ನಡೆಯಲಿವೆ. ಬಳಿಕ ಸರಣಿಯ ಕೊನೆಯ ಪಂದ್ಯವು ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದೆಡೆ ಏಕದಿನ ವಿಶ್ವಕಪ್ನಲ್ಲಿ (ODI World Cup) ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿರುವ ಕೆರಿಬಿಯನ್ನರಿಗೆ ಈ ಸರಣಿ ಔಪಚಾರಿಕವಾಗಿದ್ದರೂ, ತವರಿನಲ್ಲಿ ಟೆಸ್ಟ್ ಸರಣಿ ಬಳಿಕ ಏಕದಿನ ಸರಣಿಯನ್ನು ಕಳೆದುಕೊಳ್ಳಲು ಆತಿಥೇಯರು ಬಯಸುವುದಿಲ್ಲ. ಇತ್ತ ವಿಶ್ವಕಪ್ಗೆ ಆತಿಥ್ಯವಹಿಸುತ್ತಿರುವುದು ಭಾರತವೇ ಆಗಿರುವುದರಿಂದ ಈ ಸರಣಿಯನ್ನು ಗೆದ್ದು ವಿಶ್ವಕಪ್ಗೆ ಎಂಟ್ರಿಕೊಡಬೇಕಾದ ಅನಿವಾರ್ಯತೆ ಟೀಂ ಇಂಡಿಯಾಕ್ಕೆ (Team India) ಎದುರಾಗಿದೆ.
ಈ ಉಭಯ ದೇಶಗಳ ನಡವಿನ ಕೊನೆಯ ಎಂಟು ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ, ಈ ಸರಣಿಯಲ್ಲೂ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸಲು ಬಯಸಿದೆ. ಹಾಗೆಯೇ ಉಭಯ ತಂಡಗಳ ಏಕದಿನ ಕಾಳಗದ ಮುಖಾಮುಖಿ ವರದಿಯನ್ನು ನೋಡುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ 139 ಪಂದ್ಯಗಳು ನಡೆದಿದ್ದು 70ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದರೆ, 63 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಎರಡು ಪಂದ್ಯಗಳು ಟೈ ಆಗಿದ್ದರೆ, ನಾಲ್ಕು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಇನ್ನು ಈ ಎರಡೂ ತಂಡಗಳ 139 ಏಕದಿನ ಮುಖಾಮುಖಿಯಲ್ಲಿ ಕಂಡು ಬಂದ ವಿಶಿಷ್ಟ ಮೈಲಿಗಲ್ಲುಗಳ ಪಕ್ಷಿನೋಟವನ್ನು ನೋಡುವುದಾದರೆ..
IND vs WI: ಭಾರತ- ವಿಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಕಾಟ..?
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Thu, 27 July 23