IND vs SA 2nd Test prediction: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ನಲ್ಲೂ ಭಾರತಕ್ಕೇ ಗೆಲುವು: ಅದು ಹೇಗೆ ಗೊತ್ತೇ?

South Africa vs India: ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡೂ ತಂಡಗಳಲ್ಲೂ ಮಾರಕ ವೇಗಿಗಳು, ಸ್ಟಾರ್ ಬ್ಯಾಟರ್​ಗಳಿದ್ದಾರೆ. ಹೀಗಿದ್ದರೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಜಯ ಎಂದು ಹೇಳಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.

IND vs SA 2nd Test prediction: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ನಲ್ಲೂ ಭಾರತಕ್ಕೇ ಗೆಲುವು: ಅದು ಹೇಗೆ ಗೊತ್ತೇ?
South Africa vs India 2nd Test prediction
Follow us
TV9 Web
| Updated By: Vinay Bhat

Updated on: Jan 03, 2022 | 11:58 AM

ದಕ್ಷಿಣ ಆಫ್ರಿಕಾ (India vs South Africa) ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಲಿದ್ದು, ಜೋಹನ್ಸ್‌ ಬರ್ಗ್​​ನ ವಂಡರರ್ಸ್‌ ಸ್ಟೇಡಿಯಂ (Wanderers Stadium, Johannesburg) ಮತ್ತೊಂದು ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಭಾರತ ಈ ಪಂದ್ಯ ಗೆದ್ದರೆ ಹರಿಣಗಳ ನಾಡಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಾಣ ಮಾಡಲಿದೆ. ಸೆಂಚುರಿಯನ್‌ನ ಮೊದಲ ಪಂದ್ಯವನ್ನು 113 ರನ್‌ಗಳ ಅಂತರದಿಂದ ಗೆದ್ದಿರುವ ಟೀಮ್ ಇಂಡಿಯಾ (Team India) ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ವಂಡರರ್ಸ್‌ ಸ್ಟೇಡಿಯಂ ಕೂಡ ವೇಗಿಗಳಿಗೆ ಸ್ವರ್ಗವಾಗಿದ್ದು ವಿಕೆಟ್​ಗಳ ಮಳೆ ಸುರಿಯುವುದು ಖಚಿತ. ಉಭಯ ತಂಡಗಳಲ್ಲೂ ಮಾರಕ ವೇಗಿಗಳು, ಸ್ಟಾರ್ ಬ್ಯಾಟರ್​ಗಳಿದ್ದಾರೆ. ಹೀಗಿದ್ದರೂ ಈ ಪಂದ್ಯದಲ್ಲಿ ಭಾರತಕ್ಕೆ ಜಯ ಎಂದು ಹೇಳಬಹುದು.

ಹೌದು, ದಕ್ಷಿಣ ಆಫ್ರಿಕಾ ವಿರುದ್ದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಟೀಮ್‌ ಇಂಡಿಯಾ ವಿಶ್ವಾಸದಲ್ಲಿ ತೇಲುತ್ತಿದೆ. ಜೋಹನ್ಸ್‌ಬರ್ಗ್‌ನಲ್ಲಿ ಎರಡನೇ ಪಂದ್ಯ ಆಡಲಿರುವ ಭಾರತ ತಂಡ ಇಲ್ಲಿನ ಅಂಗಣದಲ್ಲಿ ಇಲ್ಲಿಯವರೆಗೂ ಸೋಲು ಅನುಭವಿಸಿಯೇ ಇಲ್ಲ ಎಂಬುದು ಗಮನಿಸಿ ಬೇಕಾದ ಸಂಗತಿ. ಇದೇ ವಿಶ್ವಾಸದಲ್ಲಿ ಟೀಮ್‌ ಇಂಡಿಯಾ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ವಂಡರ್‌ ಆಫ್ ಕ್ರಿಕೆಟ್‌ ಎನಿಸಿರುವ ಜೋಹನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ ಭಾರತದ ಪಾಲಿನ ಅದೃಷ್ಟದ ತಾಣ. 1992ರಿಂದ ಇದುವರೆಗೆ ಭಾರತ ತಂಡ ವಂಡರರ್ಸ್‌ನಲ್ಲಿ 5 ಟೆಸ್ಟ್ ಆಡಿದ್ದು, ಒಂದರಲ್ಲೂ ಸೋತಿಲ್ಲ. 2 ಗೆಲುವು ದಾಖಲಿಸಿರುವ ಭಾರತ ತಂಡ, 3 ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಜೊಹಾನ್ಸ್‌ಬರ್ಗ್ ಭಾರತ ತಂಡಕ್ಕೆ ವಿದೇಶದ ತವರು ಮೈದಾನದಂತಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಆಡಿದ 42 ಟೆಸ್ಟ್‌ ಗಳಲ್ಲಿ 18 ಜಯ ಸಾಧಿಸಿದರೂ ಭಾರತವನ್ನು ಇನ್ನೂ ಸೋಲಿಸಿಲ್ಲ ಎಂಬುದೊಂದು ಅಚ್ಚರಿ. ಜೊಹಾನ್ಸ್‌ಬರ್ಗ್‌ನಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ಟೀಮ್‌ ಇಂಡಿಯಾ ಇದನ್ನು ಮುಂದುವರಿಸುತ್ತಾ ಎಂಬುದು ನೋಡಬೇಕಿದೆ.

ಪ್ಲೇಯಿಂಗ್ XI ಬದಲಾವಣೆ?:

ಸೆಂಚುರಿಯನ್ ಟೆಸ್ಟ್‌ನ ಕೊನೇ 2 ವಿಕೆಟ್ ಕಬಳಿಸಿದ್ದು ಹೊರತಾಗಿ ಸ್ಪಿನ್ನರ್ ಆರ್. ಅಶ್ವಿನ್ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಅಶ್ವಿನ್ ಆಡುವರೇ ಅಥವಾ ಹೆಚ್ಚುವರಿ ಬ್ಯಾಟರ್ ಆಗಿ ಹನುಮ ವಿಹಾರಿ 7ನೇ ಕ್ರಮಾಂಕದಲ್ಲಿ ಅವಕಾಶ ಪಡೆಯುವರೇ ಎಂಬ ನೋಡಬೇಕಿದೆ. ವೇಗಿಗಳಿಗೆ ಹೆಚ್ಚು ನೆರವಾಗುವ ಕಾರಣ ಉಮೇಶ್ ಯಾದವ್ ಅವರನ್ನು ದ್ರಾವಿಡ್-ಕೊಹ್ಲಿ ಕಣಕ್ಕಿಳಿಸಬಹುದು. ಹೀಗಾಗಿ ಶಾರ್ದೂಲ್ ಠಾಕೂರ್ ಹೊರಗುಳಿಯಬಹುದು.

ಪಿಚ್ ರಿಪೋರ್ಟ್:

ವಾಂಡರರ್ಸ್ ಪಿಚ್ ಸಾಮಾನ್ಯವಾಗಿ ಬ್ಯಾಟರ್​ಗಳಿಗೆ ಹಾಗೂ ಬೌಲರ್‌ಗಳು ಇಬ್ಬರಿಗೂ ಸಹಾಯವನ್ನು ನೀಡುತ್ತದೆ. ಬ್ಯಾಟರ್​ಗಳು ಸಾಕಷ್ಟು ಏಕಾಗ್ರತೆಯ ಪ್ರದರ್ಶನ ನೀಡಿದರೆ ಇಲ್ಲಿ ರನ್‌ಗಳನ್ನು ಗಳಿಸಬಹುದು. ಅಲ್ಲದೆ ಪಿಚ್ ಉತ್ತಮ ಬೌನ್ಸ್ ಹೊಂದಿರುವ ಕಾರಣದಿಂದಾಗಿ ಯಶಸ್ಸು ಪಡೆಯುವ ಸಾಧ್ಯವಿದೆ.

India’s predicted XI: ವಿನ್ನಿಂಗ್ ಕಾಂಬಿನೇಷನ್ ಬದಲಾವಣೆ ಖಚಿತ: 2ನೇ ಟೆಸ್ಟ್​ನಿಂದ ಮೂವರು ಆಟಗಾರರು ಹೊರಕ್ಕೆ?

Mohammad Hafeez Retires: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ಹಫೀಜ್

(South Africa vs India 2nd Test prediction Who will win India vs South Africa 2nd Test Match at Johannesburg)

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ