IND vs ZIM: ಸ್ಟಾರ್, ಸೋನಿ, ಹಾಟ್ ಸ್ಟಾರ್​ನಲ್ಲಿ ಪ್ರಸಾರವಾಗಲ್ಲ ಟಿ20 ಸರಣಿ! ಎಲ್ಲಿ ವೀಕ್ಷಿಸಬಹುದು?

India vs Zimbabwe T20 series: ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ನಂತರ ಭಾರತ ತಂಡ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಿದ್ಧವಾಗಿದೆ. ಜುಲೈ 23 ರಿಂದ ಆರಂಭವಾಗುವ ಮೂರು ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ. ಸ್ಟಾರ್ ಸ್ಪೋರ್ಟ್ಸ್, ಸೋನಿ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗದ ಈ ಪಂದ್ಯಗಳನ್ನು ಫ್ಯಾನ್‌ಕೋಡ್‌ನಲ್ಲಿ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್ ಮತ್ತು ಯುನೈಟ್8 ಸ್ಪೋರ್ಟ್ಸ್ ಟಿವಿಯಲ್ಲಿ ನೇರಪ್ರಸಾರ ಲಭ್ಯ.

IND vs ZIM: ಸ್ಟಾರ್, ಸೋನಿ, ಹಾಟ್ ಸ್ಟಾರ್​ನಲ್ಲಿ ಪ್ರಸಾರವಾಗಲ್ಲ ಟಿ20 ಸರಣಿ! ಎಲ್ಲಿ ವೀಕ್ಷಿಸಬಹುದು?
Ind Vs Zim

Updated on: Jul 22, 2026 | 9:41 PM

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಸತತ ಸೋಲುಗಳಿಂದ ನಿರಾಶೆಗೊಂಡಿದ್ದ ಭಾರತ ತಂಡ, ಈಗ ಜಿಂಬಾಬ್ವೆ (India vs Zimbabwe) ಪ್ರವಾಸದೊಂದಿಗೆ ಹೊಸ ಆರಂಭಕ್ಕೆ ಸಿದ್ಧವಾಗಿದೆ. ಮೂರು ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ (Team India) ಹರಾರೆಗೆ ಆಗಮಿಸಿದೆ. ಸರಣಿಯು ಜುಲೈ 23 ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ಮೂರು ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಈ ಮೂರು ಪಂದ್ಯಗಳ ಆರಂಭದ ಸಮಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅನುಕೂಲಕರವಾಗಿದ್ದರೂ, ಈ ಪಂದ್ಯವನ್ನು ವೀಕ್ಷಿಸಲು ಮಾತ್ರ ಅಭಿಮಾನಿಗಳು ಚಂದಾದಾರರಾಗಬೇಕಾಗಿದೆ. ಏಕೆಂದರೆ ಈ ಸರಣಿ ಸ್ಟಾರ್ ಸ್ಪೋರ್ಟ್ಸ್, ಸೋನಿ ಸ್ಪೋರ್ಟ್ಸ್ ಹಾಗೂ ಜಿಯೋಹಾಟ್‌ಸ್ಟಾರ್​ನಲ್ಲಿ ಪ್ರಸಾರವಾಗುತ್ತಿಲ್ಲ. ಹಾಗಿದ್ದರೆ ಈ ಸರಣಿಯ ಪಂದ್ಯಗಳನ್ನು ಯಾವ ಚಾನೆಲ್​ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂಬುದನ್ನು ನೋಡುವುದಾದರೆ..

ಯಾವ ಚಾನೆಲ್​ನಲ್ಲಿ ನೇರಪ್ರಸಾರ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯ ಪಂದ್ಯಗಳನ್ನು ಮೇಲೆ ಹೇಳಿದಂತೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ಪ್ರಸಾರ ಮಾಡಲಾಗುವುದಿಲ್ಲ. ಅಲ್ಲದೆ, ಜಿಯೋಹಾಟ್‌ಸ್ಟಾರ್ ಮತ್ತು ಸೋನಿ ಲಿವ್‌ನಲ್ಲಿ ನೇರ ಪ್ರಸಾರ ಲಭ್ಯವಿರುವುದಿಲ್ಲ. ಹೀಗಾಗಿ ಅಭಿಮಾನಿಗಳು ಈ ಮೂರು ಪಂದ್ಯಗಳನ್ನು ಫ್ಯಾನ್‌ಕೋಡ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಲೈವ್ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಬಹುದಾಗಿದೆ. ನೀವು ಈ ಪಂದ್ಯಗಳನ್ನು ವೀಕ್ಷಿಸಲು 35 ರೂಗಳ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ನೀವು ಇದನ್ನು ಟಿವಿಯಲ್ಲಿ ವೀಕ್ಷಿಸಲು ಬಯಸಿದರೆ ಯುನೈಟ್8 ಸ್ಪೋರ್ಟ್ಸ್ ಟಿವಿ ಚಾನೆಲ್ ಮತ್ತು ಡಿಡಿ ಸ್ಪೋರ್ಟ್ಸ್ ಎರಡರಲ್ಲೂ ನೇರಪ್ರಸಾರ ವೀಕ್ಷಿಸಬಹುದು.

3 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ

  • ಭಾರತ vs ಜಿಂಬಾಬ್ವೆ: ಮೊದಲನೇ ಪಂದ್ಯ-ಜುಲೈ 23, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಎರಡನೇ ಪಂದ್ಯ-ಜುಲೈ 25, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಮೂರನೇ ಪಂದ್ಯ-ಜುಲೈ 26, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30

IND vs ZIM: ಭಾರತ- ಜಿಂಬಾಬ್ವೆ ಪಂದ್ಯಕ್ಕೆ ಮಳೆ ಅಡ್ಡಿ? ಹರಾರೆ ಪಿಚ್ ಯಾರಿಗೆ ಸಹಕಾರಿ?

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us