IND vs WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ! ಮೂವರು ಇನ್, ನಾಲ್ವರು ಔಟ್

IND vs WI: ಕೆಲ ಆಟಗಾರರು ಅಚ್ಚರಿಯ ರೀತಿಯಲ್ಲಿ ತಂಡದ ಒಳಗೆ ಎಂಟ್ರಿಕೊಡುತ್ತಿದ್ದರೆ, ಇನ್ನೂ ಕೆಲವರಿಗೆ ಅನವಶ್ಯಕ ವಿಶ್ರಾಂತಿ ಅಥವಾ ತಂಡದಿಂದ ಹೊರಗುಳಿಯಲು ಮುಂದಾಗುತ್ತಿರುವುದು ಕಂಡುಬರುತ್ತಿದೆ.

IND vs WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ! ಮೂವರು ಇನ್, ನಾಲ್ವರು ಔಟ್
ಭಾರತ ತಂಡ
TV9kannada Web Team

| Edited By: pruthvi Shankar

Jul 14, 2022 | 4:45 PM

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು (Team India) ಪ್ರಕಟಿಸಲಾಗಿದೆ. ತಂಡದಲ್ಲಿ ಕೆಲವು ಬದಲಾವಣೆಗಳಾಗಿದ್ದು, ಈಗಾಗಲೇ ಕೆಲವು ದಿನಗಳಿಂದ ತಂಡದಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ. ಕೆಲ ಆಟಗಾರರು ಅಚ್ಚರಿಯ ರೀತಿಯಲ್ಲಿ ತಂಡದ ಒಳಗೆ ಎಂಟ್ರಿಕೊಡುತ್ತಿದ್ದರೆ, ಇನ್ನೂ ಕೆಲವರಿಗೆ ಅನವಶ್ಯಕ ವಿಶ್ರಾಂತಿ ಅಥವಾ ತಂಡದಿಂದ ಹೊರಗುಳಿಯಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಈಗ ಕೆರಿಬಿಯನ್ ಪ್ರವಾಸದಲ್ಲೂ ಆ ರೀತಿಯ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಪ್ರವಾಸಕ್ಕೆ ಭಾರತದ ಟಿ20 ತಂಡದಲ್ಲಿ ಇಬ್ಬರು ಆಟಗಾರರು ಗಾಯದ ನಂತರ ಪುನರಾಗಮನ ಮಾಡಿದ್ದರೆ, ಇನ್ನೂ ಕೆಲವರು ತಂಡದಿಂದ ಹೊರಗುಳಿದಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ಟಿ20 ತಂಡದಲ್ಲಿ 3 ಆಟಗಾರರನ್ನು ಹಲವು ದಿನಗಳ ಬಳಿಕ ಸೇರಿಸಲಾಗಿದೆ. ಇದರಲ್ಲಿ ಕೆಎಲ್ ರಾಹುಲ್ ಮತ್ತು ಕುಲ್ದೀಪ್ ಯಾದವ್ ಗಾಯದ ನಂತರ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ತಂಡದಲ್ಲಿ ಸಕ್ರಿಯರಾಗಿದ್ದ 4 ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ. ಅವರುಗಳೆಂದರೆ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಚಹಲ್​ಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೆ ವೇಗದ ಸೆನ್ಸೇಷನ್ ಆಗಿ ಬಂದ ಉಮ್ರಾನ್ ಮಲಿಕ್ ತಂಡದಿಂದ ಔಟ್ ಆಗಿದ್ದಾರೆ.

ರಾಹುಲ್, ಕುಲ್ದೀಪ್, ಅಶ್ವಿನ್ ಇನ್

ಕೆಎಲ್ ರಾಹುಲ್ ಮತ್ತು ಕುಲ್ದೀಪ್​ಗೆ ಬಹಳ ದಿನಗಳ ನಂತರ ಟೀಂ ಇಂಡಿಯಾ ಬಾಗಿಲು ತೆರೆದಿದೆ. ಈ ಇಬ್ಬರೂ ಆಟಗಾರರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಇಬ್ಬರೂ ಗಾಯಗೊಂಡಿದ್ದರು. ಕೆಎಲ್ ರಾಹುಲ್ ಗಾಯಗೊಂಡರೆ, ಕುಲದೀಪ್ ಬೆರಳಿಗೆ ಗಾಯವಾಗಿತ್ತು. ಆದರೆ ಈಗ ಇಬ್ಬರೂ ಫಿಟ್ ಆಗಿದ್ದು, ತಂಡದೊಳಗೆ ಸೇರಿದ್ದಾರೆ.

ಇವರಿಬ್ಬರು ಅಲ್ಲದೆ ಅಶ್ವಿನ್ ಕೂಡ ಟೀಂ ಇಂಡಿಯಾದ ಟಿ20 ತಂಡಕ್ಕೆ ಮರಳಿದ್ದಾರೆ. ಈ ಮಾದರಿಯ ಕ್ರಿಕೆಟ್‌ನಲ್ಲಿ 61 ವಿಕೆಟ್‌ಗಳೊಂದಿಗೆ ಭಾರತದ ನಾಲ್ಕನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದ ಅಶ್ವಿನ್, ಕಳೆದ ವರ್ಷ ನವೆಂಬರ್‌ನಲ್ಲಿ ರಾಂಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ವಿರಾಟ್, ಬುಮ್ರಾ, ಚಹಾಲ್ ವಿಶ್ರಾಂತಿ, ಉಮ್ರಾನ್ ಔಟ್

ಈ ಮೂವರು ಆಟಗಾರರು ತಂಡಕ್ಕೆ ಎಂಟ್ರಿಕೊಟ್ಟಿದ್ದರೆ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಚಹಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರಲ್ಲಿ, ವಿರಾಟ್ ಕೊಹ್ಲಿ ಪ್ರವಾಸದಿಂದ ವಿಶ್ರಾಂತಿ ಬಯಸಿದ್ದರೆ, ಬುಮ್ರಾ ಮತ್ತು ಚಹಲ್ ಕೆಲಸದ ಹೊರೆ ನಿರ್ವಹಣೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಇದನ್ನೂ ಓದಿ

ಇವರ ಹೊರತಾಗಿ ಉಮ್ರಾನ್ ಮಲಿಕ್​ಗೆ ತಂಡದಿಂದ ಗೇಟ್​ಪಾಸ್ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20ಯಲ್ಲಿ 4 ಓವರ್‌ಗಳಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟ ಭಾರವನ್ನು ಮಲಿಕ್ ಹೊರಬೇಕಾಯಿತು. ಟೀಮ್ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವು ಉಮ್ರಾನ್ ಮಲಿಕ್ ಇನ್ನೂ ಹೆಚ್ಚಿನ ಅನುಭವ ಹೊಂದಬೇಕು ಎಂಬುದನ್ನು ತೋರಿಸಿದಂತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada