IND vs NEP: ಭಾರತ- ನೇಪಾಳ ನಡುವೆ ಟಿ20 ಸರಣಿ; ವೇಳಾಪಟ್ಟಿ ಪ್ರಕಟ
India A vs Nepal T20 Series: ಭಾರತ ಎ ತಂಡವು ಡಿಸೆಂಬರ್‌ನಲ್ಲಿ ನೇಪಾಳಕ್ಕೆ ಮೂರು ಟಿ20 ಪಂದ್ಯಗಳ ಸರಣಿಗಾಗಿ ಪ್ರವಾಸ ಮಾಡಲಿದೆ. ಡಿಸೆಂಬರ್ 9 ರಿಂದ 13 ರವರೆಗೆ ಕೀರ್ತಿಪುರದಲ್ಲಿ ಪಂದ್ಯಗಳು ನಡೆಯಲಿವೆ. ಇದು ನೇಪಾಳ ಕ್ರಿಕೆಟ್‌ನ ಬೆಳವಣಿಗೆಗೆ ಮಹತ್ವದ ಅವಕಾಶವಾಗಿದ್ದು, ಐಪಿಎಲ್‌ನಲ್ಲಿ ಮಿಂಚಿದ ಹಾಗೂ ಯುವ ಭಾರತೀಯ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ನೇಪಾಳ ಕ್ರಿಕೆಟ್ ಸಂಸ್ಥೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತ ಎ ತಂಡ ನೇಪಾಳ (India A vs Nepal) ಪ್ರವಾಸ ಮಾಡಲಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಉಭಯ ತಂಡಗಳ ನಡುವೆ ಈ ಸರಣಿ ನಡೆಯಲಿದ್ದು, ನೇಪಾಳ ಕ್ರಿಕೆಟ್ ಸಂಸ್ಥೆ ಭಾರತ ಎ ತಂಡದ ಪ್ರವಾಸವನ್ನು ಖಚಿತಪಡಿಸಿದೆ. ಎರಡು ತಂಡಗಳ ನಡುವಿನ ಈ ಸರಣಿ ಡಿಸೆಂಬರ್ 9 ರಿಂದ ಡಿಸೆಂಬರ್ 13 ರವರೆಗೆ ನಡೆಯಲಿದ್ದು, ಈ ಸರಣಿಯ ವೇಳಾಪಟ್ಟಿಯನ್ನು ಸಹ ನೇಪಾಳ ಕ್ರಿಕೆಟ್ ಸಂಸ್ಥೆ ಬಿಡುಗಡೆ ಮಾಡಿದೆ. ನೇಪಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಚತುರ್ ಬಹದ್ದೂರ್ ಚಂದ್, ಕಾರ್ಯದರ್ಶಿ ಪರಾಸ್ ಖಡ್ಕಾ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವ್ಜಿತ್ ಸೈಕಿಯಾ ನಡುವಿನ ಸಭೆಯ ನಂತರ ದ್ವಿಪಕ್ಷೀಯ ಸರಣಿಯ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೀರ್ತಿಪುರದ ತ್ರಿಭುವನ್ ವಿಶ್ವವಿದ್ಯಾಲಯದ TU ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳ ನಡುವೆ ಮೂರು ಟಿ20 ಪಂದ್ಯಗಳು ನಡೆಯಲಿವೆ.
ಟಿ20 ಸರಣಿ ವೇಳಾಪಟ್ಟಿ ಇಂತಿದೆ
ಡಿಸೆಂಬರ್ 9 – ಮೊದಲ ಟಿ20
ಡಿಸೆಂಬರ್ 11 – ಎರಡನೇ ಟಿ20
ಡಿಸೆಂಬರ್ 13 – ಮೂರನೇ ಟಿ20
🇳🇵🤝🇮🇳 A blockbuster series awaits!
Nepal will host India A in a three-match T20 Series at the TU International Cricket Ground, Kirtipur
The series was confirmed following a meeting held during the ICC Conference in Scotland between CAN President Chatur Bahadur Chand, CAN… pic.twitter.com/ykYFW986et
— CAN (@CricketNep) July 10, 2026
ವೈಭವ್ ಸೇರಿದಂತೆ ಯುವ ಆಟಗಾರರಿಗೆ ಅವಕಾಶ
ಈ ಪ್ರವಾಸಕ್ಕೆ ಬಿಸಿಸಿಐ ಇನ್ನು ತಂಡವನ್ನು ಪ್ರಕಟಿಸಿಲ್ಲ. ಆದರೆ ವರದಿಯ ಪ್ರಕಾರ, ಐಪಿಎಲ್‌ನಲ್ಲಿ ಮಿಂಚಿದ ಆಟಗಾರರು ಮತ್ತು ಟಿ20 ತಂಡದಲ್ಲಿ ಆಡಿದ ಕೆಲವು ಹಿರಿಯ ಆಟಗಾರರನ್ನು ಈ ಪ್ರವಾಸಕ್ಕೆ ಕಳುಹಿಸಬಹುದು. ಅಂದರೆ ನೇಪಾಳ ಪ್ರವಾಸಕ್ಕೆ ಭಾರತ ಎ ತಂಡದಲ್ಲಿ ವೈಭವ್ ಸೂರ್ಯವಂಶಿಯನ್ನು ಆಯ್ಕೆ ಮಾಡುವುದು ಖಚಿತವೆನ್ನಬಹುದು. ವೈಭವ್ ಜೊತೆಗೆ ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್, ಆಯುಷ್ ಮ್ಹಾತ್ರೆ ಸೇರಿದಂತೆ ಇನ್ನು ಹಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
IND vs ENG: 14 ವರ್ಷಗಳ ನಂತರ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್
ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ
ಭಾರತ ಎ ತಂಡದೊಂದಿಗಿನ ಈ ಸರಣಿ ನೇಪಾಳ ಕ್ರಿಕೆಟ್ ತಂಡದ ಬೆಳವಣಿಗೆಗೆ ದೊಡ್ಡ ಅವಕಾಶ ಕಲ್ಪಿಸಿಕೊಡಲಿದೆ. ನೇಪಾಳ ತಂಡ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ಹಿಂದಿನ ಎರಡೂ ಟಿ20 ವಿಶ್ವಕಪ್‌ಗಳಿಗೆ ನೇಪಾಳ ಅರ್ಹತೆ ಪಡೆದಿತ್ತು. 2024 ರ ವಿಶ್ವಕಪ್‌ನಲ್ಲಿ ನೇಪಾಳ ಒಂದೇ ಒಂದು ಗೆಲುವು ದಾಖಲಿಸಿರಲಿಲ್ಲ. ಆದರೆ 2026 ರ ವಿಶ್ವಕಪ್‌ನಲ್ಲಿ ತನ್ನ ಪ್ರದರ್ಶನವನ್ನು ಸುಧಾರಿಸಿಕೊಂಡಿದ್ದ ನೇಪಾಳ, ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿತ್ತು. ಹಾಗೆಯೇ ಇಂಗ್ಲೆಂಡ್ ತಂಡಕ್ಕೂ ಸೋಲಿನ ಭಯ ಹುಟ್ಟಿಸಿತ್ತು. ಆದರೆ ಕೇವಲ 4 ರನ್ಗಳಿಂದ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sat, 11 July 26




