IND vs WI: ಕೆರಿಬಿಯನ್ ದೈತ್ಯರನ್ನು ಮಣಿಸಿ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ದಂಡದ ಬರೆ ಎಳೆದ ಐಸಿಸಿ..!

| Updated By: ಪೃಥ್ವಿಶಂಕರ

Updated on: Jul 25, 2022 | 2:29 PM

IND vs WI: ಶಿಖರ್ ಧವನ್ ನೇತೃತ್ವದ ಭಾರತ ತಂಡ ನಿಗದಿತ ಸಮಯಕ್ಕಿಂತ ಕಡಿಮೆ ಓವರ್ ಬೌಲ್ ಮಾಡಿದೆಯೆಂದು ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಆರೋಪಿಸಿ ಪೆನಾಲ್ಟಿ ವಿಧಿಸಿದ್ದಾರೆ. ಭಾರತ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

IND vs WI: ಕೆರಿಬಿಯನ್ ದೈತ್ಯರನ್ನು ಮಣಿಸಿ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ದಂಡದ ಬರೆ ಎಳೆದ ಐಸಿಸಿ..!
IND vs WI
Follow us on

ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್​ ಓವಲ್​ನಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲೂ ಭಾರತ (India vs West Indies) ರೋಚಕ ಗೆಲುವು ಕಂಡಿದೆ. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಕಾದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್​ಗಳಿಂದ ಗೆದ್ದು 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಆದರೆ ಎರಡನೇ ಏಕದಿನ ಪಂದ್ಯದ ಗೆಲುವಿನೊಂದಿಗೆ ಸರಣಿ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾಗೆ ದಂಡದ ಬರೆ ಬಿದ್ದಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಧವನ್ ಹುಡುಗರ ಹಳೆಯ ತಪ್ಪಿಗೆ ಶಿಕ್ಷೆ ವಿಧಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್​ನಿಂದಾಗಿ ಟೀಂ ಇಂಡಿಯಾಗೆ ದಂಡ ವಿಧಿಸಲಾಗಿದೆ. ನಿಧಾನಗತಿಯ ಓವರ್ ರೇಟ್‌ಗಾಗಿ ಐಸಿಸಿ ಭಾರತ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಿದೆ.

ಶಿಖರ್ ಧವನ್ ನೇತೃತ್ವದ ಭಾರತ ತಂಡ ನಿಗದಿತ ಸಮಯಕ್ಕಿಂತ ಕಡಿಮೆ ಓವರ್ ಬೌಲ್ ಮಾಡಿದೆಯೆಂದು ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಆರೋಪಿಸಿ ಪೆನಾಲ್ಟಿ ವಿಧಿಸಿದ್ದಾರೆ. ಭಾರತ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

ಇದನ್ನೂ ಓದಿ
IND vs ENG: 6 ಪಂದ್ಯಗಳಲ್ಲಿ 17 ಕ್ಯಾಚ್​ ಬಿಟ್ಟ ಟೀಂ ಇಂಡಿಯಾ; ಹೀಗಾದರೆ ಟಿ20 ವಿಶ್ವಕಪ್ ಕೈ ಜಾರುವುದು ಗ್ಯಾರಂಟಿ?
IND vs WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ! ಮೂವರು ಇನ್, ನಾಲ್ವರು ಔಟ್
ದುಬಾರಿ ಬೆಲೆಯ ಖಾಸಗಿ ಜೆಟ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಈ ನಿಯಮದ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿಕೆಯಲ್ಲಿ, “ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗೆ ಐಸಿಸಿ ನೀತಿ ಸಂಹಿತೆಯ ನಿಯಮ 2.22 ರ ಅಡಿಯಲ್ಲಿ ಕನಿಷ್ಠ ಓವರ್ ದರಗಳಲ್ಲಿ ಆಟಗಾರರು ಬೌಲ್ ಮಾಡುವ ಪ್ರತಿ ಓವರ್‌ಗೆ ಪಂದ್ಯ ಶುಲ್ಕದ ಶೇಕಡಾ 20 ರಷ್ಟು ಶುಲ್ಕ ವಿಧಿಸಲಾಗುತ್ತದೆ.

ತಪ್ಪು ಒಪ್ಪಿಕೊಂಡ ಧವನ್

ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲದ ಅಪರಾಧ ಮತ್ತು ಪ್ರಸ್ತಾವಿತ ಶಿಕ್ಷೆಯನ್ನು ಧವನ್ ಒಪ್ಪಿಕೊಂಡಿದ್ದಾರೆ. ಆನ್-ಫೀಲ್ಡ್ ಅಂಪೈರ್‌ಗಳಾದ ಜೋಯಲ್ ವಿಲ್ಸನ್ ಮತ್ತು ಲೆಸ್ಲಿ ರೀಫರ್, ಮೂರನೇ ಅಂಪೈರ್ ಗ್ರೆಗೊರಿ ಬ್ರಾಥ್‌ವೈಟ್ ಮತ್ತು ನಾಲ್ಕನೇ ಅಂಪೈರ್ ನಿಗೆಲ್ ಡುಗಿಡ್ ಅವರು ಮಾಡಿದ ಆರೋಪಗಳನ್ನು ಧವನ್ ಒಪ್ಪಿಕೊಂಡಿರುವುದರಿಂದ ತನಿಖೆಯ ಅಗತ್ಯತೆ ಇಲ್ಲ ಎನ್ನಲಾಗಿದೆ.

ಸರಣಿ ಗೆದ್ದ ಭಾರತ

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾನುವಾರ ಎರಡನೇ ಏಕದಿನ ಪಂದ್ಯವನ್ನು ಭಾರತ 2 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ ಭಾರತಕ್ಕೆ 311ರನ್​ಗಳ ಬೃಹತ್ ಟಾರ್ಗೆಟ್ ನೀಡಿತ್ತು. ವೆಸ್ಟ್ ಇಂಡೀಸ್ ನೀಡಿದ್ದ 312 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಕಳೆದ ಪಂದ್ಯದಂತೆ ಉತ್ತಮ ಆರಂಭ ಸಿಗಲಿಲ್ಲ. ಫಾರ್ಮ್​ನಲ್ಲಿದ್ದ ನಾಯಕ ಶಿಖರ್ ಧವನ್ 31 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು. ತಂಡದ ಮೊತ್ತ 66 ಆಗುವ ಹೊತ್ತಿಗೆ ಶುಭ್ಮನ್ ಗಿಲ್ 43 ರನ್ ಗಳಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಮತ್ತೊಮ್ಮೆ ವೈಫಲ್ಯ ಅನುಭವಿಸಿ 9 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಆಸರೆಯಾದರು.

ವಿಕೆಟ್ ಕಳೆದುಕೊಳ್ಳದಂತೆ ರನ್ ಕಲೆಹಾಕುತ್ತಾ ಸಾಗಿದ ಈ ಜೋಡಿ 99 ರನ್​ಗಳ ಕಾಣಿಕೆ ನೀಡಿದರು. ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಅರ್ಧಶತಕದ ಬಳಿಕ ಇವರು ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 71 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್​ನೊಂದಿಗೆ ಅಯ್ಯರ್ 63 ರನ್​ಗೆ ಔಟಾದರೆ, ಸಂಜು 51 ಎಸೆತಗಳಲ್ಲಿ ತಲಾ 3 ಫೋರ್–ಸಿಕ್ಸರ್ ಬಾರಿಸಿ 54 ರನ್​ ಗಳಿಸಿದರು. ಬಳಿಕ ದೀಪಕ್ ಹೂಡ 36 ಎಸೆತಗಳಲ್ಲಿ 33 ರನ್ ಬಾರಿಸಿ ತಂಡದ ಗೆಲುವಿಗೆ ಕೊಂಚ ಕಾಣಿಕೆ ನೀಡಿದರು.

ಹೂಡ ಔಟಾದ ಸಂದರ್ಭ ಭಾರತದ ಗೆಲುವಿನ ಆಸೆ ಕಮರಿ ಹೋಯಿತು. ಆದರೆ, ಈ ಸಂದರ್ಭ ಮತ್ತೆ ಗೆಲುವಿನ ಭರವಸೆ ಮೂಡಿಸಿದ್ದು ಅಕ್ಷರ್ ಪಟೇಲ್. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಪಟೇಲ್ ವಿಂಡೀಸ್ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಕ್ರೀಸ್​ಗೆ ಬಂದಾಗಿನಿಂದ ಸ್ಫೋಟಕ ಆಟವಾಡಿದ ಇವರು ಕೇವಲ 35 ಎಸೆತಗಳಲ್ಲಿ 3 ಫೋರ್ ಹಾಗೂ ಬರೋಬ್ಬರಿ 5 ಸಿಕ್ಸರ್ ಸಿಡಿಸಿ ಅಜೇಯ 64 ರನ್ ಚಚ್ಚಿದರು.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಅವೇಶ್ ಖಾನ್​ಗೆ ಅವಕಾಶ ನೀಡಿತ್ತು. ಆದರೆ ಪ್ರಸಿದ್ಧ ಕೃಷ್ಣ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಆವೇಶ್ ಹೆಚ್ಚು ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.