Team India: 7 ವರ್ಷಗಳ ಹಿಂದಿನ ಪಂದ್ಯಕ್ಕೆ ಸಿಕ್ಕಾಪಟ್ಟೆ ಸಾಮ್ಯತೆ: ಮರುಕಳಿಸಿದ ಟೀಮ್ ಇಂಡಿಯಾದ ಇತಿಹಾಸ

| Updated By: ಝಾಹಿರ್ ಯೂಸುಫ್

Updated on: Aug 17, 2021 | 6:57 PM

India vs England: 2014 ರಲ್ಲಿ ಮೊದಲ ಇನಿಂಗ್ಸ್​ನಲ್ಲಿ ರಹಾನೆ ಶತಕದ ನೆರವು ನೀಡಿದ್ದರು. ಇನ್ನು 2ನೇ ಇನಿಂಗ್ಸ್​ನಲ್ಲಿ ಮುರುಳಿ ವಿಜಯ್ ಹಾಗೂ ಬೌಲರ್ ಭುವನೇಶ್ವರ್ ಕುಮಾರ್ ಅರ್ಧಶತಕ ಬಾರಿಸಿದ್ದರು.

Team India: 7 ವರ್ಷಗಳ ಹಿಂದಿನ ಪಂದ್ಯಕ್ಕೆ ಸಿಕ್ಕಾಪಟ್ಟೆ ಸಾಮ್ಯತೆ: ಮರುಕಳಿಸಿದ ಟೀಮ್ ಇಂಡಿಯಾದ ಇತಿಹಾಸ
Team India
Follow us on

ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಾರ್ಡ್ಸ್​ (Lords) ಮೈದಾನದಲ್ಲಿ ಇಂಗ್ಲೆಂಡ್ (England) ತಂಡದ್ದೇ ಪಾರುಪತ್ಯ ಎಂಬುದು ಕ್ರಿಕೆಟ್ ಜಗತ್ತಿಗೆ ಗುರುತ್ತಿರುವ ವಿಷಯ. ಏಕೆಂದರೆ ಶತಮಾನಗಳಿಂದಲೂ ಈ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಮೇಲುಗೈ ಸಾಧಿಸುತ್ತಾ ಬಂದಿದೆ. ಇದಕ್ಕೆ ಸಾಕ್ಷಿಯೇ ಇಲ್ಲಿ ಆಡಿದ 140 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ 55 ಗೆಲುವು ಹಾಗೂ 51 ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವುದು. ಆದರೆ ಆತಿಥೇಯರ ಶ್ರೇಷ್ಠ ಮೈದಾನದಲ್ಲೇ ನುಗ್ಗಿ ಹೊಡೆಯುವಂತೆ ಟೀಮ್ ಇಂಡಿಯಾ (Team India) ಇಂಗ್ಲೆಂಡ್​ ಅನ್ನು ಬಗ್ಗು ಬಡಿದಿದೆ. ಅದು ಕೂಡ 2014 ರ ಸ್ಟೈಲ್​ನಲ್ಲೇ ಎಂಬುದು ಇಲ್ಲಿ ವಿಶೇಷ. ಹೌದು, ಟೀಮ್ ಇಂಡಿಯಾ 2014 ರಲ್ಲಿ ಲಾರ್ಡ್ಸ್​ ಮೈದಾನದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಆ ಪಂದ್ಯಕ್ಕೂ ಇದೀಗ ಗೆದ್ದ ಪಂದ್ಯಕ್ಕೂ ಸಿಕ್ಕಾಪಟ್ಟೆ ಸಾಮ್ಯತೆಯಿತೆ.

ಹೌದು, 7 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಟೀಮ್ ಇಂಡಿಯಾ (India vs England 2nd Test) ಇಂಗ್ಲೆಂಡ್ ತಂಡವನ್ನು ಮಣಿಸಿ ಗೆಲುವಿನ ಕೇಕೆ ಹಾಕಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 295 ರನ್ ಕಲೆಹಾಕಿತ್ತು. ಈ ವೇಳೆ ಅಜಿಂಕ್ಯ ರಹಾನೆ 103 ರನ್ ಬಾರಿಸಿ ಭಾರತ ತಂಡಕ್ಕೆ ನೆರವಾಗಿದ್ದರು. ಇನ್ನು ಭಾರತ ನೀಡಿದ ಗುರಿಗೆ ಪ್ರತಿಯಾಗಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 319 ರನ್ ಗಳಿಸಿತು. ಅಂದರೆ, ಅಂದು ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್​ನಲ್ಲಿ 24 ರನ್​ಗಳ ಮುನ್ನಡೆ ಪಡೆದುಕೊಂಡಿತ್ತು.

ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಿತು. ಮುರಳಿ ವಿಜಯ್, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 342 ರನ್ ಕಲೆಹಾಕಿತು. ಈ ಮೂಲಕ ಇಂಗ್ಲೆಂಡ್​ಗೆ 319 ರನ್ ಗಳ ಗುರಿ ನೀಡಿತು. ಆದರೆ ಆತಿಥೇಯರು ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 223 ರನ್ ಗಳಿಗೆ ಆಲೌಟಾದರು. ಈ ಪಂದ್ಯವನ್ನು ಟೀಮ್ ಇಂಡಿಯಾ 95 ರನ್​ಗಳಿಂದ ಗೆದ್ದುಕೊಂಡಿತು.

ಪ್ರಸ್ತುತ ಭಾರತ ಗೆದ್ದಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 364 ರನ್​ ಕಲೆಹಾಕಿದರೆ, ಇಂಗ್ಲೆಂಡ್ ತಂಡವು 391 ರನ್ ಪೇರಿಸಿತು. ಮೊದಲ ಇನಿಂಗ್ಸ್​ನಲ್ಲಿ ಭಾರತದ ಪರ ಕೆಎಲ್ ರಾಹುಲ್ ಶತಕ ಸಿಡಿಸಿ ನೆರವಾಗಿದ್ದರು. ಇತ್ತ ನಾಯಕ ಜೋ ರೂಟ್ ಅಜೇಯ 180 ರನ್​ ಬಾರಿಸಿ ಇಂಗ್ಲೆಂಡ್​ 27 ರನ್​ಗಳ ಮುನ್ನಡೆ ತಂದುಕೊಟ್ಟಿದ್ದರು. 2ನೇ ಇನಿಂಗ್ಸ್​ನಲ್ಲಿ ಅಜಿಂಕ್ಯ ರಹಾನೆ ಅರ್ಧಶತಕ ಬಾರಿಸಿದ್ದರು. ಇನ್ನು ಬೌಲರ್​ ಮೊಹಮ್ಮದ್ ಶಮಿ ಹಾಫ್​ ಸೆಂಚುರಿಯ ಕಾಣಿಕೆ ನೀಡಿದ್ದರು.

ಅಂದರೆ 2014 ರಲ್ಲಿ ಮೊದಲ ಇನಿಂಗ್ಸ್​ನಲ್ಲಿ ರಹಾನೆ ಶತಕದ ನೆರವು ನೀಡಿದ್ದರು. ಇನ್ನು 2ನೇ ಇನಿಂಗ್ಸ್​ನಲ್ಲಿ ಮುರುಳಿ ವಿಜಯ್ ಹಾಗೂ ಬೌಲರ್ ಭುವನೇಶ್ವರ್ ಕುಮಾರ್ ಅರ್ಧಶತಕ ಬಾರಿಸಿದ್ದರು. ಕಾಕತಾಳೀಯ ಎಂಬಂತೆ ಈ ಬಾರಿ ಮೊದಲ ಇನಿಂಗ್ಸ್​ನಲ್ಲಿ ಕೆಎಲ್ ರಾಹುಲ್ ಬಾರಿಸಿದರೆ, 2ನೇ ಇನಿಂಗ್ಸ್​ನಲ್ಲಿ ರಹಾನೆ ಹಾಗೂ ಬೌಲರ್ ಮೊಹಮ್ಮದ್ ಶಮಿ ಅರ್ಧಶತಕ ಬಾರಿಸಿದ್ದರು.

ಅಂದು ಅಂತಿಮ ದಿನದಾಟದಲ್ಲಿ ಇಶಾಂತ್ ಶರ್ಮಾ 7 ವಿಕೆಟ್ ಉರುಳಿಸಿ ಟೀಮ್ ಇಂಡಿಯಾಗೆ ಭರ್ಜರಿ ಜಯ ತಂದುಕೊಟ್ಟರೆ, ಈ ಬಾರಿ ಮೊಹಮ್ಮದ್ ಸಿರಾಜ್ ದ್ವಿತೀಯ ಟೆಸ್ಟ್​ನಲ್ಲಿ 8 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂದರೆ 2014ರಲ್ಲಿ ಲಾರ್ಡ್ಸ್​ ಮೈದಾನದಲ್ಲಿನ ಭಾರತದ ಪ್ರದರ್ಶನಕ್ಕೂ ಪ್ರಸ್ತುತ ಪ್ರದರ್ಶನಕ್ಕೂ ತುಂಬಾ ಸಾಮ್ಯತೆ ಕಂಡು ಬರುತ್ತದೆ. ಇಲ್ಲಿ ಆಟಗಾರರು ಬದಲಾದರೂ ಅಂಕಿ ಅಂಶಗಳು ಒಂದಕ್ಕೊಂದು ತುಂಬಾ ಹತ್ತಿರಲಿದೆ.

ಅಷ್ಟೇ ಅಲ್ಲದೆ ಅಂದು ನಾಟಿಂಗ್​ಹ್ಯಾಮ್​ನಲ್ಲಿ ನಡೆದ ಮೊದಲ ಟೆಸ್ಟ್​ ಸಹ ಡ್ರಾ ಆಗಿತ್ತು. ಇನ್ನು ಲಾರ್ಡ್ಸ್​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲೇ ಭಾರತ ಭರ್ಜರಿ ಜಯ ಸಾಧಿಸಿತ್ತು. ಈ ಬಾರಿ ಸಹ ಸರಣಿಯ ಮೊದಲ ಟೆಸ್ಟ್​ ನಾಟಿಂಗ್​ಹ್ಯಾಮ್​ನಲ್ಲಿ ಡ್ರಾ ಆಗಿದ್ದು, 2ನೇ ಟೆಸ್ಟ್​​ನಲ್ಲೇ ಇಂಗ್ಲೆಂಡ್​ ತಂಡಕ್ಕೆ ಕ್ರಿಕೆಟ್ ಕಾಶಿಯಲ್ಲಿ ಟೀಮ್ ಇಂಡಿಯಾ ಮಣ್ಣು ಮುಕ್ಕಿಸಿದೆ. ಆದರೆ ಅಂದು ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡ 95 ರನ್​ಗಳ ಜಯ ಸಾಧಿಸಿದರೆ, ಈ ಸಲ ಕಿಂಗ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 151 ರನ್​ಗಳ ಭರ್ಜರಿ ಗೆಲುವು ದಾಖಲಿಸಿರುವುದು ವಿಶೇಷ.

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

ಇದನ್ನೂ ಓದಿ: Team India Video: ಲಾರ್ಡ್ಸ್​ ಡ್ರೆಸಿಂಗ್ ರೂಮ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ವಿಜಯೋತ್ಸವ

ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್​ಗೆ ಅಫ್ಘಾನಿಸ್ತಾನ್ ತಂಡ ಅನುಮಾನ

(India beat England after seven years at Lord’s as same Style)