ICC T20 Rankings: ಟಿ20 ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ಆರ್​ಸಿಬಿ ಬೌಲರ್! ಟಾಪ್ 10ರಲ್ಲಿ ಕೊಹ್ಲಿ

TV9 Digital Desk

| Edited By: ಪೃಥ್ವಿಶಂಕರ

Updated on: Feb 16, 2022 | 4:35 PM

ICC T20 Rankings: ಬೌಲರ್‌ಗಳ ಹೊಸ ಟಿ20 ಶ್ರೇಯಾಂಕದಲ್ಲಿ ಹೇಜಲ್‌ವುಡ್ ಎರಡನೇ ಸ್ಥಾನ ತಲುಪಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಇಷ್ಟು ಉನ್ನತ ಶ್ರೇಣಿಯನ್ನು ತಲುಪಿದ್ದು ಇದೇ ಮೊದಲು.

ICC T20 Rankings: ಟಿ20 ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ಆರ್​ಸಿಬಿ ಬೌಲರ್! ಟಾಪ್ 10ರಲ್ಲಿ ಕೊಹ್ಲಿ
ಆಸೀಸ್ ತಂಡ

ಇತ್ತೀಚಿನ ದಿನಗಳಲ್ಲಿ, ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ (Josh Hazlewood)​ಗೆ ಬಂಪರ್ ಲಾಟರಿ ಹೊಡೆದಂತಿದೆ. ಒಂದು, ಐಪಿಎಲ್ 2022 (IPL 2022)ರ ಮೆಗಾ ಹರಾಜಿನಲ್ಲಿ ಅವರು ದೊಡ್ಡ ಮೊತ್ತವನ್ನು ಪಡೆದಿದ್ದಾರೆ. ಮತ್ತು ಎರಡನೇ ಮೈದಾನದಲ್ಲಿ ಪ್ರದರ್ಶನವು ಎಷ್ಟು ಪ್ರಬಲವಾಗಿದೆಯೆಂದರೆ ಅದರ ಪರಿಣಾಮ ಈಗ ಅವರ ICC ಶ್ರೇಯಾಂಕದ ಮೇಲೆ ಕಂಡುಬರುತ್ತಿದೆ. ಜೋಶ್ ಹೇಜಲ್‌ವುಡ್ ಈಗ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ತಲುಪಿದ್ದಾರೆ. ಬೌಲರ್‌ಗಳ ಹೊಸ ಟಿ20 ಶ್ರೇಯಾಂಕದಲ್ಲಿ ಅವರು ಎರಡನೇ ಸ್ಥಾನ ತಲುಪಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಇಷ್ಟು ಉನ್ನತ ಶ್ರೇಣಿಯನ್ನು ತಲುಪಿದ್ದು ಇದೇ ಮೊದಲು.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಜೋಶ್ ಹೇಜಲ್‌ವುಡ್ ಪ್ರದರ್ಶನ ಅದ್ಭುತವಾಗಿದೆ. 5 T20 ಪಂದ್ಯಗಳ ಸರಣಿಯ ಮೊದಲ 3 ಪಂದ್ಯಗಳಲ್ಲಿ, ಅವರು 8 ಸರಾಸರಿಯಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಪವರ್‌ಪ್ಲೇಯಲ್ಲಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಅಬ್ಬರಿಸಿದ್ದರು.

4 ಸ್ಥಾನ ಜಿಗಿತ

ಬಲಗೈ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಇತ್ತೀಚಿನ ಐಸಿಸಿ ಟಿ20 ಶ್ರೇಯಾಂಕದಲ್ಲಿ 4 ಸ್ಥಾನ ಮೇಲಕ್ಕೇರಿದ್ದಾರೆ. ಅವರು ಟಾಪ್ 5 ರಲ್ಲಿ ಹಸ್ರಂಗ, ಆದಿಲ್ ರಶೀದ್ ಮತ್ತು ಆಡಮ್ ಝಂಪಾ ಅವರಿಗಿಂತ ಮೇಲಿದ್ದಾರೆ. ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಹ್ಯಾಜಲ್‌ವುಡ್‌ಗಿಂತ ಮುಂದಿರುವುದು ದಕ್ಷಿಣ ಆಫ್ರಿಕಾದ ತಬ್ರೇಜ್ ಶಮ್ಸಿ. ವಿಶೇಷವೆನೆಂದರೆ, ಬೌಲರ್‌ಗಳ ಅಗ್ರ 5 ರ್ಯಾಂಕಿಂಗ್‌ನಲ್ಲಿ ಸೇರ್ಪಡೆಗೊಂಡ ಏಕೈಕ ವೇಗಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್.

ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗಾ ಹೊಸ ಟಿ20 ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20ಯಲ್ಲಿ ಕೊರೊನಾದಿಂದ ಹೊರಗುಳಿಯುವ ಭಾರವನ್ನು ಅವರು ಹೊರಬೇಕಾಯಿತು.

ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 10ನೇ ಸ್ಥಾನ

ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಮೊದಲೆರಡು ಸ್ಥಾನಗಳನ್ನು ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಆಕ್ರಮಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಟಿ20 ರ್ಯಾಂಕಿಂಗ್ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅದೇ ಹೊತ್ತಿಗೆ ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ ಒಂದು ಸ್ಥಾನ ಕಳೆದುಕೊಂಡು 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಧೋನಿ ಪಡೆ ಸಿಎಸ್‌ಕೆಗೆ ಸೇರ್ಪಡೆಗೊಂಡಿರುವ ಡೆವೊನ್ ಕಾನ್ವೆ ಒಂದು ಸ್ಥಾನ ಜಿಗಿದು 6ನೇ ಸ್ಥಾನ ಪಡೆದಿದ್ದಾರೆ. ಅಗ್ರ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ ಮತ್ತೊಬ್ಬ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

ಇದನ್ನೂ ಓದಿ:IPL 2022 Auction: ಕೊಹ್ಲಿ, ಧವನ್ ವಿಕೆಟ್ ಪಡೆದಿದ್ದ ಕೆರಿಬಿಯನ್ ದೈತ್ಯನಿಗೆ ಹಣದ ಮಳೆ ಸುರಿಸಿದ ಪಂಜಾಬ್!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada