IND vs WI, 1st T20I, LIVE Streaming: ಮೊದಲ ಟಿ20 ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? ಪೂರ್ಣ ವಿವರ ಇಲ್ಲಿದೆ

IND vs WI, 1st T20I, LIVE Streaming: ಭಾರತ ತಂಡವು ಈ ಸರಣಿಯಲ್ಲಿ ತನ್ನ ODI ಫಾರ್ಮ್ ಅನ್ನು ಮುಂದುವರಿಸಲು ಬಯಸುತ್ತದೆ. ಆದಾಗ್ಯೂ, ಟಿ 20, ವೆಸ್ಟ್ ಇಂಡೀಸ್ ತಂಡವನ್ನು ಅತ್ಯಂತ ಬಲಿಷ್ಠವೆಂದು ಪರಿಗಣಿಸುವ ಸ್ವರೂಪವಾಗಿದೆ.

IND vs WI, 1st T20I, LIVE Streaming: ಮೊದಲ ಟಿ20 ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? ಪೂರ್ಣ ವಿವರ ಇಲ್ಲಿದೆ
ಭಾರತ ಮತ್ತು ವೆಸ್ಟ್ ಇಂಡೀಸ್ ಮೊದಲ T20 ಪಂದ್ಯ
Follow us
TV9 Web
| Updated By: ಪೃಥ್ವಿಶಂಕರ

Updated on: Feb 16, 2022 | 3:16 PM

ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಏಕಪಕ್ಷೀಯವಾಗಿ ಸೋಲಿಸಿತು. ಈ ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಇವರಿಬ್ಬರ ನಡುವೆ ಮೂರು ಪಂದ್ಯಗಳ ಟಿ20 ಸರಣಿ (T20 series) ಬುಧವಾರದಿಂದ ಆರಂಭವಾಗಲಿದೆ. ಭಾರತ ತಂಡವು ಈ ಸರಣಿಯಲ್ಲಿ ತನ್ನ ODI ಫಾರ್ಮ್ ಅನ್ನು ಮುಂದುವರಿಸಲು ಬಯಸುತ್ತದೆ. ಆದಾಗ್ಯೂ, ಟಿ 20, ವೆಸ್ಟ್ ಇಂಡೀಸ್ ತಂಡವನ್ನು ಅತ್ಯಂತ ಬಲಿಷ್ಠವೆಂದು ಪರಿಗಣಿಸುವ ಸ್ವರೂಪವಾಗಿದೆ. ಈ ತಂಡ ಎರಡು ಬಾರಿ ಟಿ20 ವಿಶ್ವಕಪ್ (T20 World Cup) ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಈ ಮಾದರಿಯಲ್ಲಿ ವಿಂಡೀಸ್ ತಂಡವನ್ನು ಎದುರಿಸುವುದು ಸುಲಭವಲ್ಲ. ರೋಹಿತ್‌ಗೂ ಇದು ಗೊತ್ತಿದ್ದು, ಸಂಪೂರ್ಣ ತಯಾರಿಯೊಂದಿಗೆ ಬರಲಿದ್ದಾರೆ.

ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಆಡುತ್ತಾರೋ ಇಲ್ಲವೋ ಎಂಬುದರ ಮೇಲೆ ಭಾರತದ ಕಣ್ಣು ಕೂಡ ಇರುತ್ತದೆ. ಒಡಿಐ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಗಾಯದ ಕಾರಣ ಪೊಲಾರ್ಡ್ ಆಡಿರಲಿಲ್ಲ. ಪೊಲಾರ್ಡ್ ಟಿ 20 ಸರಣಿಯಲ್ಲಿ ಆಡಿದರೆ, ಪ್ರವಾಸಿ ತಂಡವು ಬಲಗೊಳ್ಳುತ್ತದೆ ಮತ್ತು ಇದು ಭಾರತಕ್ಕೆ ಆತಂಕದ ವಿಷಯವಾಗಿದೆ. ಏಕೆಂದರೆ ಪೊಲಾರ್ಡ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತಗಳನ್ನು ಮಾಡುವ ಆಟಗಾರ.

ವಿರಾಟ್ ಕೊಹ್ಲಿ ಮೇಲೆ ಕಣ್ಣು

ಈ ಸರಣಿಯಲ್ಲಿ ಮತ್ತೊಮ್ಮೆ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ. ವಿರಾಟ್ ದೀರ್ಘಕಾಲದಿಂದ ಶತಕ ಗಳಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ತಮ್ಮ ಫಾರ್ಮ್‌ಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಸೋಮವಾರ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಈ ಸರಣಿಯಲ್ಲಿ ವಿರಾಟ್ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಭಾರತ ತಂಡದ ಸಂಯೋಜನೆಯ ವಿಷಯಕ್ಕೆ ಬಂದರೆ, ತಂಡವು ಪ್ರಯೋಗಕ್ಕೆ ಪ್ರಯತ್ನಿಸುವುದಿಲ್ಲ ಎಂದು ನಾಯಕ ರೋಹಿತ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ T20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಫೆಬ್ರವರಿ 16 ರಂದು (ಬುಧವಾರ) ನಡೆಯಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ T20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ T20 ಪಂದ್ಯ ಯಾವಾಗ ಆರಂಭವಾಗುತ್ತದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಪಂದ್ಯ ರಾತ್ರಿ 07:30 ಕ್ಕೆ ಆರಂಭವಾಗಲಿದ್ದು, ಪಂದ್ಯದ ಟಾಸ್ 7 ಗಂಟೆಗೆ ನಡೆಯಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ T20 ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ನೋಡಬಹುದು.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ T20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನಾನು ಆನ್‌ಲೈನ್‌ನಲ್ಲಿ ಎಲ್ಲಿ ವೀಕ್ಷಿಸಬಹುದು?

ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು.

ಇದನ್ನೂ ಓದಿ:IND vs WI: ಟಿ20 ಸರಣಿಯಲ್ಲಿ ವಿಂಡೀಸ್​ಗೆ ಸೋಲು ಖಚಿತ! ಯಾಕೆ ಗೊತ್ತಾ? ಇಲ್ಲಿವೆ 5 ಕಾರಣಗಳು

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು