ಟೀಮ್ ಇಂಡಿಯಾದ ಮುಂದಿನ ಪಂದ್ಯಗಳು ಯಾವಾಗ? ಇಲ್ಲಿದೆ ಮಾಹಿತಿ

|

Updated on: Jul 11, 2024 | 8:53 AM

IND vs ZIM: ಭಾರತ ಮತ್ತು ಝಿಂಬಾಬ್ವೆ ಇದುವರೆಗೆ 10 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 7 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಝಿಂಬಾಬ್ವೆ ಮೂರು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಉಭಯ ತಂಡಗಳ ನಡುವೆ ಐದು ಪಂದ್ಯಗಳು ಸರಣಿ ನಡೆಯುತ್ತಿದ್ದು, ಈ ಸರಣಿಯ ಕೊನೆಯ ಎರಡು ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾದ ಮುಂದಿನ ಪಂದ್ಯಗಳು ಯಾವಾಗ? ಇಲ್ಲಿದೆ ಮಾಹಿತಿ
Team India
Follow us on

ಭಾರತ ಮತ್ತು ಝಿಂಬಾಬ್ವೆ (IND vs ZIM) ನಡುವಣ 5 ಪಂದ್ಯಗಳ ಟಿ20 ಸರಣಿಯ ಮೂರು ಮ್ಯಾಚ್​ಗಳು ಮುಗಿದಿವೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು (Team India) 13 ರನ್​ಗಳಿಂದ ಸೋಲಿಸಿ ಶುಭಾರಂಭ ಮಾಡಿದ್ದ ಝಿಂಬಾಬ್ವೆ ಆ ಬಳಿಕ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಎರಡನೇ ಪಂದ್ಯದಲ್ಲಿ 100 ರನ್​ಗಳಿಂದ ಆತಿಥೇಯರನ್ನು ಬಗ್ಗು ಬಡಿದ ಭಾರತ ತಂಡವು ಇದೀಗ ಮೂರನೇ ಪಂದ್ಯದಲ್ಲೂ 23 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಇನ್ನು ಸರಣಿ ಜಯಿಸಲು ಟೀಮ್ ಇಂಡಿಯಾ ಮುಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ ಸಾಕು. ಆದರೆ ಅತ್ತ ಈ ಪಂದ್ಯವು ಝಿಂಬಾಬ್ವೆ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ 2-1 ಅಂತರದಿಂದ ಮುನ್ನಡೆ ಹೊಂದಿರುವ ಟೀಮ್ ಇಂಡಿಯಾ 4ನೇ ಪಂದ್ಯದಲ್ಲಿ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಬಹುದು. ಹೀಗಾಗಿ 4ನೇ ಟಿ20 ಪಂದ್ಯವು ಝಿಂಬಾಬ್ವೆ ಪಾಲಿಗೆ ನಿರ್ಣಾಯಕ.

ನಾಲ್ಕನೇ ಪಂದ್ಯದಲ್ಲಿ ಝಿಂಬಾಬ್ವೆ ಜಯ ಸಾಧಿಸಿದರೆ, ಭಾನುವಾರ ನಡೆಯಲಿರುವ ಅಂತಿಮ ಟಿ20 ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಡಲಿದೆ. ಹೀಗಾಗಿ ಹರಾರೆಯ ಸ್ಪೋರ್ಟ್ಸ್ ಕ್ಲಬ್​ನಲ್ಲಿ ನಡೆಯಲಿರುವ 4ನೇ ಪಂದ್ಯದಲ್ಲಿ ಉಭಯ ತಂಡಗಳಿಂದ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು.

ಕೊನೆಯ ಎರಡು ಪಂದ್ಯಗಳು ಯಾವಾಗ?

ಭಾರತ ಮತ್ತು ಝಿಂಬಾಬ್ವೆ ನಡುವಣ 4ನೇ ಟಿ20 ಪಂದ್ಯವು ಶನಿವಾರ ನಡೆಯಲಿದೆ. ಹಾಗೆಯೇ 5ನೇ ಟಿ20 ಪಂದ್ಯವು ಭಾನುವಾರ ಜರುಗಲಿದೆ. ಅಂದರೆ ಜುಲೈ 13 ಮತ್ತು 14 ರಂದು ಬ್ಯಾಕ್ ಟು ಬ್ಯಾಕ್ ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳೊಂದಿಗೆ ಭಾರತ ಮತ್ತು ಝಿಂಬಾಬ್ವೆ ನಡುವಣ ಸರಣಿ ಕೊನೆಗೊಳ್ಳಲಿದೆ.

ಉಭಯ ತಂಡಗಳು:

ಭಾರತ ಟಿ20 ತಂಡ: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ , ಹರ್ಷಿತ್ ರಾಣಾ, ಶಿವಂ ದುಬೆ, ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್.

ಇದನ್ನೂ ಓದಿ: KL Rahul: ಕೆಎಲ್ ರಾಹುಲ್ RCBಗೆ ನಾಯಕರಾಗ್ತಾರಾ?

ಝಿಂಬಾಬ್ವೆ ತಂಡ: ಬ್ರಿಯಾನ್ ಬೆನೆಟ್, ತಡಿವಾನಾಶೆ ಮರುಮಣಿ, ಸಿಕಂದರ್ ರಾಝ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಇನೋಸೆಂಟ್ ಕೈಯಾ, ವೆಸ್ಲಿ ಮಾಧೆವೆರೆ, ಲ್ಯೂಕ್ ಜೊಂಗ್ವೆ, ವೆಲ್ಲಿಂಗ್‌ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಝರ್ಬಾನಿ, ರಿಚರ್ಡ್ ನ್ಗರವ, ಬ್ರಾಂಡನ್ ಮಯ್‌ರಾಂಡೈ ಮಯ್‌ರಾಂಡೈ, ಬ್ರಾಂಡನ್ ಮಯ್‌ರಾಂಡೈಸ್ , ಫರಾಜ್ ಅಕ್ರಮ್, ಅಂತುಮ್ ನಖ್ವಿ.

ಮುಂದಿನ ಸರಣಿ ಯಾವಾಗ ಶುರು?

ಝಿಂಬಾಬ್ವೆ ವಿರುದ್ಧದ ಸರಣಿ ಮುಕ್ತಾಯದ ಬಳಿಕ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ. ಈ ಸರಣಿಗೆ ಇನ್ನೂ ಕೂಡ ದಿನಾಂಗ ನಿಗದಿ ಮಾಡಲಾಗಿಲ್ಲ. ಇದಾಗ್ಯೂ ಜುಲೈ 27 ರಿಂದ ಆಗಸ್ಟ್ 7 ರ ನಡುವೆ 6 ಪಂದ್ಯಗಳು ನಡೆಯುವ ಸಾಧ್ಯತೆಯಿದೆ.