Virat Kohli: ಯಾರೇ ಕೂಗಾಡಲಿ…ಮೈದಾನದಲ್ಲಿ ಕಿಂಗ್ ಕೊಹ್ಲಿ ಮಸ್ತ್ ಡ್ಯಾನ್ಸ್

| Updated By: ಝಾಹಿರ್ ಯೂಸುಫ್

Updated on: Feb 10, 2022 | 4:09 PM

Virat Kohli Dance Video: ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ ತವರಿನಲ್ಲಿ 100 ಏಕದಿನ ಪಂದ್ಯವಾಡಿದ ವಿಶೇಷ ದಾಖಲೆ ಮಾಡಿದರು. 259 ಏಕದಿನ ಪಂದ್ಯವಾಡಿರುವ ಕೊಹ್ಲಿ ಇದೀಗ ಭಾರತದಲ್ಲೇ 100 ಏಕದಿನ ಪಂದ್ಯವಾಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

Virat Kohli: ಯಾರೇ ಕೂಗಾಡಲಿ...ಮೈದಾನದಲ್ಲಿ ಕಿಂಗ್ ಕೊಹ್ಲಿ ಮಸ್ತ್ ಡ್ಯಾನ್ಸ್
Virat Kohli
Follow us on

ವೆಸ್ಟ್ ಇಂಡೀಸ್​ ವಿರುದ್ದದ 2ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸೂರ್ಯ ಕುಮಾರ್ ಯಾದವ್ (64) ಹಾಗೂ ಕೆಎಲ್ ರಾಹುಲ್ (49) ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಪರಿಣಾಮ 50 ಓವರ್​ಗಳಲ್ಲಿ ಭಾರತ ತಂಡವು 9 ವಿಕೆಟ್ ಕಳೆದುಕೊಂಡು 237 ರನ್​ಗಳಿಸಿತು. 238 ರನ್​ಗಳ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಪ್ರಸಿದ್ಧ್ ಕೃಷ್ಣ (4 ವಿಕೆಟ್) ಅವರ ಬೌಲಿಂಗ್ ಪರಾಕ್ರಮದ ಮುಂದೆ 193 ರನ್​ಗೆ ಆಲೌಟ್ ಆಯಿತು. ಅದರಂತೆ ಟೀಮ್ ಇಂಡಿಯಾ 44 ರನ್​ಗಳಿಂದ ಸೋಲನುಭವಿಸಿತು. ಇನ್ನು ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ 100 ಏಕದಿನ ಪಂದ್ಯವಾಡಿದ ಸಾಧಕರ ಪಟ್ಟಿಗೆ ಸೇರ್ಪಡೆಯಾದರು. ಕೊಹ್ಲಿ ತಮ್ಮ ವಿಶೇಷ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾದರೂ, ಫೀಲ್ಡಿಂಗ್​ನಲ್ಲಿ ಎಲ್ಲರ ಗಮನ ಸೆಳೆದಿದ್ದರು.

ಪಂದ್ಯದ 45ನೇ ಓವರ್​ನ ಕೊನೇ ಎಸೆತದಲ್ಲಿ ಒಡಿಯನ್ ಸ್ಮಿತ್ ಸಿಕ್ಸ್ ಬಾರಿಸಲು ಯತ್ನಿಸಿದರು. ಆದರೆ, ಟಾಪ್ ಎಡ್ಜ್ ಆಗಿ ಚೆಂಡು ಡೀಪ್ ಮಿಡ್ ವಿಕೆಟ್ ಕಡೆ ಸಾಗಿತು. ಫೀಲ್ಡ್​​ನಲ್ಲಿದ್ದ ವಿರಾಟ್ ಕೊಹ್ಲಿ ಓಡಿ ಬಂದು ಸ್ಟನ್ನಿಂಗ್ ಕ್ಯಾಚ್ ಹಿಡಿದರು. ಭಾರತ ತಂಡಕ್ಕೆ ಮಾರಕವಾಗಿದ್ದ ಬ್ಯಾಟರ್​ನ ಅನ್ನು ಕೊಹ್ಲಿ ಅದ್ಭುತ ಕ್ಯಾಚ್ ಹಿಡಿದು ಔಟ್ ಮಾಡಿದ್ದನ್ನು ಕಂಡು ನಾಯಕ ರೋಹಿತ್ ಒಂದು ಕ್ಷಣ ದಂಗಾದರು. ಈ ಅದ್ಧುತ ಕ್ಯಾಚ್ ಮೂಲಕ ಕೊಹ್ಲಿ ಪಂದ್ಯದ ಗತಿ ಬದಲಿಸಿದರು. ಈ ಖುಷಿಯಲ್ಲಿ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದರು. ಹುಕ್ ಸ್ಟೆಪ್ ಹಾಕುತ್ತಾ ಬಂದ ಕೊಹ್ಲಿಯನ್ನು ನೋಡಿ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ನಕ್ಕರು. ಇದೀಗ ಕೊಹ್ಲಿಯ ಈ ಡ್ಯಾನ್ಸ್​ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ವಿಶೇಷ ದಾಖಲೆ:
ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ ತವರಿನಲ್ಲಿ 100 ಏಕದಿನ ಪಂದ್ಯವಾಡಿದ ವಿಶೇಷ ದಾಖಲೆ ಮಾಡಿದರು. 259 ಏಕದಿನ ಪಂದ್ಯವಾಡಿರುವ ಕೊಹ್ಲಿ ಇದೀಗ ಭಾರತದಲ್ಲೇ 100 ಏಕದಿನ ಪಂದ್ಯವಾಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ 5ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್ ಮತ್ತು ಯುವರಾಜ್ ಸಿಂಗ್ ಮಾತ್ರ ಭಾರತದಲ್ಲೇ 100 ಏಕದಿನ ಪಂದ್ಯಗಳನ್ನು ಆಡಿದ್ದರು. ಇದೀಗ ಈ ವಿಶೇಷ ಪಟ್ಟಿಗೆ ವಿರಾಟ್ ಕೊಹ್ಲಿ ಕೂಡ ಎಂಟ್ರಿಯಾಗಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ 164 ಏಕದಿನ ಪಂದ್ಯವಾಡಿರುವ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 33ನೇ ವಯಸ್ಸಿನಲ್ಲಿ ಭಾರತದಲ್ಲಿ 100 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಮುಂಬರುವ ದಿನಗಳಲ್ಲಿ ತವರಿನಲ್ಲಿ ಅತೀ ಹೆಚ್ಚು ಏಕದಿನ ಪಂದ್ಯವಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

Published On - 2:58 pm, Thu, 10 February 22