ರಜತ್ ಪಾಟಿದಾರ್ ಶತಕ: ಭಾರತ A vs ಇಂಗ್ಲೆಂಡ್​ L ಪಂದ್ಯ ಡ್ರಾ..!

| Updated By: ಝಾಹಿರ್ ಯೂಸುಫ್

Updated on: Jan 21, 2024 | 7:49 AM

India A vs England Lions: ದ್ವಿತೀಯ ಇನಿಂಗ್ಸ್​ನಲ್ಲಿ 489 ರನ್​ಗಳ ಗುರಿ ಪಡೆದ ಭಾರತ ಎ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿಯಿತು. ಇದಾಗ್ಯೂ ಸಾಯಿ ಸುದರ್ಶನ್ 97 ರನ್​ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಝ್ ಖಾನ್ 55 ರನ್​ ಬಾರಿಸಿದರೆ, ಮಾನವ್ ಸುತಾರ್ 89 ರನ್​ಗಳ ಕೊಡುಗೆ ನೀಡಿದರು.

ರಜತ್ ಪಾಟಿದಾರ್ ಶತಕ: ಭಾರತ A vs ಇಂಗ್ಲೆಂಡ್​ L ಪಂದ್ಯ ಡ್ರಾ..!
Rajat Patidar
Follow us on

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್​-ಭಾರತ ಎ ತಂಡಗಳ ನಡುವಣ ಮೊದಲ ಅನಧಿಕೃತ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿದೆ. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ಎ (India A) ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ಪರ ಕೀಟನ್ ಜೆನ್ನಿಂಗ್ಸ್​ (154) ಹಾಗೂ ನಾಯಕ ಜೋಶ್ ಬೊಹಾನನ್ (125) ಭರ್ಜರಿ ಶತಕ ಬಾರಿಸಿದ್ದರು.

ಈ ಶತಕಗಳ ನೆರವಿನಿಂದ ಇಂಗ್ಲೆಂಡ್ ಲಯನ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ 8 ವಿಕೆಟ್ ನಷ್ಟಕ್ಕೆ 553 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡದ ಪರ ರಜತ್ ಪಾಟಿದಾರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

158 ಎಸೆತಗಳನ್ನು ಎದುರಿಸಿದ ಪಾಟಿದಾರ್ 5 ಸಿಕ್ಸ್ ಹಾಗೂ 19 ಫೋರ್​ಗಳೊಂದಿಗೆ 151 ರನ್ ಸಿಡಿಸಿದರು. ಇದಾಗ್ಯೂ ಇತರೆ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಭಾರತ ಎ ತಂಡದ ಮೊದಲ ಮೊದಲ ಇನಿಂಗ್ಸ್​​ ಕೇವಲ 227 ರನ್​ಗಳಿಗೆ ಅಂತ್ಯವಾಯಿತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ತಂಡವು 6 ವಿಕೆಟ್ ಕಳೆದುಕೊಂಡು 163 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

489 ರನ್​ಗಳ ಗುರಿ:

ದ್ವಿತೀಯ ಇನಿಂಗ್ಸ್​ನಲ್ಲಿ 489 ರನ್​ಗಳ ಗುರಿ ಪಡೆದ ಭಾರತ ಎ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿಯಿತು. ಇದಾಗ್ಯೂ ಸಾಯಿ ಸುದರ್ಶನ್ 97 ರನ್​ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಝ್ ಖಾನ್ 55 ರನ್​ ಬಾರಿಸಿದರೆ, ಮಾನವ್ ಸುತಾರ್ 89 ರನ್​ಗಳ ಕೊಡುಗೆ ನೀಡಿದರು.

ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕೆಎಸ್ ಭರತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. 165 ಎಸೆತಗಳನ್ನು ಎದುರಿಸಿದ ಭರತ್ 15 ಫೋರ್​ಗಳೊಂದಿಗೆ ಅಜೇಯ 116 ರನ್​ ಬಾರಿಸಿದರು. ಅದರಂತೆ 2ನೇ ಇನಿಂಗ್ಸ್​ನಲ್ಲಿ 5 ವಿಕೆಟ್ ಕಳೆದುಕೊಂಡು 426 ರನ್​ ಕಲೆಹಾಕುವ ಮೂಲಕ ಭಾರತ ಎ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಇಂಗ್ಲೆಂಡ್ ಲಯನ್ಸ್​ ಪ್ಲೇಯಿಂಗ್ 11: ಕೀಟನ್ ಜೆನ್ನಿಂಗ್ಸ್ , ಅಲೆಕ್ಸ್ ಲೀಸ್ , ಮ್ಯಾಥ್ಯೂ ಫಿಶರ್ , ಡ್ಯಾನ್ ಮೌಸ್ಲಿ , ಜ್ಯಾಕ್ ಕಾರ್ಸನ್ , ಕ್ಯಾಲಮ್ ಪಾರ್ಕಿನ್ಸನ್ , ಜೇಮ್ಸ್ ರೆವ್ , ಆಲಿವರ್ ರಾಬಿನ್ಸನ್ ( ವಿಕೆಟ್ ಕೀಪರ್ ) , ಜೋಶ್ ಬೊಹಾನನ್ (ನಾಯಕ) , ಬ್ರೈಡನ್ ಕಾರ್ಸೆ , ಮ್ಯಾಥ್ಯೂ ಪಾಟ್ಸ್.

ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಭಾರತ ಎ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ (ನಾಯಕ) , ಸಾಯಿ ಸುದರ್ಶನ್ , ರಜತ್ ಪಾಟಿದಾರ್ , ಸರ್ಫರಾಜ್ ಖಾನ್ , ಪ್ರದೋಶ್ ಪಾಲ್ , ಶ್ರೀಕರ್ ಭರತ್ ( ವಿಕೆಟ್ ಕೀಪರ್ ) , ಮಾನವ್ ಸುತಾರ್ , ಪುಲ್ಕಿತ್ ನಾರಂಗ್ , ತುಷಾರ್ ದೇಶಪಾಂಡೆ , ನವದೀಪ್ ಸೈನಿ , ವಿಧ್ವತ್ ಕಾವೇರಪ್ಪ

 

 

Published On - 7:49 am, Sun, 21 January 24