AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿಯನ್ನು ಕೈ ಬಿಟ್ಟಿಲ್ಲ, ಬಾಬರ್ ಆಝಂನ ಯಾಕೆ ಕೈ ಬಿಟ್ರಿ: ಪಾಕ್ ಆಟಗಾರನ ಪ್ರಶ್ನೆ

Babar Azam: ಬಾಬರ್ ಆಝಂ ಟೆಸ್ಟ್ ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿ ಬರೋಬ್ಬರಿ 650 ದಿನಗಳೇ ಕಳೆದಿವೆ. ಡಿಸೆಂಬರ್ 26, 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಅವರು ಕೊನೆಯ ಅರ್ಧಶತಕ ಬಾರಿಸಿದ್ದರು. ಇದಾದ ಬಳಿಕ ಟೆಸ್ಟ್​ನಲ್ಲಿ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸಿಲ್ಲ. ಹೀಗಾಗಿಯೇ ಇದೀಗ ಟೆಸ್ಟ್ ತಂಡದಿಂದ ಬಾಬರ್ ಆಝಂಗೆ ಗೇಟ್ ಪಾಸ್ ನೀಡಲಾಗಿದೆ.

ವಿರಾಟ್ ಕೊಹ್ಲಿಯನ್ನು ಕೈ ಬಿಟ್ಟಿಲ್ಲ, ಬಾಬರ್ ಆಝಂನ ಯಾಕೆ ಕೈ ಬಿಟ್ರಿ: ಪಾಕ್ ಆಟಗಾರನ ಪ್ರಶ್ನೆ
Babar Azam - Virat Kohli
ಝಾಹಿರ್ ಯೂಸುಫ್
|

Updated on: Oct 14, 2024 | 1:05 PM

Share

ಪಾಕಿಸ್ತಾನ್ ಟೆಸ್ಟ್ ತಂಡದಿಂದ ಬಾಬರ್ ಆಝಂ ಅವರನ್ನು ಕೈ ಬಿಡಲಾಗಿದೆ. ಮುಲ್ತಾನ್​ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪಾಕ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಅದಂತೆ ತಂಡದಿಂದ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ ಹಾಗೂ ನಸೀಮ್ ಶಾ ಹೊರಬಿದ್ದಿದ್ದಾರೆ.

ಇತ್ತ ಬಾಬರ್​ನನ್ನು ತಂಡದಿಂದ ಕೈ ಬಿಟ್ಟ ಬೆನ್ನಲ್ಲೇ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಸಹ ಆಟಗಾರ ಫಖರ್ ಝಮಾನ್ ಪ್ರಶ್ನಿಸಿದ್ದಾರೆ. ಅದು ಸಹ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಅನ್ನು ಪ್ರಸ್ತಾಪಿಸುವ ಮೂಲಕ ಎಂಬುದು ವಿಶೇಷ.

2020 ಮತ್ತು 2023 ರ ನಡುವೆ ವಿರಾಟ್ ಕೊಹ್ಲಿ ಕ್ರಮವಾಗಿ 19.33, 28.21 ಮತ್ತು 26.50 ರ ಸರಾಸರಿಯಲ್ಲಿ ರನ್​ ಗಳಿಸಿದ್ದರು. ಆದರೆ ಟೀಮ್ ಇಂಡಿಯಾ ಅವರನ್ನು ಬೆಂಚ್ ಕಾಯಿಸಿರಲಿಲ್ಲ. ಆದರೆ ಪಾಕ್ ತಂಡದ ಪ್ರೀಮಿಯರ್ ಬ್ಯಾಟ್ಸ್​ಮನ್​ನನ್ನು ಕಳಪೆ ಫಾರ್ಮ್ ಕಾರಣ ತಂಡದಿಂದ ಕೈ ಬಿಟ್ಟಿರುವುದು ಅಚ್ಚರಿ ಎಂದಿದ್ದಾರೆ ಫಖರ್ ಝಮಾನ್.

ಬಾಬರ್ ಆಝಂ ಪಾಕಿಸ್ತಾನ್ ತಂಡದ ಪ್ರೀಮಿಯರ್ ಬ್ಯಾಟ್ಸ್‌ಮನ್. ಪಾಕ್ ಕ್ರಿಕೆಟ್​ ಕಂಡಂತಹ ಈವರೆಗಿನ ಅತ್ಯುತ್ತಮ ಬ್ಯಾಟರ್ ಕೂಡ. ಆದರೆ ಇದೀಗ ಅವರನ್ನು ಕೈ ಬಿಟ್ಟಿರುವುದರಿಂದ ಇಡೀ ತಂಡಕ್ಕೆ ನಕಾರಾತ್ಮಕ ಸಂದೇಶವನ್ನು ಕಳುಹಿಸಿದಂತಾಗಿದೆ. ಇಲ್ಲಿ ಭಯ ಹುಟ್ಟಿಸುವುದನ್ನು ತಪ್ಪಿಸಲು ಇನ್ನೂ ಸಹ ಸಮಯವಿದೆ. ನಮ್ಮ ಪ್ರಮುಖ ಆಟಗಾರರನ್ನು ದುರ್ಬಲಗೊಳಿಸುವ ಬದಲು ಅವರನ್ನು ರಕ್ಷಿಸುವತ್ತ ನಾವು ಗಮನಹರಿಸಬೇಕು ಎಂದು ಫಖರ್ ಝಮಾನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಾಬರ್ ಆಝಂರನ್ನು ಕೈ ಬಿಟ್ಟಿರುವುದೇಕೆ?

ಕಳಪೆ ಫಾರ್ಮ್​ನಲ್ಲಿರುವ ಬಾಬರ್ ಆಝಂ ಟೆಸ್ಟ್ ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿ 2 ವರ್ಷಗಳೇ ಕಳೆದಿವೆ. ಅದರಲ್ಲೂ ರನ್​ ಮಳೆಯೇ ಹರಿದಿರುವ ಮುಲ್ತಾನ್ ಟೆಸ್ಟ್​ನಲ್ಲಿ ಬಾಬರ್ ಕಲೆಹಾಕಿದ್ದು ಕೇವಲ 35 ರನ್​ಗಳು ಮಾತ್ರ. ಹೀಗಾಗಿಯೇ ಅವರನ್ನು ತಂಡದಿಂದ ಕೈ ಬಿಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಹೊಸ ಆಯ್ಕೆ ಸಮಿತಿ ನಿರ್ಧರಿಸಿದೆ.

ಕಳೆದ 18 ಇನಿಂಗ್ಸ್​ಗಳಿಂದ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗದ ಬಾಬರ್ ಆಝಂ ಅವರನ್ನು ತಂಡದಲ್ಲಿ ಮುಂದುವರೆಸುವುದು ಸೂಕ್ತವಲ್ಲ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಬಾಬರ್ ಆಝಂ ಅವರನ್ನು ಕೈಬಿಡುವಂತೆ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಬಾಬರ್ ಆಝಂ ಅವರನ್ನು ಹೊರಗಿಡಲಾಗಿದೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಮುಂದಿದೆ ಮೂರು ಭರ್ಜರಿ ದಾಖಲೆಗಳು

ಪಾಕಿಸ್ತಾನ್ ಟೆಸ್ಟ್ ತಂಡ: ಶಾನ್ ಮಸೂದ್ (ನಾಯಕ), ಸೌದ್ ಶಕೀಲ್ (ಉಪನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಹಸೀಬುಲ್ಲಾ, ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮೀರ್ ಹಮ್ಝ, ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಝ್ವಾನ್, ನೋಮನ್ ಅಲಿ, ಸೈಮ್ ಅಯ್ಯೂಬ್, ಸಾಜಿದ್ ಖಾನ್, ಸಲ್ಮಾನ್ ಅಘಾ ಮತ್ತು ಝಾಹಿದ್ ಮಹಮೂದ್.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ