Team India Video: ಲಾರ್ಡ್ಸ್ ಡ್ರೆಸಿಂಗ್ ರೂಮ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ವಿಜಯೋತ್ಸವ
Team India dressing room video: ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಭಾರತ ನೀಡಿದ್ದ 272 ರನ್ ಗಳ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಕೇವಲ 120 ರನ್ಗಳಿಗೆ ಸರ್ಪತನ ಕಂಡಿತು.
ಲಾರ್ಡ್ಸ್ (Lords) ಮೈದಾನದಲ್ಲಿ ಟೀಮ್ ಇಂಡಿಯಾ (Team India) ಐತಿಹಾಸಿಕ ಜಯ ಸಾಧಿಸಿದೆ. ಇಂಗ್ಲೆಂಡ್ (England) ತಂಡವನ್ನು 2ನೇ ಟೆಸ್ಟ್ನಲ್ಲಿ 151 ರನ್ಗಳಿಂದ ಮಣಿಸಿದ ಭಾರತ ಭರ್ಜರಿ ಗೆಲುವು ದಾಖಲಿಸಿತು. ಅದರಲ್ಲೂ ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ ವೇಗಿಗಳು ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿ ಡ್ರಾದತ್ತ ಸಾಗಿದ್ದ ಪಂದ್ಯದಲ್ಲಿ ಗೆಲುವನ್ನು ಕಸಿದುಕೊಂಡರು ಎಂದೇ ಹೇಳಬಹುದು. ಈ ಭರ್ಜರಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರ ಸಂಭ್ರಮ-ಸಂತಸ ಕ್ಷಣಗಳ ಡ್ರೆಸಿಂಗ್ ರೂಮ್ ವಿಡಿಯೋವನ್ನು ಬಿಸಿಸಿಐ (BCCI) ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಆಟಗಾರರು ಗೆಲುವಿನ ಕುರಿತಾದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆ ಡ್ರೆಸಿಂಗ್ ರೂಮ್ನಲ್ಲಿ (Team India Dressing Room) ಭರ್ಜರಿಯಾಗಿ ವಿಜಯೋತ್ಸವವನ್ನು ಆಚರಿಸಿಕೊಂಡಿದ್ದಾರೆ.
ಈ ಗೆಲುವಿನ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ (Virat Kohli), ನಿಜವಾಗಿಯೂ ನಾನು ಈ ಗೆಲುವಿಗೆ ಹೆಮ್ಮೆಪಡುತ್ತೇನೆ. ನಾನು ವಿದೇಶಿ ಪಿಚ್ನಲ್ಲಿ ಕೆಲವೇ ಕೆಲವು ಅದ್ಭುತ ಗೆಲುವುಗಳನ್ನು ಸಾಧಿಸಿದ್ದೇವೆ. ಆದರೆ ನಮ್ಮ ತಂಡದ ನಂಬಿಕೆ ಮತ್ತು ಪ್ರತಿಯೊಬ್ಬರ ಆಟಗಾರರ ಕಾಣಿಕೆಯಿಂದಲೇ ಈ ಗೆಲುವು ದಕ್ಕಿದೆ. ಇದುವೇ ನಮ್ಮ ತಂಡದ ವಿಶೇಷ ಎಂದು ಕ್ಯಾಪ್ಟನ್ ಕಿಂಗ್ ಹೇಳಿದ್ದಾರೆ.
ನಾವು ಆಡಿದ ರೀತಿ ಮತ್ತು ನಾವು ಮರಳಿ ಬಂದ ರೀತಿ, ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ನೀಡಿದ ಪ್ರದರ್ಶನ ಎಲ್ಲವೂ ಅದ್ಭುತವಾಗಿತ್ತು. ಇದು ನಿಜವಾಗಿಯೂ ನಮಗೆ ತುಂಬಾ ಅರ್ಥಪೂರ್ಣ ಗೆಲುವಾಗಿದೆ ಎಂದು 2ನೇ ಇನಿಂಗ್ಸ್ನಲ್ಲಿ 61 ರನ್ಗಳ ಕಾಣಿಕೆ ನೀಡಿದ್ದ ಅಜಿಂಕ್ಯ ರಹಾನೆ (Ajinkya Rahane) ತಿಳಿಸಿದರು.
ಇದೇ ವೇಳೆ ಮಾತನಾಡಿದ ರೋಹಿತ್ ಶರ್ಮಾ (Rohit Sharma), ಒಬ್ಬ ಅಥವಾ ಇಬ್ಬರು ವ್ಯಕ್ತಿಗಳಿಂದಲ್ಲ. ತಂಡದ ಹನ್ನೊಂದು ಮಂದಿ ವಿವಿಧ ಹಂತಗಳಲ್ಲಿ ಒಗ್ಗಟಿನ ಪ್ರದರ್ಶನ ನೀಡಿದರು. ಅವರರವರ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದರು. ಇದೇ ಕಾರಣದಿಂದ ಅದ್ಭುತ ಜಯ ಲಭಿಸಿದೆ ಎಂದರು.
ಮೊದಲ ಇನ್ನಿಂಗ್ಸ್‌ನಲ್ಲಿ 129 ರ ಆಕರ್ಷಕ ಪ್ರದರ್ಶನ ನೀಡಿದ ರಾಹುಲ್ (KL Rahul) ಮಾತನಾಡಿ, ಇಂಗ್ಲೆಂಡಿಗೆ ಬಂದು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಸೂಪರ್. ಈ ವಿಶೇಷ ಗೆಲುವಿನ ಕ್ರೆಡಿಟ್ ತಂಡದ ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನು ಅದ್ಭುತವಾಗಿ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ (Mohammed Shami) ಹಾಗೂ ಮೊಹಮ್ಮದ್ ಸಿರಾಜ್ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಭಾರತ ನೀಡಿದ್ದ 272 ರನ್ ಗಳ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಕೇವಲ 120 ರನ್ಗಳಿಗೆ ಸರ್ಪತನ ಕಂಡಿತು. ಟೀಮ್ ಇಂಡಿಯಾ ವೇಗಿಗಳಾದ ಮೊಹಮದ್ ಶಮಿ, ಜಸ್ ಪ್ರೀತ್ ಬುಮ್ರಾ ಮತ್ತು ಸಿರಾಜ್ ಬೌಲಿಂಗ್ ದಾಳಿಗೆ ಆಂಗ್ಲರ ಪೆವಿಲಿಯನ್ ಪರೇಡ್ ನಡೆಸಿದರು. ಭರ್ಜರಿ ಬೌಲಿಂಗ್ ದಾಳಿ ನಡೆಸಿದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) 4 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ 3, ಇಶಾಂತ್ ಶರ್ಮಾ 2 ಮತ್ತು ಶಮಿ 1 ವಿಕೆಟ್ ಕಬಳಿಸಿದರು. ಅಷ್ಟೇ ಅಲ್ಲದೆ ದ್ವಿತೀಯ ಇನಿಂಗ್ಸ್ನಲ್ಲಿ ಭಾರತದ ಪರ ಮೊಹಮ್ಮದ್ ಶಮಿ 56 ಹಾಗೂ ಬುಮ್ರಾ ಅವರ 34 ರನ್ಗಳಿಸಿ ನೆರವಾಗಿದ್ದರು. ಇದೀಗ ಈ ಐತಿಹಾಸಿಕ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
Reliving Lord’s triumph from the dressing room ? ?
The range of emotions, the reactions & the aura in the #TeamIndia dressing room post the historic win at the @HomeOfCricket. ? ? – by @RajalArora
Watch this special feature ? ? #ENGvINDhttps://t.co/9WFzGX4rDi pic.twitter.com/uR63cLS7j4
— BCCI (@BCCI) August 17, 2021
ಡ್ರೆಸಿಂಗ್ ರೂಮ್ನ ಸಂಪೂರ್ಣ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್ಗೆ ಅಫ್ಘಾನಿಸ್ತಾನ್ ತಂಡ ಅನುಮಾನ
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
(Team India celebrate historic win against England in dressing room)
Published On - 4:48 pm, Tue, 17 August 21