Deodhar Trophy 2023: ಸೆಂಚುರಿ ಸಿಡಿಸಿ ಅಬ್ಬರಿಸಿದ ಪ್ರಭ್​ಸಿಮ್ರಾನ್ ಸಿಂಗ್

Deodhar Trophy 2023: ದೇವಧರ್ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್​ನ ಯುವ ಬಲಗೈ ದಾಂಡಿಗ ಪ್ರಭ್​ಸಿಮ್ರಾನ್ ಸಿಂಗ್ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ.

Deodhar Trophy 2023: ಸೆಂಚುರಿ ಸಿಡಿಸಿ ಅಬ್ಬರಿಸಿದ ಪ್ರಭ್​ಸಿಮ್ರಾನ್ ಸಿಂಗ್
Prabhsimran Singh
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 26, 2023 | 5:44 PM

Deodhar Trophy 2023: ಪುದುಚೇರಿಯ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಡೆದ ದೇವಧರ್ ಟ್ರೋಫಿಯ 4ನೇ ಪಂದ್ಯದಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇಂದ್ರ ವಲಯ ತಂಡದ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಉತ್ತರ ವಲಯ ತಂಡಕ್ಕೆ ಪ್ರಭ್​ಸಿಮ್ರಾನ್ ಸಿಂಗ್ ಬಿರುಸಿನ ಆರಂಭ ಒದಗಿಸಿದ್ದರು. ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದ ಯುವ ದಾಂಡಿಗ ಕೇಂದ್ರ ವಲಯ ತಂಡದ ಅನುಭವಿ ಬೌಲರ್​ಗಳ ಬೆಂಡೆತ್ತಿದರು.

ಪರಿಣಾಮ ಪ್ರಭ್​ಸಿಮ್ರಾನ್ ಸಿಂಗ್ ಬ್ಯಾಟ್​ನಿಂದ 107 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 13 ಫೋರ್​ಗಳು ಮೂಡಿಬಂತು. ಅಲ್ಲದೆ ಒಟ್ಟು 121 ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ 51 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 307 ಕ್ಕೆ ತಂದು ನಿಲ್ಲಿಸಿದರು.

308 ರನ್​ಗಳ ಕಠಿಣ ಗುರಿ ಪಡೆದ ಕೇಂದ್ರ ವಲಯ ಪರ ಶಿವಂ ಚೌಧರಿ (51) ಅರ್ಧಶತಕ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಶ್ ದುಬೆ 92 ಎಸೆತಗಳಲ್ಲಿ 78 ರನ್ ಬಾರಿಸಿದರು. ಇನ್ನು ಉಪೇಂದ್ರ ಯಾದವ್ 52 ರನ್​ಗಳ ಕೊಡುಗೆ ನೀಡಿದರು.

ಮೇಲಿನ ಕ್ರಮಾಂಕದ ಮೂವರು ಬ್ಯಾಟರ್​ಗಳ ಅರ್ಧಶತಕದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಶೂನ್ಯಕ್ಕೆ ಔಟಾದರೆ, ವೆಂಕಟೇಶ್ ಅಯ್ಯರ್ (11) ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ 47.4 ಓವರ್​ಗಳಲ್ಲಿ ಕೇಂದ್ರ ವಲಯ ತಂಡವು 259 ರನ್​ಗಳಿಸಿ ಆಲೌಟ್ ಆಯಿತು.

ಇದರೊಂದಿಗೆ ಉತ್ತರ ವಲಯ ತಂಡವು 48 ರನ್​ಗಳ ಜಯವನ್ನು ತನ್ನದಾಗಿಸಿಕೊಂಡಿತು. ಇನ್ನು ಉತ್ತರ ವಲಯ ಪರ ನಿತೀಶ್ ರಾಣಾ 10 ಓವರ್​ಗಳಲ್ಲಿ 48 ರನ್ ನೀಡಿ 4 ವಿಕೆಟ್ ಪಡೆದರೆ, ಮಾಯಾಂಕ್ ಯಾದವ್ 47 ರನ್​ಗೆ 3 ವಿಕೆಟ್ ಕಬಳಿಸಿ ಮಿಂಚಿದರು.

ಉತ್ತರ ವಲಯ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ , ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ನಿಶಾಂತ್ ಸಿಂಧು , ಮಯಾಂಕ್ ಯಾದವ್ , ಹರ್ಷಿತ್ ರಾಣಾ , ವಿವ್ರಾಂತ್ ಶರ್ಮಾ , ನಿತೀಶ್ ರಾಣಾ (ನಾಯಕ) , ಸಂದೀಪ್ ಶರ್ಮಾ , ಹಿಮಾಂಶು ರಾಣಾ , ಮನ್ದೀಪ್ ಸಿಂಗ್ , ಮಯಾಂಕ್ ಮಾರ್ಕಾಂಡೆ.

ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ಕೇಂದ್ರ ವಲಯ ಪ್ಲೇಯಿಂಗ್ 11: ಮಾಧವ್ ಕೌಶಿಕ್ , ಉಪೇಂದ್ರ ಯಾದವ್ (ವಿಕೆಟ್ ಕೀಪರ್) , ಯಶ್ ದುಬೆ , ವೆಂಕಟೇಶ್ ಅಯ್ಯರ್ (ನಾಯಕ) , ಶಿವಂ ಚೌಧರಿ , ರಿಂಕು ಸಿಂಗ್ , ಕರ್ಣ್ ಶರ್ಮಾ , ಆದಿತ್ಯ ಸರ್ವತೆ , ಶಿವಂ ಮಾವಿ , ಯಶ್ ಠಾಕೂರ್ , ಅನಿಕೇತ್ ಚೌಧರಿ.