India Squad: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಸಂಭಾವ್ಯ ತಂಡ ಹೀಗಿದೆ

| Updated By: ಝಾಹಿರ್ ಯೂಸುಫ್

Updated on: Sep 12, 2022 | 5:59 PM

India Squad For T20 World Cup 2022: ಈ ಪಟ್ಟಿಯಲ್ಲಿ ಆಲ್​ರೌಂಡರ್​ಗಳಾಗಿ ದೀಪಕ್ ಹೂಡ ಹಾಗೂ ಅಕ್ಷರ್ ಪಟೇಲ್ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಇವರಿಬ್ಬರೂ ಕೂಡ 18 ಸದಸ್ಯರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

India Squad: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಸಂಭಾವ್ಯ ತಂಡ ಹೀಗಿದೆ
Team India
Follow us on

ಏಷ್ಯಾಕಪ್ ಮುಕ್ತಾಯಕೊಂಡಿದೆ. ಇನ್ನು ಟೀಮ್ ಇಂಡಿಯಾ (Team India) ಮುಂದಿರುವುದು ಟಿ20 ವಿಶ್ವಕಪ್​. ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಶುರುವಾಗಲಿರುವ ಈ ಟೂರ್ನಿಗೂ ಮುನ್ನ ಭಾರತ ತಂಡ 2 ಸರಣಿಗಳನ್ನೂ ಕೂಡ ಆಡಲಿರುವುದು ವಿಶೇಷ. ಅಂದರೆ ಇದೇ ತಿಂಗಳು ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿ ಆಡಲಿದೆ. ಇದರ ಬೆನ್ನಲ್ಲೇ ಸೌತ್ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿದೆ. ಈ ಎರಡೂ ಸರಣಿಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಅದರಲ್ಲೂ ಟಿ20 ವಿಶ್ವಕಪ್​ನ ಪೂರ್ವ ತಯಾರಿಗಾಗಿ ಈ ಸರಣಿಗಳನ್ನು ಆಯೋಜಿಸಲಾಗುತ್ತಿದೆ. ಹೀಗಾಗಿಯೇ ಈ ಸರಣಿಗೆ ಆಯ್ಕೆಯಾಗುವ ಟಿ20 ತಂಡವೇ ( India Squad For T20 World Cup 2022) ಟಿ20 ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಲಿದೆ.

ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದ ಆಯ್ಕೆಗೆ ಸಭೆ ಸೇರಿದ್ದಾರೆ. ಅಲ್ಲದೆ ಈಗಾಗಲೇ ಬಹುತೇಕ ಆಟಗಾರರು ಫಿಕ್ಸ್​ ಆಗಿದ್ದಾರೆ. ಅಂದರೆ ಈ ಬಾರಿ ಏಷ್ಯಾಕಪ್​ಗೆ ಆಯ್ಕೆಯಾಗಿದ್ದ ಬಹುತೇಕ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯಲಿದ್ದಾರೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಶೇ.95 ರಷ್ಟು ತಂಡ ಫಿಕ್ಸ್ ಆಗಿದೆ ಎಂದಿದ್ದರು.

ಇದಾಗ್ಯೂ ಜಸ್​ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ವಾಪಸಾತಿಯಿಂದ ತಂಡದಲ್ಲಿ ಮಹತ್ವದ ಬದಲಾವಣೆಯಂತು ಆಗಲಿದೆ. ಹಾಗೆಯೇ ರವೀಂದ್ರ ಜಡೇಜಾ ಗಾಯಗೊಂಡಿರುವ ಕಾರಣ ತಂಡದಲ್ಲಿ ಮತ್ತೋರ್ವ ಆಲ್​ರೌಂಡರ್ ಸ್ಥಾನ ಪಡೆಯಲಿದ್ದಾರೆ. ಅಂದರೆ ಮೂರು ಬದಲಾವಣೆ ಖಚಿತ ಎಂದೇ ಹೇಳಬಹುದು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಮುಂಬರುವ 2 ಸರಣಿಗಳಿಗೆ ಒಟ್ಟು 18 ಸದಸ್ಯರ ತಂಡವನ್ನು ಈ ಬಾರಿ ಆಯ್ಕೆ ಮಾಡಲಿದ್ದಾರೆ. ಇವರಲ್ಲಿ 15 ಸದಸ್ಯರನ್ನು ಟಿ20 ವಿಶ್ವಕಪ್​ನಲ್ಲಿ ಆಯ್ಕೆ ಮಾಡಲಿದ್ದು, ಮೂವರನ್ನು ಮೀಸಲು ಆಟಗಾರರನ್ನಾಗಿರಿಸಲಿದೆ.

ಅದರಂತೆ ಟೀಮ್ ಇಂಡಿಯಾದ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ಆಲ್​ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುವುದು ಖಚಿತ.

ಇನ್ನು ವಿಕೆಟ್​ ಕೀಪರ್​ಗಳಾಗಿ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್​ಗೆ ಆಯ್ಕೆಯಾಗಬಹುದು. ಹಾಗೆಯೇ ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಹಾಗೂ ಭುವನೇಶ್ವರ್ ಕುಮಾರ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಅಲ್ಲದೆ ಹೆಚ್ಚುವರಿ ವೇಗಿಗಳಾಗಿ ಅರ್ಷದೀಪ್ ಸಿಂಗ್ ಹಾಗೂ ದೀಪಕ್ ಚಹರ್ ತಂಡದಲ್ಲಿರಲಿದ್ದಾರೆ. ಇದಾಗ್ಯೂ ರವೀಂದ್ರ ಜಡೇಜಾ ಬದಲಿಗೆ ತಂಡಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದೇ ಪ್ರಶ್ನೆ.

ಈ ಪಟ್ಟಿಯಲ್ಲಿ ಆಲ್​ರೌಂಡರ್​ಗಳಾಗಿ ದೀಪಕ್ ಹೂಡ ಹಾಗೂ ಅಕ್ಷರ್ ಪಟೇಲ್ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಇವರಿಬ್ಬರೂ ಕೂಡ 18 ಸದಸ್ಯರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಟಿ20 ವಿಶ್ವಕಪ್ ತಂಡ ಹೀಗಿದೆ.

  1. ರೋಹಿತ್ ಶರ್ಮಾ (ನಾಯಕ)
  2. ಕೆಎಲ್ ರಾಹುಲ್
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ಹಾರ್ದಿಕ್ ಪಾಂಡ್ಯ
  6. ರಿಷಭ್ ಪಂತ್ (ವಿಕೆಟ್ ಕೀಪರ್)
  7. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
  8. ಯುಜ್ವೇಂದ್ರ ಚಾಹಲ್
  9. ಭುವನೇಶ್ವರ್ ಕುಮಾರ್
  10. ಜಸ್ಪ್ರೀತ್ ಬುಮ್ರಾ
  11. ಹರ್ಷಲ್ ಪಟೇಲ್
  12. ಅರ್ಶ್ದೀಪ್ ಸಿಂಗ್
  13. ದೀಪಕ್ ಚಹಾರ್
  14. ಅಕ್ಷರ್ ಪಟೇಲ್
  15. ದೀಪಕ್ ಹೂಡಾ
  16. ರವಿ ಬಿಷ್ಣೋಯ್
  17. ರವಿಚಂದ್ರನ್ ಅಶ್ವಿನ್.
  18. ಶ್ರೇಯಸ್ ಅಯ್ಯರ್.
  19. ಮೊಹಮ್ಮದ್ ಶಮಿ

 

 

 

Published On - 3:53 pm, Mon, 12 September 22