
ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ (Team India) ಯಶಸ್ವಿಯಾಗಿದೆ. ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ (Mohammad Siraj) ಹಾಗೂ ಆಕಾಶ್ ದೀಪ್ (Akash Deep) ಆಂಗ್ಲ ತಂಡವನ್ನು ಬೃಹತ್ ಸ್ಕೋರ್ ಮಾಡದಂತೆ ತಡೆದರು. ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ 19.3 ಓವರ್ ಬೌಲ್ ಮಾಡಿ 70 ರನ್ ನೀಡಿ ಪ್ರಮುಖ 6 ವಿಕೆಟ್ ಕಬಳಿಸಿದರೆ, ಆಕಾಶ್ ದೀಪ್ 20 ಓವರ್ ಬೌಲ್ ಮಾಡಿ 80 ರನ್‌ಗಳಿಗೆ 4 ವಿಕೆಟ್ ಪಡೆದರು. ಇತ್ತ ಇಂಗ್ಲೆಂಡ್ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೇಮೀ ಸ್ಮಿತ್ ಅಜೇಯ 184 ರನ್‌ಗಳ ಇನ್ನಿಂಗ್ಸ್ ಆಡಿದರೆ, ಹ್ಯಾರಿ ಬ್ರೂಕ್ ಕೂಡ 158 ರನ್ ಬಾರಿಸಿದರು.
ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರ ಮಾರಕ ಬೌಲಿಂಗ್‌ನಿಂದ ಭಾರತ, ಇಂಗ್ಲೆಂಡ್ ತಂಡವನ್ನು ಮೂರನೇ ದಿನದಾಟದ ಮೂರನೇ ಸೆಷನ್‌ನಲ್ಲಿ 407 ರನ್‌ಗಳಿಗೆ ಆಲೌಟ್ ಮಾಡಿತು. ಈ ಆಧಾರದ ಮೇಲೆ ಭಾರತ 180 ರನ್‌ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟವನ್ನು 77/3 ರೊಂದಿಗೆ ಆರಂಭಿಸಿದ ಇಂಗ್ಲೆಂಡ್, ಆರಂಭದಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಕಳೆದುಕೊಂಡಿತು. ದಿನದ ಎರಡನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್‌ಗೆ ಸತತ ಎರಡು ಹೊಡೆತ ನೀಡಿದರು. ಮೊದಲು, ಜೋ ರೂಟ್ (22) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ಸಿರಾಜ್, ಇದರ ನಂತರ ನಾಯಕ ಬೆನ್ ಸ್ಟೋಕ್ಸ್‌ರನ್ನು ಔಟ್ ಮಾಡಿದರು.
84 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಹ್ಯಾರಿ ಬ್ರೂಕ್ ಮತ್ತು ಜೇಮಿ ಸ್ಮಿತ್ ತ್ರಿಶತಕದ ಜೊತೆಯಾಟ ಕೊಂಚ ನಿರಾಳತೆ ಮೂಡಿಸಿತು. ಇಬ್ಬರ ನಡುವೆ ಆರನೇ ವಿಕೆಟ್‌ಗೆ 368 ಎಸೆತಗಳಲ್ಲಿ 303 ರನ್‌ಗಳ ಪಾಲುದಾರಿಕೆ ಇತ್ತು. ಈ ಸಮಯದಲ್ಲಿ, ಜೇಮೀ ಸ್ಮಿತ್ 80 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವನ್ನು ಪೂರೈಸಿದರೆ, ಇತ್ತ ಹ್ಯಾರಿ ಬ್ರೂಕ್ 137 ಎಸೆತಗಳಲ್ಲಿ ತಮ್ಮ ಒಂಬತ್ತನೇ ಟೆಸ್ಟ್ ಶತಕವನ್ನು ಪೂರೈಸಿದರು.
IND vs ENG: 3 ಕ್ಯಾಚ್ ಡ್ರಾಪ್, 12 ನೋ ಬಾಲ್; ತಪ್ಪು ತಿದ್ದಿಕೊಳ್ಳದ ಟೀಂ ಇಂಡಿಯಾ
ಮೂರನೇ ಸೆಷನ್‌ನಲ್ಲಿ ಆಕಾಶ್ ದೀಪ್, ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟನ್ನು ಮುರಿದರು. ಬ್ರೂಕ್ 234 ಎಸೆತಗಳಲ್ಲಿ 17 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 158 ರನ್ ಗಳಿಸಿ ಔಟಾದರು. ಅದೇ ಸಮಯದಲ್ಲಿ, ಸ್ಮಿತ್ 207 ಎಸೆತಗಳಲ್ಲಿ 21 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 184 ರನ್ ಗಳಿಸಿ ಅಜೇಯರಾಗಿ ಉಳಿದರು. ಸ್ಮಿತ್ ಹೊರತುಪಡಿಸಿ, ಆಕಾಶ್ ದೀಪ್ ಮೂರನೇ ಸೆಷನ್‌ನಲ್ಲಿ ಕ್ರಿಸ್ ವೋಕ್ಸ್ ಅವರ ವಿಕೆಟ್ ಪಡೆದರು. ಇದರ ನಂತರ ಸಿರಾಜ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್ ಮತ್ತು ಶೋಯೆಬ್ ಬಶೀರ್‌ಗೆ ಪೆವಿಲಿಯನ್‌ಗೆ ದಾರಿ ತೋರಿಸಿದರು. ಈ ಮೂವರಿಗೆ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Fri, 4 July 25