AUS vs SA: ತನ್ನ ಕಾಲಿಗೆ ತಾನೇ ಕೊಡಲಿ ಹಾಕಿಕೊಂಡ ದಕ್ಷಿಣ ಆಫ್ರಿಕಾ; ವಿಶ್ವಕಪ್ ಆಡುವುದು ಅನುಮಾನ?
AUS vs SA: ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ODI ಸರಣಿಯಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿದಿದ್ದು, ಇದೀಗ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುವ ಅವರ ಆಶಯಕ್ಕೆ ದೊಡ್ಡ ಹೊಡೆತ ನೀಡಿದೆ.
ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ (Cricket World Cup)ನಿಂದ ದಕ್ಷಿಣ ಆಫ್ರಿಕಾ ತಂಡ (Cricket South Africa) ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ. ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ODI ಸರಣಿಯಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿದಿದ್ದು, ಇದೀಗ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುವ ಅವರ ಆಶಯಕ್ಕೆ ದೊಡ್ಡ ಹೊಡೆತ ನೀಡಿದೆ. ODI ಸೂಪರ್ ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರಸ್ತುತ 11 ನೇ ಸ್ಥಾನದಲ್ಲಿದೆ. ಅಗ್ರ 8 ತಂಡಗಳು ಮಾತ್ರ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಇದೀಗ ಈ ಮೆಗಾ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧ ಆಫ್ರಿಕಾ ಸರಣಿ ಆಡಬೇಕಿತ್ತು
ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ದಕ್ಷಿಣ ಆಫ್ರಿಕಾ ತಂಡ ಮುಂದಿನ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಬೇಕಿತ್ತು. ಆದರೆ, ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಹೊಸ ದೇಶೀಯ ಟಿ 20 ಲೀಗ್ಗೆ ತೊಂದರೆಯಾಗುವ ಸಲುವಾಗಿ ಸರಣಿಯನ್ನು ಮರು ನಿಗದಿಪಡಿಸುವಂತೆ ಆಗ್ರಹಿಸಿದೆ.
ಅಸಾಧ್ಯವೆಂದ ಆಸ್ಟ್ರೇಲಿಯಾ
ಮತ್ತೊಂದೆಡೆ, ಮುಂದಿನ ಬೇಸಿಗೆಯ ಸಮಯದಲ್ಲಿ ತಂಡ ಇತರ ಸರಣಿಗಳಲ್ಲಿ ನಿರತವಾಗಿರುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲಿ ಹೇಳಿದ್ದಾರೆ. ಆದ್ದರಿಂದ ಸರಣಿಯನ್ನು ಮರು ನಿಗದಿಪಡಿಸುವುದು ಅಸಾಧ್ಯವೆಂಬುದು ಆಸ್ಟ್ರೇಲಿಯಾದ ವಾದವಾಗಿದೆ. ಜನವರಿಯಲ್ಲಿ ನಡೆಯಲಿರುವ ಸರಣಿಯಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂಬುದು ತುಂಬಾ ನಿರಾಶಾದಾಯಕವಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಹೊಸ ವರ್ಷದ ಟೆಸ್ಟ್ ಸೇರಿದಂತೆ ಮೂರು ಟೆಸ್ಟ್ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾವನ್ನು ಆಯೋಜಿಸಲು ನಮಗೆ ತುಂಬಾ ಸಂತೋಷವಾಗಿದೆ. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿದೆ. ಐಸಿಸಿ ಟಿ20 ವಿಶ್ವಕಪ್ ಹೊರತುಪಡಿಸಿ ದಾಖಲೆಯ ಆರು ತಂಡಗಳು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿವೆ. ಜೊತೆಗೆ ಈ ಸಮಯದಲ್ಲಿ ಬಿಬಿಎಲ್ ಮತ್ತು ಮಹಿಳಾ ಬಿಬಿಎಲ್ ಅನ್ನು ಸಹ ಆಯೋಜಿಸಲಾಗುವುದು. ಹೀಗಾಗಿ ಸರಣಿಯನ್ನು ಮರು ನಿಗದಿಪಡಿಸಲಾಗುವುದಿಲ್ಲ ಎಂದಿದೆ ಕ್ರಿಕೆಟ್ ಆಸ್ಟ್ರೇಲಿಯಾ.
ಭಾರತ ವಿರುದ್ಧ ಏಕದಿನ ಸರಣಿ
ಸೂಪರ್ ಲೀಗ್ ಮುಗಿಯುವ ಮೊದಲು ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ಮತ್ತು ಭಾರತದ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ . ಆದರೆ, ಇಂಗ್ಲೆಂಡ್ ಮತ್ತು ಭಾರತನ್ನು ಸೋಲಿಸುವುದು ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭವಲ್ಲ. ಹೀಗಾಗಿ ಆಫ್ರಿಕಾ ಈಗ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ.
Published On - 5:45 pm, Wed, 13 July 22