IND vs NZ: 2,52,0,8..; ನಾಯಕನ ಜವಬ್ದಾರಿ ಮರೆತ ರೋಹಿತ್ ಶರ್ಮಾ

Rohit Sharma: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿದೆ. ಅವರ ಕಳಪೆ ಪ್ರದರ್ಶನವು ತಂಡದ ಸೋಲಿಗೆ ಕಾರಣವಾಗಿದೆ. ರೋಹಿತ್ ಶರ್ಮಾ ಅವರ ಇತ್ತೀಚಿನ 8 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೇವಲ 104 ರನ್ ಗಳಿಸಿದ್ದು, ಅವರ ಕಳಪೆ ಫಾರ್ಮ್‌ ಅನ್ನು ತೋರಿಸುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ಅವರು ಫಾರ್ಮ್​ಗೆ ಮರಳುವುದು ಅತ್ಯಂತ ಮುಖ್ಯವಾಗಿದೆ.

IND vs NZ: 2,52,0,8..; ನಾಯಕನ ಜವಬ್ದಾರಿ ಮರೆತ ರೋಹಿತ್ ಶರ್ಮಾ
ರೋಹಿತ್ ಶರ್ಮಾ
Follow us
|

Updated on:Oct 26, 2024 | 3:55 PM

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಸೋಲುವ ಆತಂಕ ಟೀಂ ಇಂಡಿಯಾಕ್ಕೆ ಎದುರಾಗಿದೆ. ಇದಕ್ಕೆ ಪ್ರಮುಖ ಕಾರಣ ತಂಡದ ಬ್ಯಾಟಿಂಗ್‌ ವೈಫಲ್ಯ. ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ಬ್ಯಾಟಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಬಹಳ ದಿನಗಳಿಂದ ಟೆಸ್ಟ್ ಕ್ರಿಕೆಟ್​ನಲ್ಲಿ ರನ್ ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮಾ, ಕಿವೀಸ್ ವಿರುದ್ಧದ ಎರಡನೇ ಟೆಸ್ಟ್​ನ ಎರಡನೇ ಇನಿಂಗ್ಸ್​ನಲ್ಲೂ ಬಹುಬೇಗನೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರೋಹಿತ್ ಎರಡನೇ ಇನ್ನಿಂಗ್ಸ್‌ನಲ್ಲಿ 16 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮತ್ತೊಮ್ಮೆ ರೋಹಿತ್ ಶರ್ಮಾ ಅವರ ಬ್ಯಾಟ್ ಮೌನಕ್ಕೆ ಶರಣಾಯಿತು. ಇದು ಮಾತ್ರವಲ್ಲ ರೋಹಿತ್ ಶರ್ಮಾ ಇಡೀ ಸರಣಿಯಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವುದನ್ನು ಕಾಣಬಹುದಾಗಿದೆ.

ಕೊನೆಯ 8 ಇನ್ನಿಂಗ್ಸ್‌ಗಳಲ್ಲಿ 14 ರ ಸರಾಸರಿ

ರೋಹಿತ್ ಶರ್ಮಾ ಅವರ ಕೊನೆಯ 8 ಟೆಸ್ಟ್ ಇನ್ನಿಂಗ್ಸ್‌ಗಳನ್ನು ನೋಡಿದರೆ, ಅವರು ರನ್ ಬರ ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ಕಳೆದ 8 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ ರೋಹಿತ್ 14ರ ಸರಾಸರಿಯಲ್ಲಿ ಕೇವಲ 104 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್‌ನ ಪರಿಣಾಮವನ್ನು ಟೀಂ ಇಂಡಿಯಾ ಅನುಭವಿಸಬೇಕಾಯಿತು. ಇದೀಗ ಎರಡನೇ ಟೆಸ್ಟ್‌ನಲ್ಲಿ 359 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿರುವುದು ಕೂಡ ರೋಹಿತ್ ಅವರ ಕಳಪೆ ಬ್ಯಾಟಿಂಗ್​ನಿಂದ.

ಕಿವೀಸ್ ವಿರುದ್ಧವೂ ಸಪ್ಪೆ ಪ್ರದರ್ಶನ

ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಬ್ಯಾಟ್ ಮೌನವಾಗಿದ್ದು ತಂಡಕ್ಕೆ ತಲೆನೋವು ತಂದಿದೆ. ಪುಣೆ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ಎಸೆತಗಳನ್ನು ಆಡಿದ ರೋಹಿತ್ ಖಾತೆ ತೆರೆಯದೆ ಔಟಾಗಿದ್ದರು. ಇದೀಗ 8 ರನ್​ಗಳಿಗೆ ಸುಸ್ತಾಗಿದ್ದಾರೆ. ಪ್ರಸಕ್ತ ಸರಣಿಯಲ್ಲಿ ರೋಹಿತ್ ಆಡಿರುವ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 15.50ರ ಸರಾಸರಿಯಲ್ಲಿ 62 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಬೆಂಗಳೂರು ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ 52 ರನ್‌ಗಳ ಇನ್ನಿಂಗ್ಸ್ ಆಡಿದನ್ನು ಹೊರತುಪಡಿಸಿ ಅವರ ಬ್ಯಾಟ್ ಮೂರು ಇನ್ನಿಂಗ್ಸ್‌ಗಳಲ್ಲಿ ಮೌನವಾಗಿತ್ತು.

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಫಾರ್ಮ್​ ಕಂಡುಕೊಳ್ಳಬೇಕು

ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ರೋಹಿತ್ ಮುಂದಿನ ತಿಂಗಳಿನಿಂದ ಕಾಂಗರೂ ತಂಡದ ವಿರುದ್ಧ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಡಬೇಕಾಗಿದೆ. ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಹ್ಯಾಟ್ರಿಕ್ ಸಾಧನೆಯ ಮೇಲೆ ಕಣ್ಣಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ನಾಯಕ ಫಾರ್ಮ್‌ಗೆ ಮರಳುವುದು ಅನಿವಾರ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Sat, 26 October 24

ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
ಬೇರೆ ಜಿಲ್ಲೆಯ ಕುಮಾರಸ್ವಾಮಿ ಮಂಡ್ಯದಿಂದ ಯಾಕೆ ಸ್ಪರ್ಧಿಸುತ್ತಾರೆ: ಗೌಡ
ಬೇರೆ ಜಿಲ್ಲೆಯ ಕುಮಾರಸ್ವಾಮಿ ಮಂಡ್ಯದಿಂದ ಯಾಕೆ ಸ್ಪರ್ಧಿಸುತ್ತಾರೆ: ಗೌಡ
ಮಂಡ್ಯ ಜನ ಗಂಡಸರಾಗ್ರಪ್ಪ, ಕೈಗೆ ಬಳೆ‌ ತೊಟ್ಟುಕೊಳ್ಳಬೇಡಿ ಎಂದ ಶಿವರಾಮೇಗೌಡ
ಮಂಡ್ಯ ಜನ ಗಂಡಸರಾಗ್ರಪ್ಪ, ಕೈಗೆ ಬಳೆ‌ ತೊಟ್ಟುಕೊಳ್ಳಬೇಡಿ ಎಂದ ಶಿವರಾಮೇಗೌಡ