ಏಕದಿನ ಸರಣಿಯಲ್ಲಿ ಕೀರೊನ್ ಪೊಲಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವನ್ನು ವೈಟ್ವಾಷ್ ಮಾಡಿ ಮೆರೆದಿದ್ದ ಭಾರತ (India vs West Indies) ಇದೀಗ ಬಹುನಿರೀಕ್ಷಿತ ಟಿ20 ಸರಣಿಗೆ ಸಜ್ಜಾಗುತ್ತಿದೆ. ಬುಧವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಇರುವುದರಿಂದ ಈ ಸರಣಿ ಟೀಮ್ ಇಂಡಿಯಾಕ್ಕೆ (Team India) ಮಹತ್ವದ್ದಾಗಿದ್ದು, ಈಗಿನಿಂದಲೇ ತಯಾರಿ ಆರಂಭಿಸಬೇಕಿದೆ. ಹೀಗಾಗಿ ಮೊದಲ ಟಿ20ಯ ಪ್ಲೇಯಿಂಗ್ ಇಲೆವೆನ್ ಮೇಲೆ ಎಲ್ಲರ ಕಣ್ಣಿದೆ. ಪ್ರಮುಖವಾಗಿ ಪ್ಲೇಯಿಂಗ್ XI (India’s Playing XI) ಬಗ್ಗೆ ಮೂರು ಪ್ರಶ್ನೆಗಳು ಎದ್ದಿವೆ. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು?, ರುತುರಾಜ್ ಗಾಯಕ್ವಾಡ್ ಮತ್ತು ಆವೇಶ್ ಖಾನ್ ಇನ್ನೆಷ್ಟು ಸಮಯ ಬೆಂಚ್ ಕಾಯಬೇಕು?, ಭಾರತದ ಬೌಲಿಂಗ್ ಕಾಂಬಿನೇಷನ್ ಏನು? ಎಂಬ ಪ್ರಶ್ನೆ ಎಲ್ಲರ ಮುಂದಿದೆ.
ರೋಹಿತ್ ಜೊತೆ ಯಾರು ಕಣಕ್ಕೆ?:
ಕೆಎಲ್ ರಾಹುಲ್ ಹ್ಯಾಮ್‌ಸ್ಟ್ರಿಂಗ್ ಇಂಜುರಿಯಿಂದಾಗಿ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬುದು ಯಕ್ಷ ಪ್ರಶ್ನೆ. ಟಿ20 ವಿಶ್ವಕಪ್ ದೃಷ್ಟಿಯಿಂದ ಬ್ಯಾಕಪ್ ಓಪನರ್ ಕೂಡ ಭಾರತಕ್ಕೆ ಅಗತ್ಯವಿದೆ. ಈ ಸಮಸ್ಯೆಗೆ ಈಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕಿದೆ. ಸದ್ಯಕ್ಕೆ ರೋಹಿತ್ ಜೊತೆಯಿರುವ ಆಯ್ಕೆ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್. ಈ ಹಿಂದೆ ಕಿಶನ್ ಆರಂಭಿಕನಾಗಿ ಆಡಿದ್ದರು. ಆದರೆ, ಇತ್ತ ರುತುರಾಜ್ ಸರಣಿಗೆ ಆಯ್ಕೆಯಾಗುತ್ತಿದ್ದರೂ ಅವಕಾಶ ಸಿಗದೆ ಬೆಂಚ್ ಕಾಯುತ್ತಿದ್ದಾರೆ.
ಭಾರತದ ಬೌಲಿಂಗ್ ಪಡೆ ಕೂಡ ಬಲಿಷ್ಠವಾಗಿದ್ದು ಬೌಲರ್ಗಳಂತು ಅವಕಾಶಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಸದ್ಯಕ್ಕೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಪಡೆ ಮತ್ತೊಂದೆಡೆ ಇದೆ. ಇದರ ನಡುವೆ ಹರ್ಷಲ್ ಪಟೇಲ್, ಆವೇಶ್ ಖಾನ್, ರವಿ ಬಿಷ್ಟೋಯ್ ಯಂತಹ ಪ್ರತಿಭಾನ್ವಿತ ಆಟಗಾರರಿಗೇ ಅವಕಾಶವೇ ಇಲ್ಲದಂತಾಗಿದೆ.
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈ ಬಾರಿ ತನ್ನ ಯೋಚನೆಯನ್ನು ಬದಲಾಯಿಸಿ ಮತ್ತೊಂದು ಪ್ರಯೋಗಕ್ಕೆ ಮುಂದಾಗುತ್ತಾ ಎಂಬುದು ಕುತೂಹಲ. ಅವಕಾಶಕ್ಕಾಗಿ ಕಾಯುತ್ತಿರುವ ರುತುರಾಜ್ ಗಾಯಕ್ವಾಡ್, ಆವೇಶ್ ಖಾನ್, ಹರ್ಷಲ್ ಪಟೇಲ್, ರವಿ ಬಿಷ್ಟೋಯ್ಗೆ ಚಾನ್ಸ್ ನೀಡ್ತಾರ ಎಂಬುದುನ್ನು ನೋಡಬೇಕಿದೆ. ಬಿಷ್ಟೋಯಿ ಮತ್ತು ಆವೇಶ್ ಖಾನ್ಗೆ ಅವಕಾಶ ನೀಡಿದರೆ ಇವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ಕುಲ್ದೀಪ್ ಯಾದವ್ ಕೂಡ ಮತ್ತೊಂದೆಡೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ದೀಪಕ್ ಕೂಡ ನಡುವೆಯೂ ಆಲ್ರೌಂಡರ್ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದೆ.
ಹಾಗಾದ್ರೆ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.
ರೋಹಿತ್ ಶರ್ಮಾ, ಇಶಾನ್ ಕಿಶನ್/ ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದೀಪಕ್ ಹೂಡ, ದೀಪಕ್ ಚಹರ್/ ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್/ ಆವೇಶ್ ಖಾನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್/ ರವಿ ಬಿಷ್ಟೋಯ್.
IND vs WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತದ ಉಪ ನಾಯಕನ ಘೋಷಣೆ: ಯಾರು ಗೊತ್ತೇ?