Kensington Oval Pitch Report: ಇಂದು ಭಾರತ-ವೆಸ್ಟ್ ಇಂಡೀಸ್ ಮೊದಲ ಏಕದಿನ: ಕೆನ್ಸಿಂಗ್ಟನ್​ ಓವಲ್​ನ ಥ್ರಿಲ್ಲರ್ ಪಿಚ್ ಯಾರಿಗೆ ಸಹಕಾರಿ?

India vs West Indies: ಭಾರತ ಹಾಗೂ ವೆಸ್ಟ್ ಇಂಡೀಸ್ ಉಭಯ ತಂಡಗಳಿಗೂ ಈ ಸರಣಿ ಸಾಕಷ್ಟು ಮುಖ್ಯವಾಗಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ. ಅದಕ್ಕೆ ತಕ್ಕಂತೆ ಕೆನ್ನಿಂಗ್ಟನ್ ಓವಲ್ ಪಿಚ್ ಕೂಡ ಅದ್ಭುತವಾಗಿದೆ.

Kensington Oval Pitch Report: ಇಂದು ಭಾರತ-ವೆಸ್ಟ್ ಇಂಡೀಸ್ ಮೊದಲ ಏಕದಿನ: ಕೆನ್ಸಿಂಗ್ಟನ್​ ಓವಲ್​ನ ಥ್ರಿಲ್ಲರ್ ಪಿಚ್ ಯಾರಿಗೆ ಸಹಕಾರಿ?
IND vs WI 1st ODI Pitch Report
Follow us
Vinay Bhat
|

Updated on: Jul 27, 2023 | 7:16 AM

ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ವೈಟ್ ಬಾಲ್ ಕ್ರಿಕೆಟ್ ಸರಣಿಗೆ ಇಂದು ಚಾಲನೆ ಸಿಗಲಿದೆ. ಎರಡು ಪಂದ್ಯಗಳ ಟೆಸ್ಟ್​ನಲ್ಲಿ 1-0 ಮುನ್ನಡೆ ಪಡೆದುಕೊಂಡು ಸರಣಿ ಜಯಿಸಿದ್ದ ಟೀಮ್ ಇಂಡಿಯಾ (Team India) ಇದೀಗ ಏಕದಿನದ ಮೇಲೂ ಕಣ್ಣಿದೆ. ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಬಾರ್ಬಡಸ್​ನ ಕೆನ್ಸಿಂಗ್ಟನ್​​ ಓವಲ್​ನಲ್ಲಿ (Kensington Oval) ಇಂದು ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಏಕದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಪಡೆಗೆ ಈ ಪಂದ್ಯ ಮುಖ್ಯವಾಗಿದೆ. ಅತ್ತ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಿಂದ ಹೊರಬಿದ್ದು ಆಘಾತ ಅನುಭವಿಸಿರುವ ಕೆರಿಬಿಯನ್ನರಿಗೆ ಪುಟಿದೇಳಲು ಗೆಲುವು ಅವಶ್ಯಕವಾಗಿದೆ.

ಉಭಯ ತಂಡಗಳಿಗೂ ಈ ಸರಣಿ ಸಾಕಷ್ಟು ಮುಖ್ಯವಾಗಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ. ಅದಕ್ಕೆ ತಕ್ಕಂತೆ ಕೆನ್ನಿಂಗ್ಟನ್ ಓವಲ್ ಪಿಚ್ ಕೂಡ ಅದ್ಭುತವಾಗಿದೆ. ಕೆನ್ಸಿಂಗ್ಟನ್ ಓವಲ್​ನ ಮೇಲ್ಮೈ ಬೌಲಿಂಗ್ ಸ್ನೇಹಿಯಾಗಿದೆ. ಇದು ನಿಧಾನವಾದ ಪಿಚ್ ಆಗಿದ್ದು ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 229. ಆದರೆ, ಇಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 302 ರನ್‌ಗಳ ಗುರಿಯನ್ನು ಇನ್ನೂ 17 ಎಸೆತಗಳು ಮತ್ತು 5 ವಿಕೆಟ್‌ಗಳು ಬಾಕಿ ಇರುವಂತೆಯೇ ಬೆನ್ನಟ್ಟಿತ್ತು.

Deodhar Trophy 2023: ಸೆಂಚುರಿ ಸಿಡಿಸಿ ಅಬ್ಬರಿಸಿದ ಪ್ರಭ್​ಸಿಮ್ರಾನ್ ಸಿಂಗ್

ಇದನ್ನೂ ಓದಿ
Image
T20 Records: 23 ರನ್​ಗೆ ಚೀನಾ ತಂಡ ಆಲೌಟ್: 7 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದ ಇದ್ರಸ್
Image
IND vs WI: ವೆಸ್ಟ್ ಇಂಡೀಸ್​ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ್ದು ಯಾರು ಗೊತ್ತಾ?
Image
IND vs WI: ಮೊದಲ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿರಲಿದೆ
Image
Ashes 2023: ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಬಲಿಷ್ಠ ಪಡೆಯನ್ನು ಪ್ರಕಟಿಸಿದ ಇಂಗ್ಲೆಂಡ್

ಟೀಮ್ ಇಂಡಿಯಾ ಈ ಮೈದಾನದಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಿದೆ. ಅದರಲ್ಲಿ 1-2 ಸೋಲಿನ ದಾಖಲೆಯನ್ನು ಹೊಂದಿದ್ದಾರೆ. ಆದರೆ, ಈ ಪಂದ್ಯ ನಡೆದಿದ್ದು ಎರಡು ದಶಕಗಳ ಹಿಂದೆ, ಅಂದರೆ 2002 ರಲ್ಲಿ ಕೊನೆಯ ಬಾರಿಗೆ ಇಲ್ಲಿ ಏಕದಿನ ಪಂದ್ಯ ಆಡಿದ್ದರು. ಒಟ್ಟು 49 ಪಂದ್ಯಗಳು ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 22 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡ 25 ಗೆದ್ದಿದೆ. ಆದರೆ, ಇಲ್ಲಿ ಆಡಿದ ಕಳೆದ 10 ಪಂದ್ಯಗಳ ಪೈಕಿ 7 ಪಂದ್ಯ ಚೇಸಿಂಗ್ ಮೂಲಕ ಗೆದ್ದಿದೆ.

ಇಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ 364 ಆಗಿದೆ. ಇದು ಈ ಮೈದಾನದಲ್ಲಿ ದಾಖಲಾದ ಅತ್ಯಧಿಕ ಚೇಸ್ ಕೂಡ ಹೌದು. 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಈ ಸಾಧನೆ ಗೈದಿತ್ತು. 2007ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್‌ ಗಳಿಸಿದ 91 ರನ್‌ಗಳು ಇಲ್ಲಿ ದಾಖಲಾದ ಲೋ ಸ್ಕೋರ್. ಕಳೆದ 10 ಪಂದ್ಯಗಳಲ್ಲಿನ ದಾಖಲೆಯನ್ನು ಗಮನಿಸಿದರೆ, ಟಾಸ್ ಗೆದ್ದ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?