AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಟಿ20 ತಂಡ ಮತ್ತೆ ಕಣಕ್ಕಿಳಿಯುವುದು ಯಾವಾಗ? ಎದುರಾಳಿ ಯಾರು?

India T20 Squad vs Zimbabwe: ಸತತ 6 ಟಿ20 ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡ, ಜಿಂಬಾಬ್ವೆ ವಿರುದ್ಧದ ಮುಂಬರುವ ಸರಣಿಯಿಂದ ಪುಟಿದೇಳುವ ಭರವಸೆಯಲ್ಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ 15 ಸದಸ್ಯರ ಯುವ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸಂಜು ಸ್ಯಾಮ್ಸನ್ ಹೊರಗುಳಿದಿದ್ದು, ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಜುಲೈ 23 ರಿಂದ ಆರಂಭವಾಗುವ ಮೂರು ಪಂದ್ಯಗಳ ಈ ಸರಣಿಯು ಭಾರತದ ಗೆಲುವಿನ ಲಯಕ್ಕೆ ಮರಳಲು ನಿರ್ಣಾಯಕವಾಗಿದೆ.

ಭಾರತ ಟಿ20 ತಂಡ ಮತ್ತೆ ಕಣಕ್ಕಿಳಿಯುವುದು ಯಾವಾಗ? ಎದುರಾಳಿ ಯಾರು?
Team India
ಪೃಥ್ವಿಶಂಕರ
|

Updated on: Jul 12, 2026 | 9:23 PM

Share

ಸತತ 6 ಟಿ20 ಪಂದ್ಯಗಳನ್ನು ಸೋತಿರುವ ಭಾರತ ಟಿ20 ತಂಡದ (Team India) ಆತ್ಮವಿಶ್ವಾಸವೇ ಮಾಯಾವಾಗಿ ಹೋಗಿದೆ. ಮೊದಲಿಗೆ ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಸೋತಿದ್ದ ಶ್ರೇಯಸ್ ಅಯ್ಯರ್ ( Shreyas Iyer) ಪಡೆ ಅದಾದ ಬಳಿಕ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡಿತು. ಒಂದು ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಟೀಂ ಇಂಡಿಯಾಕ್ಕೆ ಗೆಲುವೆಂಬುದು ಮರಿಚಿಕೆಯಾಗಿದೆ. ಆದರೆ ಸತತ ಸೋಲುಗಳಿಂದ ಪುಟಿದೇಳುವುದು ಹೇಗೆ ಎಂಬುದನ್ನು ಚೆನ್ನಾಗಿ ಅರಿತಿರುವ ಟೀಂ ಇಂಡಿಯಾ ತನ್ನ ಮುಂದಿನ ಸರಣಿಯಲ್ಲಿ ಖಂಡಿತವಾಗಿಯೂ ತನ್ನ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸವಿದೆ. ಹಾಗಿದ್ದರೆ, ಭಾರತ ಟಿ20 ತಂಡದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ? ಎಲ್ಲಿ ನಡೆಯಲಿದೆ ಎಂಬುದು ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ.

ಜಿಂಬಾಬ್ವೆ ಮುಂದಿನ ಎದುರಾಳಿ

ಭಾರತ ತನ್ನ ಮುಂದಿನ ಟಿ20 ಸರಣಿಯನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ ಕೆಲವು ದಿನಗಳ ಹಿಂದೆ 15 ಸದಸ್ಯರ ಟಿ20 ತಂಡವನ್ನು ಪ್ರಕಟಿಸಿದೆ. ಈ ಸರಣಿಯಲ್ಲೂ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಈ ಸರಣಿಯಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಹಾಗೆಯೇ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಗಾಯದಿಂದಾಗಿ ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ಉಳಿದಂತೆ ತಂಡದಲ್ಲಿ ಹಲವು ಯುವ ಆಟಗಾರರಿಗೆ ಮೊಟ್ಟ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಆಡುವುದು ಖಚಿತವಾಗಿದೆ.

ಟಿ20 ಸರಣಿಗೆ ಭಾರತ ತಂಡ

  • ನಾಯಕ: ಶ್ರೇಯಸ್ ಅಯ್ಯರ್
  • ಉಪನಾಯಕ: ತಿಲಕ್ ವರ್ಮ
  • ವಿಕೆಟ್‌ಕೀಪರ್‌ಗಳು: ಇಶಾನ್ ಕಿಶನ್, ಪ್ರಭಾಸಿಮ್ರಾನ್ ಸಿಂಗ್
  • ಬ್ಯಾಟರ್ಸ್: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್
  • ಆಲ್‌ರೌಂಡರ್‌ಗಳು: ಶಿವಂ ದುಬೆ, ಹರ್ಷ್ ದುಬೆ, ಪ್ರಿನ್ಸ್ ಯಾದವ್
  • ಬೌಲರ್‌ಗಳು: ರವಿ ಬಿಷ್ಣೋಯಿ, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್.

ಕ್ಯಾಚ್ ಹಿಡಿಯಲ್ಲ, ರನ್ ಹೊಡೆಯಲ್ಲ, ಬೌಲಿಂಗ್ ಬಗ್ಗೆ ಕೇಳಬೇಕಿಲ್ಲ; ಇವರೇನಾ ಟಿ20 ಚಾಂಪಿಯನ್ಸ್..!

ಟಿ20 ಸರಣಿ ವೇಳಾಪಟ್ಟಿ

  • ಮೊದಲನೇ ಟಿ20 ಪಂದ್ಯ: ಗುರುವಾರ, ಜುಲೈ 23, 2026
  • ಎರಡನೇ ಟಿ20 ಪಂದ್ಯ: ಶನಿವಾರ, ಜುಲೈ 25, 2026
  • ಮೂರನೇ ಟಿ20 ಪಂದ್ಯ: ಭಾನುವಾರ, ಜುಲೈ 26, 2026

* ಈ ಮೂರು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30 ಕ್ಕೆ ಆರಂಭವಾಗಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ