India’s predicted XI: ವಿನ್ನಿಂಗ್ ಕಾಂಬಿನೇಷನ್ ಬದಲಾವಣೆ ಖಚಿತ: 2ನೇ ಟೆಸ್ಟ್​ನಿಂದ ಮೂವರು ಆಟಗಾರರು ಹೊರಕ್ಕೆ?

| Updated By: Vinay Bhat

Updated on: Jan 03, 2022 | 10:39 AM

India vs South Africa, 2nd Test: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದಲ್ಲಿ ಅಶ್ವಿನ್ ಆಡುವರೇ ಅಥವಾ ಹೆಚ್ಚುವರಿ ಬ್ಯಾಟರ್ ಆಗಿ ಹನುಮ ವಿಹಾರಿ 7ನೇ ಕ್ರಮಾಂಕದಲ್ಲಿ ಅವಕಾಶ ಪಡೆಯುವರೇ ಎಂಬ ನೋಡಬೇಕಿದೆ. ವೇಗಿಗಳಿಗೆ ಹೆಚ್ಚು ನೆರವಾಗು ಕಾರಣ ಉಮೇಶ್ ಯಾದವ್ ಕಣಕ್ಕಿಳಿಯಬಹುದು.

Indias predicted XI: ವಿನ್ನಿಂಗ್ ಕಾಂಬಿನೇಷನ್ ಬದಲಾವಣೆ ಖಚಿತ: 2ನೇ ಟೆಸ್ಟ್​ನಿಂದ ಮೂವರು ಆಟಗಾರರು ಹೊರಕ್ಕೆ?
India Playing XI vs SA
Follow us on

ಸೌತ್ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ವಿಶ್ವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ (Indian Cricket Team) ಸದ್ಯ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದಿನಿಂದ ಜೋಹನ್ಸ್‌ ಬರ್ಗ್​​ನ ವಂಡರರ್ಸ್‌ ಸ್ಟೇಡಿಯಂನಲ್ಲಿ (Johannesburg, Wanderers) ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಲಿದೆ. ಹರಿಣಗಳ ನಾಡಲ್ಲಿ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದ್ದು, ಈ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದರೆ ಇತಿಹಾಸ ನಿರ್ಮಾಣವಾಗಲಿದೆ. ಹೀಗಾಗಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಭಾರತ ಯೋಚಿಸಿದೆ. ಫಾರ್ಮ್​ನಲ್ಲಿ ಇಲ್ಲದವರನ್ನು ಕೈಬಿಡುವ ಸಾಧ್ಯತೆ ಕೂಡ ಇದೆ. ಓರ್ವ ಹೆಚ್ಚುವರಿ ವೇಗಿ ತಂಡ ಸೇರಿಕೊಳ್ಳಬಹುದು. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ (India Playing XI vs SA) ಅನ್ನು ನೋಡುವುದಾದರೆ…

ಮೊದಲ ಟೆಸ್ಟ್ ಪಂದ್ಯದಲ್ಲಿ ಉಪ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಅದರಲ್ಲೂ ರಾಹುಲ್ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ಈ ಜೋಡಿ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದ್ದೇ ಟೀಮ್ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿದೆ. ಅನೇಕ ಪಂದ್ಯಗಳಿಂದ ಸತತ ಅವಕಾಶ ನೀಡುತ್ತಿದ್ದರೂ ಚೇತೇಶ್ವರ್ ಪೂಜಾರ ಎಲ್ಲ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಅತ್ಯಂತ ಕಳಪೆ ಫಾರ್ಮ್​ನಲ್ಲಿರುವ ಪೂಜಾರ ಸ್ಥಾನ ಈಗ ತೂಗುಯ್ಯಾಲೆಯಲ್ಲಿದೆ.

ಫಾರ್ಮ್​ ಸಮಸ್ಯೆ ಎದುರಿಸುತ್ತಿರುವ ಪೂಜಾರ ಎರಡನೇ ಟೆಸ್ಟ್​ನಲ್ಲಿ ಅವಕಾಶ ಪಡೆಯುವುದು ಅನುಮಾನ. ಹೀಗಾಗಿ ಇವರ ಬದಲು ಹೊಸ ಬ್ಯಾಟರ್ ಪ್ರಿಯಾಂಕ್ ಪಂಚಲ್​ಗೆ ಅವಕಾಶ ನೀಡಿದರೆ ಅಚ್ಚರಿಯಿಲ್ಲ. ಉಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಅಜಿಂಕ್ಯಾ ರಹಾನೆ ನಿರೀಕ್ಷೆ ಮೂಡಿಸಿದ್ದು ಮತ್ತೊಂದು ಅವಕಾಶ ಪಡೆಯಬಹುದು. ವಿಕೆಟ್ ಕೀಪರ್ ಜವಾಬ್ದಾರಿ ರಿಷಭ್ ಪಂತ್ ವಹಿಸಲಿದ್ದಾರೆ.

ಸೆಂಚುರಿಯನ್ ಟೆಸ್ಟ್‌ನ ಕೊನೇ 2 ವಿಕೆಟ್ ಕಬಳಿಸಿದ್ದು ಹೊರತಾಗಿ ಸ್ಪಿನ್ನರ್ ಆರ್. ಅಶ್ವಿನ್ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಅಶ್ವಿನ್ ಆಡುವರೇ ಅಥವಾ ಹೆಚ್ಚುವರಿ ಬ್ಯಾಟರ್ ಆಗಿ ಹನುಮ ವಿಹಾರಿ 7ನೇ ಕ್ರಮಾಂಕದಲ್ಲಿ ಅವಕಾಶ ಪಡೆಯುವರೇ ಎಂಬ ನೋಡಬೇಕಿದೆ. ವೇಗಿಗಳಿಗೆ ಹೆಚ್ಚು ನೆರವಾಗು ಕಾರಣ ಉಮೇಶ್ ಯಾದವ್ ಅವರನ್ನು ದ್ರಾವಿಡ್-ಕೊಹ್ಲಿ ಕಣಕ್ಕಿಳಿಸಬಹುದು. ಹೀಗಾಗಿ ಶಾರ್ದೂಲ್ ಠಾಕೂರ್ ಹೊರಗುಳಿಯಬಹುದು. ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇರಲಿದ್ದಾರೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ/ ಪ್ರಿಯಾಂಕ್ ಪಂಚಲ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್/ಹನುಮಾ ವಿಹಾರಿ, ಶಾರ್ದೂಲ್ ಠಾಕೂರ್/ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್ ಸಿರಾಜ್.

Rahul Dravid: ಕೊಹ್ಲಿ, ರಾಹುಲ್ ಅಲ್ಲ: ಈ ಬ್ಯಾಟರ್ ಅಬ್ಬರಿಸಿದರೆ ಭಾರತಕ್ಕೆ ಗೆಲುವು ಖಚಿತ ಎಂದ ದ್ರಾವಿಡ್

India vs South Africa: ಎರಡನೇ ಟೆಸ್ಟ್ ಆರಂಭಕ್ಕೆ ಇದೆಯೇ ಮಳೆಯ ಕಾಟ?: ಜೋಹನ್ಸ್​​ಬರ್ಗ್​​ ವಾತಾವರಣ ಹೇಗಿದೆ?

(India predicted XI vs South Africa 2nd Test Ashwin might be bench India includes Umesh Yadav)