IND vs ZIM: ಭಾರತ ವಿರುದ್ಧದ ಏಕದಿನ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ

| Updated By: ಪೃಥ್ವಿಶಂಕರ

Updated on: Aug 11, 2022 | 10:58 PM

IND vs ZIM: ಇದೇ ತಿಂಗಳು ಭಾರತ ಮತ್ತು ಜಿಂಬಾಬ್ವೆ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಕ್ಕಾಗಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿತ್ತು, ಇದೀಗ ಆತಿಥೇಯ ಜಿಂಬಾಬ್ವೆ ಕೂಡ ತಂಡವನ್ನು ಪ್ರಕಟಿಸಿದೆ.

IND vs ZIM: ಭಾರತ ವಿರುದ್ಧದ ಏಕದಿನ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ
Follow us on

ಬಾಂಗ್ಲಾದೇಶ ವಿರುದ್ಧದ ಅಮೋಘ ಪ್ರದರ್ಶನದ ಆಧಾರದ ಮೇಲೆ ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಜಿಂಬಾಬ್ವೆಯ ಕಣ್ಣು ಇದೀಗ ಭಾರತ ಕ್ರಿಕೆಟ್ ತಂಡದ ಮೇಲಿದೆ. ಇದೇ ತಿಂಗಳು ಭಾರತ ಮತ್ತು ಜಿಂಬಾಬ್ವೆ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಕ್ಕಾಗಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿತ್ತು, ಇದೀಗ ಆತಿಥೇಯ ಜಿಂಬಾಬ್ವೆ ಕೂಡ ತಂಡವನ್ನು ಪ್ರಕಟಿಸಿದೆ. ತಂಡವು ತಮ್ಮ ನಿಯಮಿತ ನಾಯಕ ಕ್ರೇಗ್ ಇರ್ವಿನ್ ಇಲ್ಲದೆ ಭಾರತ ವಿರುದ್ಧ ಅಖಾಡಕ್ಕಿಳಿಯಲಿದೆ. ಹೀಗಾಗಿ ತಂಡದ ನಾಯಕತ್ವವನ್ನು ರೆಗಿಸ್ ಚಕಬ್ವಾ ಅವರಿಗೆ ನೀಡಲಾಗಿದೆ.

ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಆಗಸ್ಟ್ 11 ಗುರುವಾರದಂದು ಈ ಸರಣಿಗಾಗಿ 17 ಸದಸ್ಯರ ತಂಡವನ್ನು ಘೋಷಿಸಿದೆ. ಅದರ ನಾಯಕ ಇರ್ವಿನ್ ಹೊರತುಪಡಿಸಿ, ತಂಡವು ಬಿರುಗಾಳಿಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರ್ಬಾನಿ ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದಿಂದ ಇರ್ವಿನ್ ಇನ್ನೂ ಚೇತರಿಸಿಕೊಂಡಿಲ್ಲ. ಮುಜರ್ಬಾನಿಗೆ ತೊಡೆಸಂದು ಸಮಸ್ಯೆ ಇದ್ದು, ಈ ಕಾರಣದಿಂದಾಗಿ ಅವರು ಭಾರತದ ವಿರುದ್ಧ ಆಡುತ್ತಿಲ್ಲ ಎಂದು ವರದಿಯಾಗಿದೆ.

ಈ ನಿಟ್ಟಿನಲ್ಲಿ ಜಿಂಬಾಬ್ವೆ ಕ್ರಿಕೆಟ್ ಆಯ್ಕೆಯಾದ ತಂಡ, ಗಾಯಗೊಂಡ ಆಟಗಾರರು ಹಾಗೂ ನೂತನ ನಾಯಕನ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಈ ಕುರಿತು ವಿವರಣೆ ನೀಡಿರುವ ಮಂಡಳಿ, ನಿಯಮಿತ ನಾಯಕ ಕ್ರೇಗ್ ಇರ್ವಿನ್ ಅನುಪಸ್ಥಿತಿಯಲ್ಲಿ ರೆಗಿಸ್ ಚಕಬ್ವಾ ತಂಡವನ್ನು ಮುನ್ನಡೆಸಲಿದ್ದಾರೆ. ಮಂಡಿರಜ್ಜು ಗಾಯದಿಂದ ಇರ್ವಿನ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಜಿಂಬಾಬ್ವೆ ಕೂಡ ಬ್ಲೆಸಿಂಗ್ ಮುಜರ್ಬಾನಿ, ತೆಂಡೈ ಚಾತ್ರಾ ಮತ್ತು ವೆಲ್ಲಿಂಗ್ಟನ್ ಮಸಕಡ್ಜಾ ಇಲ್ಲದೆ ಆಡಬೇಕಾಗುತ್ತದೆ. ಈ ಮೂವರು ಆಟಗಾರರು ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡಿದೆ.

ಜಿಂಬಾಬ್ವೆ ಇತ್ತೀಚೆಗೆ ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತು ಮತ್ತು ನಂತರ ಏಕದಿನ ಸರಣಿಯಲ್ಲಿಯೂ ಸಹ ಸೋಲಿಸಿತು. ಇರ್ವಿನ್ ಈ ಟಿ20 ಸರಣಿಯಲ್ಲಿ ತಂಡದ ನಾಯಕರಾಗಿದ್ದರು, ಆದರೆ ಈ ಸರಣಿಯ ಬಳಿಕ ಇಂಜುರಿಗೆ ತುತ್ತಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಚಕಬ್ವಾ ಏಕದಿನ ಸರಣಿಯ ನಾಯಕತ್ವವನ್ನೂ ವಹಿಸಿ ತಂಡವನ್ನು 2-1 ಅಂತರದಲ್ಲಿ ಗೆಲುವಿನತ್ತ ಮುನ್ನಡೆಸಿದರು. ಈ ವೇಳೆ ಚಕಬ್ವಾ ಎರಡನೇ ಏಕದಿನ ಪಂದ್ಯದಲ್ಲೂ ಭರ್ಜರಿ ಶತಕ ಬಾರಿಸಿದ್ದರು.

Published On - 10:52 pm, Thu, 11 August 22