ದುಬಾರಿ ಬೆಲೆಯ ಖಾಸಗಿ ಜೆಟ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು..!

TV9kannada Web Team

TV9kannada Web Team | Edited By: pruthvi Shankar

Updated on: Jul 09, 2022 | 6:12 PM

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ಮಾತ್ರವಲ್ಲದೆ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ವರದಿಗಳ ಪ್ರಕಾರ, CSK ನಾಯಕ ಖಾಸಗಿ ಜೆಟ್ ಅನ್ನು ಹೊಂದಿದ್ದು, ಇದರ ಮೌಲ್ಯ 260 ಕೋಟಿ ರೂಪಾಯಿ ಆಗಿದೆ.

Jul 09, 2022 | 6:12 PM
ಖ್ಯಾತ ಕ್ರೀಡಾಪಟುಗಳು ತಮ್ಮ ಅದ್ಭುತ ಆಟದಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾರೆ. ಆ ಸಂಪಾದನೆಯಿಂದ ಐಷರಾಮಿ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಕೆಲವರು ತಾವು ಸಂಪಾದಿಸಿದ ಹಣವನ್ನು ಐಷರಾಮಿ ಬಂಗಲೆ ಖರೀದಿಗೆ ಅಥವಾ ದುಬಾರಿ ಬೆಲೆಯ ಕಾರು ಖರೀದಿಗೆ ಮೀಸಲಿಡುತ್ತಾರೆ. ಇನ್ನು ಕೆಲವರು ಬೇರೆ ಬೇರೆ ಕ್ಷೇತ್ರದಲ್ಲಿ ಹಣ ತೊಡಗಿಸಿ ಮತ್ತಷ್ಟು ಗಳಿಸುತ್ತಾರೆ. ಇನ್ನೂ ಕೆಲವರು ತಮ್ಮ ಪ್ರಯಾಣಕ್ಕಾಗಿ ಖಾಸಗಿ ಜೆಟ್ ಖರೀದಿಗೆ ಮುಂದಾಗುತ್ತಾರೆ. ಅಂತಹವರಲ್ಲಿ ಕೆಲವರು ನಮ್ಮ ಟೀಂ ಇಂಡಿಯಾ ಕ್ರಿಕೆಟಿಗರು ಇದ್ದಾರೆ. ಅವರುಗಳು ಯಾರೆಂಬುದರ ಪಟ್ಟಿ ಇಲ್ಲಿದೆ.

1 / 5
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ನಟಿ ಪತ್ನಿ ಅನುಷ್ಕಾ ಶರ್ಮಾ ಅವರು ಖಾಸಗಿ ಜೆಟ್‌ನಿಂದ ಇಳಿಯುತ್ತಿರುವ ಚಿತ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಕೊಹ್ಲಿ ಮತ್ತು ಅನುಷ್ಕಾ ಬಳಸಿದ ಖಾಸಗಿ ಜೆಟ್ ಸುಮಾರು 125 ಕೋಟಿ ರೂ. ಬೆಲೆ ಬಾಳುವಂತಹದ್ದಾಗಿದ್ದು, ವಿರಾಟ್ ಮತ್ತು ಅನುಷ್ಕಾ ಪ್ರವಾಸದ ಸಮಯದಲ್ಲಿ ಪ್ರಯಾಣಿಸಲು ಸೆಸ್ನಾ 680 ಸಿಟೇಶನ್ ಸಾವರಿನ್ ಜೆಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

2 / 5
ದುಬಾರಿ ಬೆಲೆಯ ಖಾಸಗಿ ಜೆಟ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ಮಾತ್ರವಲ್ಲದೆ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ವರದಿಗಳ ಪ್ರಕಾರ, CSK ನಾಯಕ ಖಾಸಗಿ ಜೆಟ್ ಅನ್ನು ಹೊಂದಿದ್ದು, ಇದರ ಮೌಲ್ಯ 260 ಕೋಟಿ ರೂಪಾಯಿ ಆಗಿದೆ.

3 / 5
ದುಬಾರಿ ಬೆಲೆಯ ಖಾಸಗಿ ಜೆಟ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಖಾಸಗಿ ಜೆಟ್ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆಲೆ ಸುಮಾರು 260 ಕೋಟಿ ಎಂದು ಹೇಳಲಾಗುತ್ತದೆ. ಆದರೆ ಈ ಸುದ್ದಿಗೆ ಪೂರಕವಾದ ಅಧಿಕೃತ ದಾಖಲೆಗಳು ಸಿಕ್ಕಿಲ್ಲ. ಆದರೆ ಬಾಲಿವುಡ್ ನಟ ವರುಣ್ ಧವನ್ 2016 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಫೋಟೋದಲ್ಲಿ ಧವನ್ ಹಾಗೂ ಸಚಿನ್ ಖಾಸಗಿ ಜೆಟ್‌ನಲ್ಲಿ ಪ್ರಯಾಣ ಬೆಳೆಸುತ್ತಿರುವುದು ಕಂಡುಬಂದಿತ್ತು.

4 / 5
ದುಬಾರಿ ಬೆಲೆಯ ಖಾಸಗಿ ಜೆಟ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ವರದಿಗಳ ಪ್ರಕಾರ, 1983 ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ಕೂಡ ಖಾಸಗಿ ಜೆಟ್ ಹೊಂದಿದ್ದಾರೆ. ಆದರೆ, ಕಪಿಲ್ ದೇವ್ ಅವರ ಖಾಸಗಿ ಜೆಟ್ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮತ್ತು ಕಪಿಲ್ ಸ್ವತಃ ಈ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳಿಲ್ಲ.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada