IND vs WI: ರೋಹಿತ್​ಗೆ ಶತಕ, ಕೊಹ್ಲಿಗೆ 73 ರನ್; ನಂ.1 ಪಟ್ಟಕ್ಕಾಗಿ ನಾಯಕ, ಮಾಜಿ ನಾಯಕನ ನಡುವೆ ಪೈಪೋಟಿ!

| Updated By: ಪೃಥ್ವಿಶಂಕರ

Updated on: Feb 16, 2022 | 3:47 PM

IND vs WI: ರೋಹಿತ್ ಪ್ರಸ್ತುತ 111 ಇನ್ನಿಂಗ್ಸ್‌ಗಳಲ್ಲಿ 3197 ರನ್ ಗಳಿಸಿದ್ದಾರೆ ಮತ್ತು ಗಪ್ಟಿಲ್ ಅವರನ್ನು ಹಿಂದಿಕ್ಕಲು ಕೇವಲ 103 ರನ್‌ಗಳ ಅಗತ್ಯವಿದೆ.

IND vs WI: ರೋಹಿತ್​ಗೆ ಶತಕ, ಕೊಹ್ಲಿಗೆ 73 ರನ್; ನಂ.1 ಪಟ್ಟಕ್ಕಾಗಿ ನಾಯಕ, ಮಾಜಿ ನಾಯಕನ ನಡುವೆ ಪೈಪೋಟಿ!
ರೋಹಿತ್, ಕೊಹ್ಲಿ
Follow us on

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ . ಕೆಲ ಸಮಯದ ಹಿಂದೆ ಅವರ ನಾಯಕತ್ವದ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಂತರ ಅವರು ರಾಜೀನಾಮೆ ನೀಡಿದರು, ಆ ಬಗ್ಗೆ ವಿವಾದವೂ ಎದ್ದಿತ್ತು. ಈಗ ಆ ಯುಗ ಮುಗಿದಿದ್ದು ಸದ್ಯಕ್ಕೆ ಅವರ ಬ್ಯಾಟಿಂಗ್ ಬಗ್ಗೆ ಜೋರು ಮಾತುಕತೆ ನಡೆಯುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯಲ್ಲಿ (ಭಾರತ vs ವೆಸ್ಟ್ ಇಂಡೀಸ್),ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಈ ಎಲ್ಲಾ ಚರ್ಚೆಗಳ ನಡುವೆ ವಿಂಡೀಸ್ ವಿರುದ್ಧದ ಟಿ20 ಸರಣಿಯ ಮೂಲಕ ಕೊಹ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶಿಸಲು ಕಾತುರರಾಗಿದ್ದಾರೆ. ಇದರೊಂದಿಗೆ ಈ ಸರಣಿಯ ಮೂಲಕ ಮತ್ತೊಮ್ಮೆ ನಂಬರ್ ಒನ್ ಆಗುವ ಅವಕಾಶ ಪಡೆದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊಹ್ಲಿ ಯಾವುದೇ ಮಾದರಿಯಲ್ಲಿ ಶತಕ ಗಳಿಸಲು ಸಾಧ್ಯವಾಗದಿರಬಹುದು, ಆದರೆ ಇದರ ಹೊರತಾಗಿಯೂ ಅವರ ದಾಖಲೆ ಅತ್ಯುತ್ತಮವಾಗಿದೆ. ವಿಶೇಷವಾಗಿ ಕಡಿಮೆ ಸ್ವರೂಪಗಳಲ್ಲಿ, ಅವರ ಬ್ಯಾಟ್ ಸ್ಥಿರವಾಗಿ ರನ್ ಗಳಿಸಿದೆ. ಈ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ವಿಷಯದಲ್ಲಿ ಅವರು ಇನ್ನೂ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಈ ಮಾದರಿಯಲ್ಲಿ ಆಡಿದ ಕೊಹ್ಲಿ, ಅಲ್ಲಿಯವರೆಗೆ ಗರಿಷ್ಠ ರನ್ ಗಳಿಸಿದ ಆಟಗಾರರಾಗಿದ್ದರು. ಆದರೆ ಈ ಸಮಯದಲ್ಲಿ ಕೊಹ್ಲಿ ಹಿಂಬಡ್ತಿ ಪಡೆದಿದ್ದು, ಈಗ ಅವರು ಮೊದಲ ಸ್ಥಾನವನ್ನು ಮರಳಿ ಪಡೆಯುವ ಅವಕಾಶವನ್ನು ಹೊಂದಿದ್ದಾರೆ.

ಕೊಹ್ಲಿ ಮತ್ತೆ ನಂಬರ್ 1 ಆಗುತ್ತಾರಾ?

T20 ವಿಶ್ವಕಪ್ ನಂತರ, ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ತವರು T20 ಸರಣಿಯಿಂದ ವಿಶ್ರಾಂತಿ ಪಡೆದರು. ಇದರಿಂದಾಗಿ ನ್ಯೂಜಿಲೆಂಡ್‌ನ ದಂತಕಥೆ ಆರಂಭಿಕ ಮಾರ್ಟಿನ್ ಗಪ್ಟಿಲ್ ಕೊಹ್ಲಿ ಸ್ಥಾನವನ್ನು ಕಸಿದುಕೊಂಡರು. ಆದರೆ ಈಗ ಕೊಹ್ಲಿ ತಮ್ಮ ಮೊದಲ ಸಿಂಹಾಸನವನ್ನು ಮರಳಿ ಪಡೆಯುವ ಅವಕಾಶ ಹೊಂದಿದ್ದಾರೆ. ಕೊಹ್ಲಿ ಮೊದಲ ಪಂದ್ಯದಲ್ಲಿ ಅಥವಾ ಇಡೀ ಸರಣಿಯಲ್ಲಿ 73 ರನ್ ಗಳಿಸಿದರೆ, ಅವರು ಮತ್ತೆ ಗರಿಷ್ಠ ರನ್ ಗಳಿಸಿದ ಗಪ್ಟಿಲ್ ಅವರನ್ನು ಹಿಂದಿಕ್ಕಲಿದ್ದಾರೆ. ಗುಪ್ಟಿಲ್ ಪ್ರಸ್ತುತ 108 ಇನ್ನಿಂಗ್ಸ್‌ಗಳಲ್ಲಿ 3299 ರನ್ ಗಳಿಸಿದ್ದರೆ, ಕೊಹ್ಲಿ 87 ಇನ್ನಿಂಗ್ಸ್‌ಗಳಲ್ಲಿ 3227 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ

ಅಂದಹಾಗೆ, ಈ ವಿಷಯದಲ್ಲಿ ಕೊಹ್ಲಿ ಮಾತ್ರವಲ್ಲ, ನಾಯಕ ರೋಹಿತ್ ಶರ್ಮಾ ಕೂಡ ಯಶಸ್ಸು ಸಾಧಿಸಬಹುದು. ಕೊಹ್ಲಿ ಮತ್ತು ಗುಪ್ಟಿಲ್ ಅವರನ್ನು ಹಿಂದಿಕ್ಕುವ ಅವಕಾಶ ರೋಹಿತ್ ಶರ್ಮಾಗಿದೆ. ರೋಹಿತ್ ಪ್ರಸ್ತುತ 111 ಇನ್ನಿಂಗ್ಸ್‌ಗಳಲ್ಲಿ 3197 ರನ್ ಗಳಿಸಿದ್ದಾರೆ ಮತ್ತು ಗಪ್ಟಿಲ್ ಅವರನ್ನು ಹಿಂದಿಕ್ಕಲು ಕೇವಲ 103 ರನ್‌ಗಳ ಅಗತ್ಯವಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು 4 ಶತಕಗಳನ್ನು ಬಾರಿಸಿದ ರೋಹಿತ್, ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ಈ ಅಂಕಿಅಂಶವನ್ನು ಬದಲಿಸುವ ಅವಕಾಶ ಹೊಂದಿದ್ದಾರೆ.

ಇದನ್ನೂ ಓದಿ:IND vs WI, 1st T20I, LIVE Streaming: ಮೊದಲ ಟಿ20 ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? ಪೂರ್ಣ ವಿವರ ಇಲ್ಲಿದೆ